ಮುಂಬೈ (ಮಹಾರಾಷ್ಟ್ರ): ಧಾರಾವಾಹಿ ಸೆಟ್ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದ 20 ವರ್ಷದ ಯುವ ನಟಿ ತುನಿಶಾ ಶರ್ಮಾ ಅವರ ಮೃತದೇಹದ ಅಂತ್ಯಕ್ರಿಯೆ ಇಂದು ಸಂಜೆ ಮುಂಬೈನ ಮೀರಾ ರೋಡ್‌ನಲ್ಲಿರುವ ಚಿತಾಗಾರದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಇದಕ್ಕೂ ಮುನ್ನ, ಜೆ.ಜೆ.ಆಸ್ಪತ್ರೆಯಿಂದ ಭಾಯಂದರ್‌ಗೆ ಮೃತದೇಹವನ್ನು ತರಲಾಯಿತು. ಈ ವೇಳೆ, ತಾಯಿ ವನಿತಾ ಶರ್ಮಾ ಶವಾಗಾರದಲ್ಲಿದ್ದ ಮಗಳನ್ನು ನೋಡಲು ಆಸ್ಪತ್ರೆಯೊಳಗೆ ಧಾವಿಸಿ ಬಂದು ಕಣ್ಣೀರು ಹಾಕಿದರು. ಕುಟುಂಬದ ಇತರೆ ಸದಸ್ಯರು ತಾಳ್ಮೆಯಿಂದ ಅವರನ್ನು ಕಾರಿನಲ್ಲಿ ಮನೆಗೆ ಕರೆದುಕೊಂಡು ಹೋದರು.
ಘಟನೆಯ ಹಿನ್ನೆಲೆ: ಕಳೆದ ಶನಿವಾರ ಮಧ್ಯಾಹ್ನ ಮುಂಬೈ ಸಮೀಪದ ನೈಗಾಂವ್ ಪ್ರದೇಶದ ಸೆಟ್‌ನಲ್ಲಿ ಧಾರಾವಾಹಿ ಚಿತ್ರೀಕರಣ ನಡೆಯುತ್ತಿದ್ದಾಗ ಮೇಕಪ್ ರೂಮ್ನಲ್ಲಿ ತುನಿಶಾ ಶರ್ಮಾ ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಆಸ್ಪತ್ರೆಯಲ್ಲಿ ತುನಿಶಾ ಶರ್ಮಾ ಜೀವಂತವಿಲ್ಲ ಎಂಬ ವಿಚಾರವನ್ನು ವೈದ್ಯರು ದೃಢಪಡಿಸಿದ್ದರು.
ಶೂಟಿಂಗ್ ಸೆಟ್‌ನಲ್ಲಿಯೇ ಆತ್ಮಹತ್ಯೆ: ಶನಿವಾರ ಬೆಳಗ್ಗೆ ಧಾರಾವಾಹಿಯ ಶೂಟಿಂಗ್ ಸೆಟ್‌ನಲ್ಲಿಯೇ ನಟಿ ತನ್ನ ಮೊದಲ ಹಂತದ ಚಿತ್ರೀಕರಣ ಮುಗಿಸಿ ಮೇಕಪ್ ರೂಮ್ಗೆ ತೆರಳಿದ್ದರು. ಅಲ್ಲಿದ್ದ ಸಿಬ್ಬಂದಿ ಊಟಕ್ಕೆಂದು ಹೊರ ಹೋಗಿದ್ದರು. ಈ ವೇಳೆ ತುನಿಶಾ ಶರ್ಮಾ ಮೇಕಪ್ ರೂಮ್ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಿಬ್ಬಂದಿ ವಾಪಸ್ ಬಂದಾಗ ಸಾವಿನ ಬಗ್ಗೆ ಗೊತ್ತಾಗಿತ್ತು.
ಪ್ರೇಮ ಸಂಬಂಧ: ತುನಿಶಾ ಶರ್ಮಾ ಸಹನಟ ಶೀಝಾನ್ ಖಾನ್ ಎಂಬಾತನ ಜೊತೆಗೆ ಪ್ರೇಮಸಂಬಂಧ ಹೊಂದಿದ್ದರು. ಇಬ್ಬರೂ 15 ದಿನಗಳ ಹಿಂದಷ್ಟೇ ದೂರವಾಗಿದ್ದರು. ಈ ಕಾರಣಕ್ಕಾಗಿ ನಟಿ ನೊಂದು ಸಾವಿನ ಹಾದಿ ತುಳಿದಿರುವ ಸಾಧ್ಯತೆಯ ಬಗ್ಗೆ ದಾರು ದಾಖಲಾಗಿದ್ದು, ನಟನನ್ನು ಪೊಲೀಸರು ಬಂಧಿಸಿದ್ದಾರೆ.
