ETV Bharat / entertainment

ಅನನ್ಯಾ ಪಾಂಡೆ ನಟನೆಯ 'ಖೋ ಗಯೇ ಹಮ್ ಕಹಾನ್' ಸ್ಕ್ರೀನಿಂಗ್​​ನಲ್ಲಿ ಆದಿತ್ಯ - ಆದಿತ್ಯ ಅನನ್ಯಾ ವಿಡಿಯೋ

ಬಾಲಿವುಡ್​ ನಟ ಆದಿತ್ಯ ರಾಯ್ ಕಪೂರ್ ಸೋಮವಾರ ರಾತ್ರಿ ಗೆಳತಿ ಅನನ್ಯಾ ಪಾಂಡೆ ಅವರ ಮುಂದಿನ ಚಿತ್ರ 'ಖೋ ಗಯೇ ಹಮ್ ಕಹಾನ್' ನ ಸ್ಪೆಷಲ್​ ಸ್ಕ್ರೀನಿಂಗ್​ಗೆ ಹಾಜರಾಗಿದ್ದರು.

Aditya ananya
ಆದಿತ್ಯ ಅನನ್ಯಾ
author img

By ETV Bharat Karnataka Team

Published : Dec 19, 2023, 2:18 PM IST

ಬಾಲಿವುಡ್​​ ರೂಮರ್ ಲವ್​ ಬರ್ಡ್ಸ್ ಅನನ್ಯಾ ಪಾಂಡೆ ಮತ್ತು ಆದಿತ್ಯ ರಾಯ್ ಕಪೂರ್ ಮುಂಬೈನಲ್ಲಿ ನಡೆದ 'ಖೋ ಗಯೇ ಹಮ್ ಕಹಾನ್' ಸ್ಕ್ರೀನಿಂಗ್​​ನಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಇದು ಅನನ್ಯಾ ಪಾಂಡೆ ನಟನೆಯ ಚಿತ್ರವಾಗಿದ್ದು, ಗೆಳತಿಗೆ ಸಾಥ್ ನೀಡಲು ಗೆಳೆಯ ಆಗಮಿಸಿದ್ದು, ನೆಟ್ಟಿಗರ ಗಮನ ಸೆಳೆದಿದೆ.

ವದಂತಿಯ ಪ್ರೇಮಪಕ್ಷಿಗಳು ಪ್ರತ್ಯೇಕವಾಗಿ ಆಗಮಿಸಿದ್ದರೂ, ಪಾಪರಾಜಿಗಳ ಕ್ಯಾಮರಾಗಳಿಗೆ ಒಟ್ಟಿಗೆ ಪೋಸ್ ನೀಡಿದರು. ಈ ಮೂಲಕ ಕಳೆದೊಂದು ವರ್ಷದಿಂದ ಹರಡುತ್ತಿರುವ ಪ್ರೇಮ ವದಂತಿಗಳಿಗೆ ತುಪ್ಪ ಸುರಿದಿದ್ದಾರೆ. ಜೋಡಿ ತಾವು ಪ್ರೀತಿಯಲ್ಲಿರುವುದಾಗಿ ಈವರೆಗೆ ಹೇಳಿಕೊಂಡಿಲ್ಲ. ಆದ್ರೆ ಆಗಾಗ್ಗೆ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಇವರ ವಿಡಿಯೋಗಳನ್ನು ನೋಡಿದವರ ಪೈಕಿ ಹಲವರು ಅನನ್ಯಾ ಆದಿತ್ಯಾ ಪ್ರೀತಿಯಲ್ಲಿರೋದು ಪಕ್ಕಾ ಎಂದು ತಿಳಿಸಿದ್ದಾರೆ.

ನಿನ್ನೆ ನಡೆದ ಅನನ್ಯಾ ಪಾಂಡೆ ಅವರ 'ಖೋ ಗಯೇ ಹಮ್ ಕಹಾನ್' ಸ್ಕ್ರೀನಿಂಗ್​​ನಲ್ಲಿ ಆದಿತ್ಯ ರಾಯ್ ಕಪೂರ್ ಉಪಸ್ಥಿತರಿದ್ದರು. ನಂತರ, ಈ ಜೋಡಿ ಒಟ್ಟಿಗೆ ಕಾರಿನಲ್ಲಿ ತೆರಳಿದರು. ಖೋ ಗಯೇ ಹಮ್ ಕಹಾನ್ ಸ್ಕ್ರೀನಿಂಗ್‌ಗಾಗಿ, ಆದಿತ್ಯ ಚೆಕ್ಸ್​ ಶರ್ಟ್, ಬೂದು ಬಣ್ಣದ ಜೀನ್ಸ್, ಕ್ಯಾಪ್ ಧರಿಸಿದ್ದರು. ಅನನ್ಯಾ ಬಿಳಿ ಕ್ರಾಪ್ ಟಾಪ್​, ಬ್ಲ್ಯಾಕ್​ ಶಾರ್ಟ್ ಸ್ಕರ್ಟ್‌, ಓವರ್ ಸೈಜ್​ ಕೋಟ್​ನಲ್ಲಿ ಕ್ಯೂಟ್ ಆ್ಯಂಡ್ ಸ್ಟೈಲಿಶ್ ಆಗಿ ಕಾಣಿಸುತ್ತಿದ್ದರು. ಪಾಪರಾಜಿಗಳು ಫೋಟೋ, ವಿಡಿಯೋ ಸೆರೆಹಿಡಿಯುತ್ತಿದ್ದ ಸಂದರ್ಭ ಅನನ್ಯಾ ಮುಗುಳ್ನಕ್ಕರು ಜೊತೆಗೆ ನಾಚಿಕೆ ಭಾವವೂ ನಟಿಯ ಮೊಗದಲ್ಲಿತ್ತು. ಈ ವಿಡಿಯೋ ಅಭಿಮಾನಿಗಳಿಂದ ಮೆಚ್ಚುಗೆ, ಪ್ರೀತಿ ಗಳಿಸುತ್ತಿದೆ.

