ಹನುಮ ಜಯಂತಿಯ ಪ್ರಯುಕ್ತ 'ಆದಿಪುರುಷ್' ಚಿತ್ರತಂಡ ಹೊಸ ಪೋಸ್ಟರ್ ಬಿಡುಗಡೆ ಮಾಡಿದೆ. ಹನುಮಂತನ ಫಸ್ಟ್ ಲುಕ್ ರಿಲೀಸ್ ಆಗಿದ್ದು, ಮರಾಠಿ ನಟ ದೇವದತ್ತ ನಾಗೆ ಹನುಮನಾಗಿ ಕಾಣಿಸಿಕೊಂಡಿದ್ದಾರೆ. ಪೋಸ್ಟರ್ನಲ್ಲಿ ತಪಸ್ಸು ಮಾಡುತ್ತಿರುವ ಭಂಗಿಯಲ್ಲಿ ಹನುಮಂತ ಕುಳಿತಿದ್ದಾನೆ. ಅವನ ಹಿಂದೆ ನಟ ಪ್ರಭಾಸ್ ರಾಮನಾಗಿ ಕಾಣಿಸಿಕೊಂಡಿದ್ದಾರೆ. ಆದಿಪುರುಷ್ ಸಿನಿಮಾವು ಜೂನ್ 16 ರಂದು ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ವಿಶ್ವದಾದ್ಯಂತ ತೆರೆ ಕಾಣಲಿದೆ.
-
Ram ke Bhakt aur Ramkatha ke praan…
— Kriti Sanon (@kritisanon) April 6, 2023 " class="align-text-top noRightClick twitterSection" data="
Jai Pavanputra Hanuman!
राम के भक्त और रामकथा के प्राण…
जय पवनपुत्र हनुमान!#Adipurush #JaiShriRam #JaiBajrangBali #HanumanJanmotsav#Adipurush releases globally IN THEATRES on June 16, 2023.#Adipurush #Prabhas @omraut #SaifAliKhan pic.twitter.com/OqPQesQK0s
">Ram ke Bhakt aur Ramkatha ke praan…
— Kriti Sanon (@kritisanon) April 6, 2023
Jai Pavanputra Hanuman!
राम के भक्त और रामकथा के प्राण…
जय पवनपुत्र हनुमान!#Adipurush #JaiShriRam #JaiBajrangBali #HanumanJanmotsav#Adipurush releases globally IN THEATRES on June 16, 2023.#Adipurush #Prabhas @omraut #SaifAliKhan pic.twitter.com/OqPQesQK0sRam ke Bhakt aur Ramkatha ke praan…
— Kriti Sanon (@kritisanon) April 6, 2023
Jai Pavanputra Hanuman!
राम के भक्त और रामकथा के प्राण…
जय पवनपुत्र हनुमान!#Adipurush #JaiShriRam #JaiBajrangBali #HanumanJanmotsav#Adipurush releases globally IN THEATRES on June 16, 2023.#Adipurush #Prabhas @omraut #SaifAliKhan pic.twitter.com/OqPQesQK0s
ಚಿತ್ರದಲ್ಲಿ ಪ್ರಭಾಸ್ ರಾಮನ ಪಾತ್ರ ನಿರ್ವಹಿಸಿದರೆ, ಸೀತೆಯಾಗಿ ಕೃತಿ ಸನನ್ ಮತ್ತು ಸನ್ನಿ ಸಿಂಗ್ ಲಕ್ಷ್ಮಣನ ಪಾತ್ರದಲ್ಲಿ ನಟಿಸಿದ್ದಾರೆ. ಬಾಲಿವುಡ್ ನಟ ಸೈಫ್ ಅಲಿ ಖಾನ್ ರಾವಣನ ಪಾತ್ರವನ್ನು ನಿರ್ವಹಿಸಿದ್ದಾರೆ. ಓಂ ರಾವತ್ ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದೆ. ಚಿತ್ರವನ್ನು ಟಿ ಸೀರಿಸ್ ಬ್ಯಾನರ್ ಅಡಿ ಭೂಷಣ್ ಕುಮಾರ್, ಕೃಷನ್ ಕುಮಾರ್, ಓಂ ರಾವತ್, ಪ್ರಸಾದ್ ಸುತಾರ್ ಮತ್ತು ರಾಜೇಶ್ ನಾಯರ್ ನಿರ್ಮಾಣ ಮಾಡುತ್ತಿದ್ದಾರೆ. ಇನ್ನೂ ರಾಮನವಮಿಯಂದು ಚಿತ್ರದ ಹೊಸ ಪೋಸ್ಟರ್ ಬಿಡುಗಡೆಯಾಗಿತ್ತು.
