ETV Bharat / entertainment

Adipurush: ವೀಕೆಂಡ್​ನಲ್ಲೂ ಸದ್ದು ಮಾಡದ 'ಆದಿಪುರುಷ್​​': ಶನಿವಾರ ಗಳಿಸಿದ್ದು ಕೇವಲ 5 ಕೋಟಿ ರೂ.!

ಆದಿಪುರುಷ್ ಸಿನಿಮಾ ಎರಡನೇ ಶನಿವಾರದಂದು ಕೂಡಾ ಉತ್ತಮ ಗಳಿಕೆ​ ಮಾಡಿಲ್ಲ.

Adipurush collection
ಆದಿಪುರುಷ್ ಕಲೆಕ್ಷನ್​
author img

By

Published : Jun 25, 2023, 11:03 AM IST

ಓಂ ರಾವುತ್ ನಿರ್ದೇಶನದ ಆದಿಪುರುಷ್​​ ಬಾಕ್ಸ್​ ಆಫೀಸ್​ ಕಲೆಕ್ಷನ್​​ನಲ್ಲಿ ಕುಸಿತ​​ ಮುಂದುವರಿದಿದೆ. ಮೊದಲ ಮೂರು ದಿನಗಳಲ್ಲಿ 300 ಕೋಟಿ ರೂ.ಗೂ ಅಧಿಕ ಸಂಪಾದನೆ ಮಾಡಿದ ಸಿನಿಮಾ ನೆಗೆಟಿವ್​ ರಿವ್ಯೂವ್​ ಹಿನ್ನೆಲೆಯಲ್ಲಿ ನಾಲ್ಕನೇ ದಿನದಿಂದ ಕುಸಿತ ಕಾಣಲು ಪ್ರಾರಂಭಿಸಿದೆ. ಎರಡನೇ ವಾರಾಂತ್ಯದ ಮೇಲೆ ಚಿತ್ರತಂಡ ವಿಶ್ವಾಸ ಇರಿಸಿತ್ತು. ಆದ್ರೆ ಸಿನಿಮಾ ಶನಿವಾರದಂದೂ ಸಹ ಸೋತಿದೆ. ಒಂಭತ್ತನೇ ದಿನದ ಆದಿಪುರುಷ್​ ಬಾಕ್ಸ್​ ಆಫೀಸ್​ ಕಲೆಕ್ಷನ್​ ಸಂಖ್ಯೆ ತೀರಾ ಕಡಿಮೆ ಇದೆ.

Sacnilk.com ಪ್ರಕಾರ, ಆದಿಪುರುಷ್​​​ ಶನಿವಾರ ಎಲ್ಲ ಭಾಷೆಗಳೂ ಸೇರಿ 5.63 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ. ಭಾರತದಲ್ಲಿ ಸಿನಿಮಾದ ಒಟ್ಟು ಕಲೆಕ್ಷನ್​​ 268.55 ಕೋಟಿ ರೂಪಾಯಿ. ಶುಕ್ರವಾರದಂದು ಬಹುತಾರಾಗಣದ ಸಿನಿಮಾ 3.25 ಕೋಟಿ ರೂ. ಗಳಿಸಿತ್ತು. ಶುಕ್ರವಾರಕ್ಕೆ ಹೋಲಿಸಿದರೆ ಶನಿವಾರದ ಕಲೆಕ್ಷನ್​ನಲ್ಲಿ ಕೊಂಚ ಏರಿಕೆ ಕಾಣಬಹುದು. ಆದ್ರೆ 500 ಕೋಟಿ ರೂ.ನ ಬಿಗ್ ಬಜೆಟ್​ನಲ್ಲಿ ತಯಾರಾಗಿದ್ದ ಸಿನಿಮಾ ಕಲೆಕ್ಷನ್​ ಮೇಲೆ ಸಾಕಷ್ಟು ನಿರೀಕ್ಷೆ ಇಡಲಾಗಿತ್ತು. ಚಿತ್ರತಂಡದ, ಅಭಿಮಾನಿಗಳ ನಿರೀಕ್ಷೆ ಹುಸಿಯಾಗಿದೆ. ​

ಓಂ ರಾವುತ್ ಆ್ಯಕ್ಷನ್​ ಕಟ್​ ಹೇಳಿರುವ 'ಆದಿಪುರುಷ್' ಜೂನ್​ 16ರಂದು ದೇಶ ಮಾತ್ರವಲ್ಲದೇ ವಿಶ್ವದೆಲ್ಲೆಡೆ 10,000ಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ ತೆರೆಕಂಡಿತ್ತು. ವಿಶ್ವಾದ್ಯಂತ ಚಿತ್ರದ ಒಟ್ಟು ಬಾಕ್ಸ್ ಆಫೀಸ್ ಕಲೆಕ್ಷನ್ 386.54 ಕೋಟಿ ರೂ. ಸದ್ಯದ ಪರಿಸ್ಥಿತಿ ಗಮನಿಸಿದರೆ ಹಾಕಿದ ಬಂಡವಾಳ ವಾಪಸ್​​ ಬರೋದು ಸಂದೇಹ. ಅಂದರೆ 500 ಕೋಟಿ ರೂ.ಗಿಂತ ಹೆಚ್ಚು ಗಳಿಕೆ ಮಾಡುವ ಸಾಧ್ಯತೆ ಕಡಿಮೆ ಎಂದು ಸಿನಿ ಪಂಡಿತರು ಅಂದಾಜಿಸಿದ್ದಾರೆ.

