ETV Bharat / entertainment

ಗೆಳೆಯ ವಿಜಯ್​ ವರ್ಮಾಗಾಗಿ ಫೋಟೋಗ್ರಾಫರ್​ ಆದ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ

author img

By ETV Bharat Karnataka Team

Published : Sep 9, 2023, 1:14 PM IST

Tamannaah Bhatia and Vijay Varma: ತಮನ್ನಾ ಭಾಟಿಯಾ ಮತ್ತು ವಿಜಯ್​ ವರ್ಮಾ ಜೊತೆಗಿರುವ ಕ್ಯೂಟ್​​ ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿವೆ.

Tamannaah Bhatia Vijay Varma
ತಮನ್ನಾ ಭಾಟಿಯಾ ವಿಜಯ್​ ವರ್ಮಾ

ಟಾಲಿವುಡ್​ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಮತ್ತು ವಿಜಯ್​ ವರ್ಮಾ ಸಿನಿ ವಲಯದಲ್ಲಿ ಪ್ರೇಮಪಕ್ಷಿಗಳಾಗಿ ಗುರುತಿಸಿಕೊಂಡಿದ್ದಾರೆ. ಕಳೆದ ಡಿಸೆಂಬರ್​ನಿಂದ ಈ ಜೋಡಿಯ ಪ್ರೇಮಪುರಾಣ ಇಂಟರ್​ನೆಟ್​ನಲ್ಲಿ ಜೋರಾಗೇ ಸದ್ದು ಮಾಡಿದೆ. ಲಸ್ಟ್ ಸ್ಟೋರಿಸ್​ 2ರ ಪ್ರಚಾರ ಸಂದರ್ಭದಲ್ಲಿ ತಮ್ಮ ಪ್ರೇಮಸಂಬಂಧವನ್ನು ಅಧಿಕೃತಗೊಳಿಸಿದರು. ಅಂದಿನಿಂದ ಹಲವು ಬಾರಿ ಈವೆಂಟ್​ಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಶುಕ್ರವಾರ ಸಂಜೆ ಕೂಡ ಮುಂಬೈನಲ್ಲಿ ನಡೆದ ಈವೆಂಟ್​ ಒಂದರಲ್ಲಿ ನಟಿ ತಮನ್ನಾ ಭಾಟಿಯಾ ಮತ್ತು ನಟ ವಿಜಯ್​ ವರ್ಮಾ ಕಾಣಿಸಿಕೊಂಡಿದ್ದಾರೆ. ಆನ್​ಲೈನ್​​ನಲ್ಲಿ ವೈರಲ್​ ಆಗುತ್ತಿರುವ ವಿಡಿಯೋ ಪ್ರಕಾರ, ಹಾಲ್ಗೆನ್ನೆ ಚೆಲುವೆ ತಮನ್ನಾ ಭಾಟಿಯಾ ಅವರು ಗೆಳೆಯ ವಿಜಯ್​ ವರ್ಮಾ ಅವರಿಗಾಗಿ ಫೋಟೋಗ್ರಾಫರ್​ ಆಗಿದ್ದಾರೆ.

ಸಮಾಜಿಕ ಜಾಲತಾಣದಲ್ಲಿ ಪಾಪರಾಜಿಯೋರ್ವರು ತಮ್ಮ ಅಧಿಕೃತ ಖಾತೆಯಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ಅದರಲ್ಲಿ, ನಟಿ ತಮನ್ನಾ ಭಾಟಿಯಾ ಅವರು ವಿಜಯ್​ ಅವರ ಫೋಟೋಗಳನ್ನು ಕ್ಲಿಕ್ಕಿಸುತ್ತಿರುವುದನ್ನು ಕಾಣಬಹುದಾಗಿದೆ. ಇಬ್ಬರೂ ಕಾರ್ಯಕ್ರಮಕ್ಕಾಗಿ ಸಖತ್​ ಮಾಡರ್ನ್​​ ಆಗಿ ರೆಡಿ ಆಗಿ ಬಂದಿದ್ದರು. ಈವೆಂಟ್​ ನಡೆಯುತ್ತಿದ್ದ ಸ್ಥಳದ ಹೊರಗೆ ಪಾಪರಾಜಿಗಳ ಕ್ಯಾಮರಾಗಳಿಗೆ ಬಹಳ ಸಂತೋಷದಿಂದ ಪೋಸ್​ ನೀಡಿದ್ದಾರೆ. ಲವ್​ಬರ್ಡ್ಸ್​​ಗಳ ಕೆಮಿಸ್ಟ್ರಿ ಫೈಯರ್​ ಎನ್ನುವಂತಿತ್ತು. ಈ ವಿಡಿಯೋ ನೋಡಿದ ಹಲವರು ಮೇಡ್​ ಫಾರ್ ಈಚ್​ ಅದರ್​ ಎಂದು ಕಾಮೆಂಟ್​ ಮಾಡಿದ್ದಾರೆ.

