ETV Bharat / entertainment

ಆದಿತ್ಯ ಅನನ್ಯಾ ಡಿನ್ನರ್ ಡೇಟ್: ಫೋಟೋ, ವಿಡಿಯೋಗಳು ವೈರಲ್​! - ಆದಿತ್ಯ ಅನನ್ಯಾ ಫೋಟೋ

ಆದಿತ್ಯ ರಾಯ್ ಕಪೂರ್ ಹಾಗೂ ಅನನ್ಯಾ ಪಾಂಡೆ ಡಿನ್ನರ್ ಡೇಟ್​ಗೆ ಹೋಗಿದ್ದು, ಫೋಟೋ - ವಿಡಿಯೋಗಳು ವೈರಲ್​ ಆಗಿವೆ.

Aditya Kapur and  Ananya Panday
ಆದಿತ್ಯ ರಾಯ್ ಕಪೂರ್ ಹಾಗೂ ಅನನ್ಯಾ ಪಾಂಡೆ
author img

By ETV Bharat Karnataka Team

Published : Oct 28, 2023, 11:07 AM IST

ಬಾಲಿವುಡ್‌ನ ರೂಮರ್​ ಲವ್​​ಬರ್ಡ್ಸ್ ಆದಿತ್ಯ ರಾಯ್ ಕಪೂರ್ ಹಾಗೂ ಅನನ್ಯಾ ಪಾಂಡೆ ಮತ್ತೊಮ್ಮೆ ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡಿದ್ದಾರೆ. ಇತ್ತೀಚೆಗೆ ಇಬ್ಬರೂ ಡಿನ್ನರ್ ಡೇಟ್‌ಗೆ ಹೋಗುತ್ತಿರುವುದು ಕಂಡು ಬಂದಿದೆ. ಆಶಿಕಿ 2 ನಟ ಆದಿತ್ಯ ರಾಯ್ ಕಪೂರ್ ಹಾಗೂ ಲೈಗರ್ ನಟಿ ಅನನ್ಯಾ ಪಾಂಡೆ ರೆಸ್ಟೋರೆಂಟ್‌ಗೆ ಹೋಗುವ ಮೊದಲು ಪಾಪರಾಜಿಗಳ ಕ್ಯಾಮರಾಗಳಿಗೆ ಪೋಸ್ ಕೊಟ್ಟಿದ್ದಾರೆ.

ಇಬ್ಬರೂ ಬೇರೆ ಬೇರೆಯಾಗಿ ರೆಸ್ಟೋರೆಂಟ್​ ಒಳಗೆ ಹೋಗಿದ್ದು, ಸೋಲೋ ಪೋಸ್ ಕೊಟ್ಟಿದ್ದಾರೆ. ಫೋಟೋ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಬೇರೆ ಬೇರೆಯಾಗಿ ಪೋಸ್ ಕೊಟ್ಟರೂ, ಇಬ್ಬರೂ ಒಟ್ಟಿಗೆ ಡಿನ್ನರ್ ಮಾಡಿದ್ದಾರೆ. ಇದೊಂದು ಡಿನ್ನರ್​ ಡೇಟ್​ ಎಂದು ನೆಟ್ಟಿಗರು ಊಹಿಸಿದ್ದಾರೆ.

ಡಿನ್ನರ್ ಡೇಟ್‌ಗಾಗಿ ನಟಿ ಅನನ್ಯಾ ಪಾಂಡೆ ಬ್ಯೂಟಿಫುಲ್ ಬ್ಲ್ಯಾಕ್ ಮಿನಿ ಡ್ರೆಸ್ ಧರಿಸಿದ್ದರು. ತೆರೆದ ಕೇಶರಾಶಿ, ಕನಿಷ್ಠ ಮೇಕ್ಅಪ್ ಮೂಲಕ ಆಕರ್ಷಣೀಯವಾಗಿ ಕಾಣಿಸಿಕೊಂಡಿದ್ದಾರೆ. ಮತ್ತೊಂದೆಡೆ, ನಟ ಆದಿತ್ಯ ರಾಯ್​ ಕಪೂರ್​​ ಅವರು ವದಂತಿಯ ಗೆಳತಿ ಅನನ್ಯಾ ಪಾಂಡೆ ಅವರಿಗೆ ಮ್ಯಾಚ್ ಆಗುವಂತಹ ಬ್ಲ್ಯಾಕ್​ ಟೀ ಶರ್ಟ್ ಆ್ಯಂಡ್ ಜೀನ್ಸ್ ಧರಿಸಿದ್ದರು. ಇಬ್ಬರೂ ಕ್ಯಾಮರಾ ಎದುರು ಮುಗುಳ್ನಕ್ಕು ರೆಸ್ಟೋರೆಂಟ್ ಪ್ರವೇಶಿಸಿದರು. ಇಬ್ಬರೂ ಬೇರೆ ಬೇರೆಯಾಗಿ ರೆಸ್ಟೋರೆಂಟ್​ಗೆ ಎಂಟ್ರಿ ಕೊಟ್ಟರು.

