ಬಾಲಿವುಡ್ ಬ್ಯೂಟಿ ಊರ್ವಶಿ ರೌಟೇಲಾ ಅವರು ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರೊಂದಿಗಿನ ಫೋಟೋ ಹಂಚಿಕೊಂಡು ಸಂಚಲನ ಸೃಷ್ಟಿಸಿದ್ದರು. ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಜೊತೆಗಿನ ಚಿತ್ರ ಹಂಚಿಕೊಂಡು 'ಕಾಂತಾರ 2'ನಲ್ಲಿ (ಕಾಂತಾರ 1) ತನ್ನ ಪಾತ್ರದ ಬಗ್ಗೆ ಊಹಾಪೋಹಗಳನ್ನು ಹುಟ್ಟು ಹಾಕಿದ್ದರು. ಈ ನಟಿ ಕಾಂತಾರ 2ರ ಭಾಗವಾಗುತ್ತಾರೆ ಎಂದು ಬಹುತೇಕ ನಂಬಲಾಗಿತ್ತು. ನೆಟಿಜನ್‌ಗಳೂ ಸಹ ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೆ ಚಿತ್ರತಂಡದ ಆಪ್ತ ಮೂಲಗಳು ಬೇರೆಯೇ ಸುಳಿವು ನೀಡಿವೆ.
- " class="align-text-top noRightClick twitterSection" data="
">
ಊರ್ವಶಿ ರೌಟೇಲಾ ಪೋಸ್ಟ್ ಏನಿತ್ತು?: ಊರ್ವಶಿ ರೌಟೇಲಾ ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ನಿನ್ನೆ (ಶನಿವಾರ, ಫೆಬ್ರವರಿ11) ರಿಷಬ್ ಶೆಟ್ಟಿ ಅವರೊಂದಿಗಿನ ಫೋಟೋ ಶೇರ್ ಮಾಡಿಕೊಂಡಿದ್ದರು. ಕಾಂತಾರ 2ನಲ್ಲಿ ಊರ್ವಶಿ ರೌಟೇಲಾ ಭಾಗಿಯಾಗಲಿದ್ದಾರೆ ಎಂಬ ಸುದ್ದಿ ಜೋರಾಗಿ ಹರಡಲು ಕಾರಣ ಅವರು ಫೋಟೋಗೆ ಕೊಟ್ಟಿದ್ದ ಕ್ಯಾಪ್ಷನ್. ಹೌದು, ಅವರ ಫೋಟೋ ಕ್ಯಾಪ್ಷನ್ ಎಲ್ಲರ ಗಮನ ಸೆಳೆದಿತ್ತು. ಕಾಂತಾರ 2 ಲೋಡಿಂಗ್ ಎಂದು ಬರೆದು ಆ ಪೋಸ್ಟ್ ಅನ್ನು ರಿಷಬ್ ಶೆಟ್ಟಿ ಮತ್ತು ಹೊಂಬಾಳೆ ಫಿಲ್ಸ್ಮ್ಗೆ ಟ್ಯಾಗ್ ಮಾಡಿದ್ದರು. ಚಿತ್ರ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿ, ಕಾಂತಾರ ಚಿತ್ರದಲ್ಲಿ ಇವರೇ ನಟಿಸಲಿದ್ದಾರೆ ಎಂದು ಬಹುತೇಕ ನಂಬಲಾಗಿತ್ತು. ಆದ್ರೆ, ಈವರೆಗೆ ಚಿತ್ರತಂಡದಿಂದ ಕಲಾವಿದರ ಕುರಿತು ಅಧಿಕೃತ ಮಾಹಿತಿ ಬಹಿರಂಗಗೊಂಡಿಲ್ಲ.
'ಆಧಾರರಹಿತ ವಿಚಾರ': ಆದರೆ ಕಾಂತಾರ ಚಿತ್ರತಂಡದ ಆಪ್ತ ಮೂಲ, ಈ ಎಲ್ಲಾ ವದಂತಿಗಳು ಆಧಾರ ರಹಿತ ಎಂದು ಸ್ಪಷ್ಟನೆ ನೀಡಿದೆ. ಪ್ರೊಡಕ್ಷನ್ ಹೌಸ್ ಹೊಂಬಾಳೆ ಫಿಲ್ಮ್ಸ್‌ಗೆ ಹತ್ತಿರವಿರುವ ಮೂಲಗಳು ಕೂಡ "ಕಾಂತಾರ 2 ನಲ್ಲಿ ಊರ್ವಶಿ ರೌಟೇಲಾ ಪಾತ್ರದ ಸುತ್ತಲಿನ ವದಂತಿಗಳು ಸಂಪೂರ್ಣವಾಗಿ ಆಧಾರರಹಿತ ಮತ್ತು ಸುಳ್ಳು" ಎಂದು ತಿಳಿಸಿದೆ.