ಲವ್ ಜಿಹಾದ್ ಶಂಕೆ: ಪ್ರಕರಣದ ಹಿಂದೆ ಲವ್ ಜಿಹಾದ್ ಇರಬಹುದಾ ಎಂಬ ಬಗ್ಗೆ ಪೊಲೀಸ್ ತನಿಖೆ ನಡೆಸಬೇಕು ಎಂಬ ಒತ್ತಡ ಕೇಳಿಬಂದಿತ್ತು. ಇದರಂತೆ ಪೊಲೀಸರು ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ. ಶ್ರೀಝಾನ್ ಖಾನ್ ಮುಸ್ಲಿಂ ಧರ್ಮಕ್ಕೆ ಸೇರಿದ್ದು, ಈತನ ಕಾರಣಕ್ಕಾಗಿ ನಟಿ ಸಾವನ್ನಪ್ಪಿರಬಹುದು ಎಂದು ಹೇಳಲಾಗಿದೆ. ಶ್ರೀಝಾನ್ನನ್ನು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಇವರಿಬ್ಬರು ದಾಸ್ತಾನ್ ಇ-ಕಬೂಲ್ ಧಾರಾವಾಹಿಯಲ್ಲಿ ಜೊತೆಯಾಗಿ ನಟಿಸಿದ್ದರು.
ನಟಿ ಗರ್ಭಿಣಿಯಾಗಿದ್ದ ವದಂತಿ: ಮೂಲಗಳ ಪ್ರಕಾರ, ತುನಿಶಾ ಶರ್ಮಾ ಗರ್ಭಿಣಿಯಾಗಿದ್ದರು. ಆದ್ರೆ ಆಕೆಯ ಗೆಳೆಯ ಮದುವೆಯಾಗಲು ನಿರಾಕರಿಸಿದ್ದರಂತೆ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೊದಲು ಹೇಳಲಾಗಿತ್ತು. ಆದರೆ, ಮರಣೋತ್ತರ ಪರೀಕ್ಷೆಯಲ್ಲಿ ನಟಿ ಗರ್ಭಿಣಿ ಆಗಿರಲಿಲ್ಲ. ಅವರು ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ. ನಟಿಯ ದೇಹದಲ್ಲಿ ಯಾವುದೇ ಗಾಯದ ಗುರುತು ಪತ್ತೆಯಾಗಿಲ್ಲ ಎಂದು ವರದಿ ಬಂದಿದೆ.
ಇದನ್ನೂ ಓದಿ: ಇಂದು ಮೀರಾ ರೋಡ್ ಚಿತಾಗಾರದಲ್ಲಿ ಯುವನಟಿ ತುನಿಶಾ ಶರ್ಮಾ ಅಂತ್ಯಕ್ರಿಯೆ
ಶೀಝಾನ್ ಖಾನ್ ವಿರುದ್ಧ ಕಠಿಣ ಸ್ವರೂಪದಲ್ಲಿ ವಿಚಾರಣೆ ನಡೆಸಬೇಕು. ಈತ ನನ್ನ ತುನಿಶಾಳನ್ನು ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ, ಬಳಸಿಕೊಂಡಿದ್ದಾನೆ. ಅಲ್ಲದೇ ಈ ಮೊದಲು ಆತನಿಗೆ ಬೇರೆ ಹುಡುಗಿಯೊಂದಿಗೆ ಸಂಬಂಧವೂ ಇತ್ತು. ಅದಾಗಿಯೂ ತುನಿಶಾಳನ್ನು ನಾಲ್ಕು ತಿಂಗಳು ಕಾಲ ದುರ್ಬಳಕೆ ಮಾಡಿಕೊಂಡಿದ್ದಾನೆ. ಮಗಳ ಸಾವಿಗೆ ಕಾರಣನಾದ ಶೀಝಾನ್ಗೆ ಶಿಕ್ಷೆ ಆಗಲೇಬೇಕು ಎಂದು ಒತ್ತಾಯಿಸಿದ್ದರು.
ಇದನ್ನೂ ಓದಿ: ಶ್ರದ್ದಾ ವಾಕರ್ ಹತ್ಯೆ ಆತಂಕದಿಂದ ತುನಿಶಾಳಿಂದ ಬಲವಂತವಾಗಿ ಬೇರ್ಪಟ್ಟೆ: ಶೀಝಾನ್ ಖಾನ್
ಶ್ರದ್ದಾ ವಾಕರ್ ಹತ್ಯೆಯ ನಂತರ ತುನಿಶಾ ಶರ್ಮಾ ಜೊತೆ ನಾನು ಬಲವಂತವಾಗಿ ಬೇರ್ಪಡಬೇಕಾಯಿತು ಎಂದು ಪ್ರಿಯಕರ, ಕಿರುತೆರೆ ನಟ, ಆರೋಪಿ ಶೀಝಾನ್ ಖಾನ್ ಹೇಳಿದ್ದಾರೆ. ನಟಿ ತುನಿಶಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶೀಝಾನ್ ಖಾನ್‌ರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದು, ಈ ವಿಚಾರ ಬಾಯ್ಬಿಟ್ಟಿದ್ದಾರೆ.