ಕೆಲ ದಿನಗಳ ಹಿಂದೆ 'ಥ್ಯಾಂಕ್ ಯೂ ಫಾರ್ ಕಮಿಂಗ್' ಸಿನಿಮಾ ಪ್ರದರ್ಶನದಲ್ಲೂ ಈ ವದಂತಿಯ ಜೋಡಿ ಒಟ್ಟಿಗೆ ಕಾಣಿಸಿಕೊಂಡಿತ್ತು. ಇನ್‌ಸ್ಟಾಗ್ರಾಮ್‌ ಸೇರಿದಂತೆ ಸೋಷಿಯಲ್​ ಮೀಡಿಯಾ ಪ್ಲಾಟ್​​ಫಾರ್ಮ್​​​ಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಸಿನಿಮಾ ಸ್ಕ್ರೀನಿಂಗ್ ಬಳಿಕ ಲಿಫ್ಟ್‌ನಿಂದ ಒಟ್ಟಿಗೆ ನಿರ್ಗಮಿಸುತ್ತಿರುವುದು ಕಂಡು ಬಂದಿದೆ. ಆದರೆ, 'ಥ್ಯಾಂಕ್ ಯೂ ಫಾರ್ ಕಮಿಂಗ್' ಸಿನಿಮಾ ಸ್ಪೆಶಲ್​ ಶೋ ನಡೆದ ಸ್ಥಳದಿಂದ ಪ್ರತ್ಯೇಕವಾಗಿ ಹೊರಟರು.

ಇದನ್ನೂ ಓದಿ: ಕೆ.ಆರ್.ಜಿ ಸ್ಟುಡಿಯೋಸ್​ಗೆ 'ಸೆಂಚುರಿ ಸಿನಿಮಾ' ಸಂಭ್ರಮ: ಒಂದೇ ದಿನ ಎರಡು ಫಿಲ್ಮ್ ರಿಲೀಸ್​​

ಕೆಲ ತಿಂಗಳ ಹಿಂದೆ ಇಬ್ಬರೂ ಸ್ಪೇನ್‌ನಲ್ಲಿ ಸಮಯ ಕಳೆದಿದ್ದರು. ತಾರಾ ಜೋಡಿಯ ರೊಮ್ಯಾಂಟಿಕ್ ಫೋಟೋಗಳು ವೈರಲ್​ ಆಗಿ ಸಖತ್​​ ಸದ್ದು ಮಾಡಿತ್ತು. ಕಳೆದ ದೀಪಾವಳಿ ಸಂದರ್ಭದಿಂದಲೂ ಈ ಜೋಡಿಯ ದೇಟಿಂಗ್​ ವದಂತಿ ಸದ್ದು ಮಾಡುತ್ತಲೇ ಇದೆ. ಅದಕ್ಕೆ ತಕ್ಕಂತೆ, ರೂಮರ್​ ಲವ್​ಬರ್ಡ್ಸ್​​ ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಳ್ಳೋ ಮೂಲಕ ವದಂತಿಗೆ ತುಪ್ಪ ಸುರಿದಿದ್ದಾರೆ. ಇದೀಗ ಹೊಸದಾಗಿ ವೈರಲ್​ ಆಗಿರುವ ಫೋಟೋ ವಿಡಿಯೋಗಳು ಸಹ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಸದ್ದು ಮಾಡಿವೆ. ಆದರೆ ಈವರೆಗೂ ಜೋಡಿ ತಮ್ಮ ಪ್ರೀತಿಯ ವಿಷಯವನ್ನು ಅಧಿಕೃತವಾಗಿ ದೃಢಪಡಿಸಿಲ್ಲ. ವದಂತಿಯಾಗೇ ಸಖತ್​ ಸದ್ದು ಮಾಡುತ್ತಿದೆ.

ಇದನ್ನೂ ಓದಿ: ಮಾಮಿ ಚಲನಚಿತ್ರೋತ್ಸವ 2023: ಫೋಟೋಗಳಲ್ಲಿ ನೋಡಿ ತಾರಾ ಮೆರುಗು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.