ಕಾಫಿ ವಿತ್ ಕರಣ್ ಸೀಸನ್ 8ರಲ್ಲಿ ಪ್ರತ್ಯೇಕವಾಗಿ ಭಾಗಿಯಾಗಿದ್ದ ಆದಿತ್ಯ ರಾಯ್ ಕಪೂರ್ ಮತ್ತು ಅನನ್ಯಾ ಪಾಂಡೆ ಅವರ ಮಾತುಗಳು ಈ ಜೋಡಿಯ ಕುರಿತಾಗಿರುವ ಊಹಾಪೋಹಗಳಿಗೆ ಮತ್ತಷ್ಟು ಉತ್ತೇಜನ ನೀಡಿತ್ತು. ತಮಾಷೆಯಾಗೇ ನಟಿ ತಮ್ಮನ್ನು "ಅನನ್ಯಾ ಕಾಯ್ ಕಪೂರ್" ಎಂದು ಕರೆದುಕೊಂಡು, ವೀಕ್ಷಕರ ಕುತೂಹಲ ಹೆಚ್ಚಿಸಿದ್ದರು. ಆದಿತ್ಯ, ಅನನ್ಯಾರನ್ನು ತಮ್ಮ ಖುಷಿಯ ಮೂಲ ಎಂದು ಉಲ್ಲೇಖಿಸಿದ್ದರು.

ಇದನ್ನೂ ಓದಿ: ಡಂಕಿ ಫಸ್ಟ್ ಡೇ ಫಸ್ಟ್ ಶೋ ಟಿಕೆಟ್​​ ಖರೀದಿಸಲು ಡೋಲು ವಾದ್ಯದೊಂದಿಗೆ ಬಂದ ಅಭಿಮಾನಿಗಳು

ಇನ್ನೂ ಖೋ ಗಯೇ ಹಮ್ ಕಹಾನ್ ಸ್ಕ್ರೀನಿಂಗ್​ನಲ್ಲಿ ಸುಹಾನಾ ಖಾನ್, ಅಗಸ್ತ್ಯ ನಂದಾ ಮತ್ತು ಶನಾಯಾ ಕಪೂರ್ ಸೇರಿದಂತೆ ಹಲವು ಬಾಲಿವುಡ್ ಸೆಲೆಬ್ರಿಟಿಗಳು ಹಾಜರಾಗಿದ್ದರು. ಡಿಸೆಂಬರ್ 26 ರಂದು ಈ ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಅನನ್ಯಾ ಪಾಂಡೆ, ಸಿದ್ಧಾಂತ್ ಚತುರ್ವೇದಿ ಮತ್ತು ಆದರ್ಶ್ ಗೌರವ್ ಉತ್ತಮ ಸ್ನೇಹಿತರಾಗಿ ನಟಿಸಿದ್ದಾರೆ. ಅರ್ಜುನ್ ವರೈನ್ ಸಿಂಗ್ ನಿರ್ದೇಶನದ ಈ ಚಿತ್ರವನ್ನು ಫರ್ಹಾನ್ ಅಖ್ತರ್, ರಿತೇಶ್ ಸಿಧ್ವಾನಿ, ಜೋಯಾ ಅಖ್ತರ್ ಮತ್ತು ರೀಮಾ ಕಾಗ್ತಿ ನಿರ್ಮಿಸಿದ್ದಾರೆ.

ಇದನ್ನೂ ಓದಿ: ಎಂಬಿಬಿಎಸ್ ಪರೀಕ್ಷೆಗೆ ತಯಾರಿ: ಸಿನಿಮಾಗಳಿಂದ ನಟಿ ಶ್ರೀಲೀಲಾ ತಾತ್ಕಾಲಿಕ ಬ್ರೇಕ್​?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.