ETV Bharat / entertainment

ಜಾತಿ ನಿಂದನೆ ಆರೋಪ: ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ ನಟಿ ವರ್ಷಾ ಪ್ರಿಯದರ್ಶಿನಿ - Varsha Priyadarshini marital discord

ಜಾತಿ ನಿಂದನೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ವರ್ಷಾ ಪ್ರಿಯದರ್ಶಿನಿ ನಿರೀಕ್ಷಣಾ ಜಾಮೀನು ಕೋರಿ ಒಡಿಶಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

Actress Varsha Priyadarshini
ನಟಿ ವರ್ಷಾ ಪ್ರಿಯದರ್ಶಿನಿ
author img

By

Published : Jul 30, 2022, 1:38 PM IST

ಕಟಕ್(ಒಡಿಶಾ): ಬಿಜೆಡಿ ಸಂಸದ, ನಟ ಅನುಭವ್ ಮೊಹಾಂತಿ ಅವರ ಸಿಬ್ಬಂದಿಯನ್ನು ಜಾತಿ ವಿಚಾರವಾಗಿ ನಿಂದಿಸಿದ್ದಾರೆನ್ನುವ ಆರೋಪ ಹೊತ್ತಿರುವ ನಟಿ, ಅನುಭವ್ ಮೊಹಾಂತಿ ಪತ್ನಿ ವರ್ಷಾ ಪ್ರಿಯದರ್ಶಿನಿ ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ತಮ್ಮ ಕೆಲಸಗಾರರ ಕುರಿತು ಜಾತಿ ವಿಚಾರವಾಗಿ ನಿಂದಿಸಿರುವ ಬಗ್ಗೆ ಜುಲೈ 2019ರಲ್ಲಿ ಸಂಸದ ಅನುಭವ್ ಮೊಹಾಂತಿ ದೂರು ಸಲ್ಲಿಸಿದ್ದಾರೆ. ಈ ವಿಚಾರವಾಗಿ ದೆಹಲಿ ಪೊಲೀಸರು ವರ್ಷಾ ಪ್ರಿಯದರ್ಶಿನಿ ಮತ್ತು ಆಕೆಯ ಸಂಬಂಧಿಕರಿಗೆ ಸಮನ್ಸ್ ಜಾರಿ ಮಾಡಿದ್ದಾರೆ. ದಾಖಲಾದ ಆಧಾರದ ಮೇಲೆ ದೆಹಲಿ ಪೊಲೀಸರ ತಂಡವು ಕಳೆದ ಜುಲೈ 25 ರಂದು ಕಟಕ್‌ಗೆ ಭೇಟಿ ನೀಡಿತ್ತು. ವರ್ಷಾ ಪ್ರಿಯದರ್ಶಿನಿ ಮತ್ತು ಅವರ ಸಹೋದರಿ ಪುರಿಘಾಟ್ ಪೊಲೀಸ್ ಠಾಣೆಗೆ ಭೇಟಿ ನೀಡಿ ನೋಟಿಸ್ ಸ್ವೀಕರಿಸಿದ್ದಾರೆ.

ಇದನ್ನೂ ಓದಿ: ಮೊದಲ ದಿನವೇ ಏಳು ಕೋಟಿ .. ಬಾಕ್ಸ್​ ಆಫೀಸ್​ ನಲ್ಲಿ ಸದ್ದು ಮಾಡಿದ 'ಏಕ್​ ವಿಲನ್​ ರಿಟರ್ನ್ಸ್​'

ಇನ್ನೂ ಅನುಭವ್ ಮೊಹಾಂತಿ ಮತ್ತು ವರ್ಷಾ ಪ್ರಿಯದರ್ಶಿನಿ ನಡುವಿನ ವೈವಾಹಿಕ ಕಲಹಕ್ಕೆ ಸಂಬಂಧಿಸಿದ ಪ್ರಕರಣ ಕೂಡ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.