- " class="align-text-top noRightClick twitterSection" data="
">
ಇತ್ತೀಚೆಗೆ ಊರ್ವಶಿ ರೌಟೇಲಾ ಮತ್ತು ರಿಷಬ್ ಶೆಟ್ಟಿ ಒಂದೇ ಪ್ರದೇಶದಲ್ಲಿದ್ದ (ಸ್ಥಳ ಬಹಿರಂಗಗೊಂಡಿಲ್ಲ) ಕಾರಣ ನಟಿ ಕಾಂತಾರ ಖ್ಯಾತಿಯ ರಿಷಬ್ ಅವರನ್ನು ಭೇಟಿಯಾಗಲು ವಿನಂತಿಸಿದ್ದಾರೆ. ಭೇಟಿಯ ಕೊನೆಯಲ್ಲಿ ರಿಷಬ್ ಅವರೊಂದಿಗೆ ಕ್ಲಿಕ್ ಮಾಡಿದ ಫೋಟೋವನ್ನು ರಹಸ್ಯ ಶೀರ್ಷಿಕೆಯೊಂದಿಗೆ ಪೋಸ್ಟ್ ಊರ್ವಶಿ ಪೋಸ್ಟ್ ಮಾಡಿದ್ದಾರೆ. ಇದು ವದಂತಿ ಹಬ್ಬಲು ಕಾರಣವಾಗಿದೆ ಎಂದು ಚಿತ್ರತಂಡದ ಆಪ್ತ ಮೂಲ ತಿಳಿಸಿದೆ.
ಇದನ್ನೂ ಓದಿ: 'ಕಾಂತಾರ 2'ನಲ್ಲಿ ಬಣ್ಣ ಹಚ್ಚಲಿದ್ದಾರೆ ಬಾಲಿವುಡ್ ಬೆಡಗಿ ಊರ್ವಶಿ ರೌಟೇಲಾ!
ಕಾಂತಾರ ಕಳೆದ ಸೆಪ್ಟೆಂಬರ್ ಕೊನೆಯಲ್ಲಿ ತೆರೆಕಂಡು ಅಭೂತಪೂರ್ವ ಯಶಸ್ಸು ಕಂಡಿದೆ. 16 ಕೋಟಿ ಬಜೆಟ್ನಲ್ಲಿ ನಿರ್ಮಾಣಗೊಂಡ ಈ ಚಿತ್ರ ಕಲೆಕ್ಷನ್ ಮಾಡಿದ್ದು 450 ಕೋಟಿ ರೂಪಾಯಿಗೂ ಅಧಿಕ ಎಂದು ಅಂದಾಜಿಸಲಾಗಿದೆ. ಕನ್ನಡದಲ್ಲಿ ತೆರೆಕಂಡ ಈ ಸಿನಿಮಾ ಬಳಿಕ ಹಿಂದಿ, ತೆಲುಗು, ಮಲೆಯಾಳಂ, ತಮಿಳು ಭಾಷೆಗೂ ಡಬ್ ಆಗಿ ಪ್ಯಾನ್ ಇಂಡಿಯಾ ಸಿನಿಮಾ ಮಟ್ಟದಲ್ಲಿ ಬಿಡುಗಡೆ ಆಯಿತು. ಇತ್ತೀಚೆಗೆ ಕಾಂತಾರ 100 ದಿನ ಪೂರೈಸಿದ ಹಿನ್ನೆಲೆಯಲ್ಲಿ ಶತದಿನೋತ್ಸವ ಕಾರ್ಯಕ್ರಮವನ್ನು ಚಿತ್ರತಂಡ ಆಯೋಜನೆ ಮಾಡಿತ್ತು. ಆ ವೇಳೆ ರಿಷಬ್ ಶೆಟ್ಟಿ ಅವರು, ನೀವು ನೋಡಿದ್ದು ಕಾಂತಾರ ಭಾಗ 2, ಕಾಂತಾರ 1 ಬರಬೇಕಿದೆ ಎಂದು ಹೇಳಿ ಕಾಂತಾರದ ಮತ್ತೊಂದು ಭಾಗ ಬರುವ ಬಗ್ಗೆ ಖಚಿತಪಡಿಸಿದರು.
ಇದನ್ನೂ ಓದಿ: 'RRR': ರಾಮ್ ಚರಣ್ ಅಭಿನಯ ಕೊಂಡಾಡಿದ ಖ್ಯಾತ ನಿರ್ದೇಶಕ ಜೇಮ್ಸ್ ಕ್ಯಾಮರಾನ್