ಇದನ್ನೂ ಓದಿ: ಸಿನಿಮಾ ಲೋಕಕ್ಕೆ ಕಾಲಿಟ್ಟ ಬರಗೂರು ರಾಮಚಂದ್ರಪ್ಪನವರ ಮೊಮ್ಮಗ ಆಕಾಂಕ್ಷ್ ಬರಗೂರು
ಟೀಕೆಗೆ ಗುರಿಯಾದ ಆದಿಪುರುಷ್: ನಟ ಪ್ರಭಾಸ್ ಅಭಿನಯದ ಆದಿಪುರುಷ್ ಸಿನಿಮಾಗೆ ಒಂದರಂತೆ ಹಿನ್ನೆಡೆ ಆಗುತ್ತಿದೆ. ಈ ಹಿಂದೆ ರಾಮನವಮಿಯಂದು ಬಿಡುಗಡೆಯಾದ ಪೋಸ್ಟರ್ ಅಷ್ಟೊಂದು ಮೆಚ್ಚುಗೆ ಗಳಿಸಿರಲಿಲ್ಲ. ಅದಕ್ಕೂ ಮೊದಲು ರಿಲೀಸ್ ಆಗಿದ್ದ ಟೀಸರ್ಗೂ ಎಲ್ಲಾ ಕಡೆಯಿಂದಲೂ ಟೀಕೆಗಳು ಕೇಳಿ ಬಂದಿತ್ತು. ಚಿತ್ರಕ್ಕೆ ನೂರಾರು ಕೋಟಿ ಹಣವನ್ನು ಸುರಿಯಲಾಗಿದ್ದರೂ, ಆದಿಪುರುಷ್ ಮೇಲೆ ಪ್ರೇಕ್ಷಕರಿಗಿದ್ದ ನಿರೀಕ್ಷೆ ಸುಳ್ಳಾಗಿತ್ತು. ಹನುಮಂತನ ವೇಷ ಭೂಷಣಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಅಲ್ಲದೇ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತೆ ರಾಮಾಯಣದಲ್ಲಿನ ಪಾತ್ರಧಾರಿಗಳನ್ನು ಬಿಂಬಿಸಲಾಗಿದೆ ಎಂದು ಹೇಳಲಾಗಿತ್ತು.
ಇದನ್ನೂ ಓದಿ: ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದ ಟೈಟಲ್ ವಿವಾದದಲ್ಲಿ ಮೋಹಕ ತಾರೆಗೆ ಸಿಕ್ತು ಜಯ
ಈ ಕಾರಣಕ್ಕಾಗಿ ಆದಿಪುರುಷ್ ಸಿನಿಮಾದ ಮೇಲೆ ವಕೀಲ ರಾಜ್ ಗೌರವ್ ಅವರು ದೆಹಲಿ ಹೈಕೋರ್ಟ್ನಲ್ಲಿ ತಕರಾರು ಅರ್ಜಿಯನ್ನು ಸಲ್ಲಿಸಿದ್ದರು. ನಿರ್ಮಾಪಕ ಭೂಷಣ್ ಕುಮಾರ್ ಮತ್ತು ನಿರ್ದೇಶಕ ಓಂ ರಾವುತ್ ವಿರುದ್ಧ ಅರ್ಜಿ ಸಲ್ಲಿಸಿ, ಸಿನಿಮಾ ಬಿಡುಗಡೆಯನ್ನು ಮುಂದೂಡುವಂತೆ ಕೋರಿದ್ದರು. ಮಾತ್ರವಲ್ಲದೇ 2021ರಲ್ಲಿ ‘ಆದಿಪುರುಷ್' ಶೂಟಿಂಗ್ ಸೆಟ್ ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಆ ವೇಳೆ ಪ್ರಭಾಸ್ ಮತ್ತು ಸೈಫ್ ಅಲಿಖಾನ್ ಸೆಟ್‌ನಲ್ಲಿ ಇರಲಿಲ್ಲ. ಬದಲಾಗಿ ನಿರ್ದೇಶಕ ಓಂ ರಾವುತ್ ಮತ್ತು ಇತರ ಕೆಲವರು ಮಾತ್ರ ಹಾಜರಿದ್ದರು. ಘಟನೆಯಲ್ಲಿ ಯಾರಿಗೂ ಗಾಯಗಳಾಗಿರಲಿಲ್ಲ. ಇಷ್ಟೆಲ್ಲಾ ಅಡೆತಡೆಗಳಿರುವ ಆದಿಪುರುಷ್ ಸಿನಿಮಾ ನಿಗದಿತ ದಿನಾಂಕಕ್ಕೆ ಥಿಯೇಟರ್‌ಗೆ ಬರಲಿದೆಯೇ ಎಂಬ ಆತಂಕ ಅಭಿಮಾನಿಗಳಲ್ಲಿದೆ.
ಇದನ್ನೂ ಓದಿ: ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ಗೆ ಬೆದರಿಕೆ ಪತ್ರ.. ಸಿಸಿಬಿ ಹೆಗಲಿಗೆ ಪ್ರಕರಣದ ತನಿಖಾ ಜವಾಬ್ದಾರಿ