500 ಕೋಟಿ ಬಜೆಟ್‌ನಲ್ಲಿ ಸಿನಿಮಾವನ್ನು ನಿರ್ಮಿಸಲಾಗಿದ್ದು, ಒಂದಂಕಿಯ ಅಂಕಿಅಂಶವು ಚಿತ್ರದ ಯಶಸ್ಸಿಗೆ ಹೆಚ್ಚು ಸಹಾಯ ಮಾಡುವುದಿಲ್ಲ. ಆದಿಪುರುಷ್​​ ನಿರ್ಮಿಸಿರುವ T-Series ಪ್ರಕಾರ, ಸಿನಿಮಾ ಕೇವಲ ಮೂರು ದಿನಗಳಲ್ಲಿ ವಿಶ್ವಾದ್ಯಂತ 340 ಕೋಟಿ ರೂ. ಗಳಿಸಿತ್ತು. ಮೊದಲ ದಿನ 140 ಕೋಟಿ ರೂ. ಸಂಗ್ರಹಿಸುವಲ್ಲಿ ಯಶಸ್ವಿ ಆಗಿತ್ತು.

ಇದನ್ನೂ ಓದಿ: Emergency Teaser: 'ಇಂಡಿಯಾ ಈಸ್​ ಇಂದಿರಾ, ಇಂದಿರಾ ಈಸ್​ ಇಂಡಿಯಾ'- ಎಮರ್ಜೆನ್ಸಿ ಟೀಸರ್ ರಿಲೀಸ್

ಸಿನಿಮಾದಲ್ಲಿ ಭಗವಾನ್​​ ಶ್ರೀರಾಮನ ಪಾತ್ರದಲ್ಲಿ ನಟ ಪ್ರಭಾಸ್, ಸೀತಾದೇವಿಯ ಪಾತ್ರದಲ್ಲಿ​​ ನಟಿ ಕೃತಿ ಸನೋನ್, ಲಕ್ಷ್ಮಣನ ಪಾತ್ರದಲ್ಲಿ ನಟ ಸನ್ನಿ ಸಿಂಗ್, ಹನುಮಂತನ ಪಾತ್ರದಲ್ಲಿ ನಟ ದೇವದತ್ತ, ರಾವಣನ​​ ಪಾತ್ರದಲ್ಲಿ ಸೈಫ್ ಅಲಿ ಖಾನ್ ಕಾಣಿಸಿಕೊಂಡಿದ್ದಾರೆ. ಹಿಂದಿ, ತೆಲುಗು, ಕನ್ನಡ, ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ಜೂನ್​ 16ರಂದು ಬಿಡುಗಡೆ ಆಗಿದೆ. ಮೊದಲ ದಿನವೇ ಸಿನಿಮಾ ವೀಕ್ಷಿಸಬೇಕು, ಪ್ರೀ ಟಿಕೆಟ್ ಬುಕಿಂಗ್​ ಕಾಸ್ಟ್ ಸೇರಿದಂತೆ ರಾಮಾಯಣ ಆಧಾರಿತ ಸಿನಿಮಾ ಆದ ಹಿನ್ನೆಲೆಯಲ್ಲಿ ಮೊದಲ ಮೂರು ದಿನ ಸಿನಿಮಾ ಉತ್ತಮ ಕಲೆಕ್ಷನ್​ ಮಾಡಿತು. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ಸಿಕ್ಕಾಪಟ್ಟೆ ಟ್ರೋಲ್​ ಆದ ಬೆನ್ನಲ್ಲೇ ಸಿನಿಪ್ರಿಯರು ಥಿಯೇಟರ್​ಗಳಿಗೆ ಹೋಗಲು ಮುಂದಾಗಲಿಲ್ಲ. ನಕಾರಾತ್ಮಕ ವಿಮರ್ಷೆ, ಪ್ರೇಕ್ಷಕರ ಅನಿಸಿಕೆ, ಸೋಷಿಯಲ್​ ಮೀಡಿಯಾದಲ್ಲಿ ಟ್ರೋಲ್​ ಆಗಿದ್ದು ಆದಿಪುರುಷ್​​ ಸಾಕಷ್ಟು ಹಿನ್ನೆಡೆ ಕಂಡಿದೆ.

ಇದನ್ನೂ ಓದಿ: 'ಆದಿಪುರುಷ್​ ವಿಷಯದಲ್ಲಿ ಆ ದೇವರು ಕೂಡ ನಿಮ್ಮನ್ನು ಕ್ಷಮಿಸಲ್ಲ': ಮನೋಜ್ ದೇಸಾಯಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.