ಈವೆಂಟ್​ಗಾಗಿ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಪರ್ಪಲ್​ ಕಲರ್​ ಸೀಕ್ವಿನ್​ ಬಾಡಿ ಹಗ್ಗಿಂಗ್​​ ಔಟ್​ಫಿಟ್​ ಅನ್ನು ಆಯ್ದುಕೊಂಡಿದ್ದಾರೆ. ಅದಕ್ಕೆ ಮ್ಯಾಚ್​ ಆಗುವ ನೆಕ್ಲೇಸ್​ ಧರಿಸಿದ್ದರು. ಕೇಶರಾಶಿ ಪ್ರೀಯಾಗಿತ್ತು. ಬ್ಯಾಕ್​​ಲೆಸ್​ ಡ್ರೆಸ್​​ನಲ್ಲಿ ಸಖತ್​ ಬೋಲ್ಡ್​ ಲುಕ್​​ ಕೊಟ್ಟರು. ಎಂದಿನಂತೆ ಸಖತ್ ಶೈನಿಂಗ್​ ಆ್ಯಂಡ್​​ ಅಟ್ರ್ಯಾಕ್ಟಿವ್ ಲುಕ್​ನಲ್ಲಿ ಕಾಣಿಸಿಕೊಂಡರು. ಮತ್ತೊಂದೆಡೆ ನಟ ವಿಜಯ್​ ವರ್ಮಾ ಅವರು ಬ್ಲ್ಯಾಕ್​ ಸೂಟ್​ ಧರಿಸಿ ಸಖತ್​ ಕ್ಲಾಸಿಯಾಗಿ ಕಾಣಿಸಿಕೊಂಡರು.

ಇದನ್ನೂ ಓದಿ: 'ಪರಿಣಿತಿ ಚೋಪ್ರಾರನ್ನು ನನಗಾಗಿ ಕೊಟ್ಟಿದ್ದಕ್ಕೆ ದೇವರಿಗೆ ಧನ್ಯವಾದ': ಸಂಸದ ರಾಘವ್​ ಚಡ್ಡಾ

ಸೌತ್​ ಸಿನಿಮಾ ಇಂಡಸ್ಟ್ರಿಯ ಟಾಪ್​ ಹೀರೋಯಿನ್​​ ತಮನ್ನಾ ಭಾಟಿಯಾ ಮತ್ತು ಬಾಲಿವುಡ್​ ಪ್ರತಿಭೆ ವಿಜಯ್​ ವರ್ಮಾ ಮೊದಲ ಬಾರಿ ಲಸ್ಟ್ ಸ್ಟೋರಿಸ್​ 2 ಶೂಟಿಂಗ್​ ಸೆಟ್​ನಲ್ಲಿ ಭೇಟಿಯಾದರು. ಅಂತಿಮವಾಗಿ ಪ್ರೇಮಪಕ್ಷಿಗಳಾಗಿ ಹೊರಹೊಮ್ಮಿದರು. 2023 ನ್ಯೂ ಇಯರ್​ ಪಾರ್ಟಿಯಲ್ಲಿ ಇಬ್ಬರೂ ಚುಂಬಿಸಿದ್ದ ವಿಡಿಯೋ ಸಖತ್​ ವೈರಲ್​ ಆಗಿ, ಡೇಟಿಂಗ್​ ವದಂತಿ ಪ್ರಾರಂಭಗೊಂಡಿತು. ಫೈನಲಿ ಲಸ್ಟ್ ಸ್ಟೋರಿಸ್​ 2 ಪ್ರಮೋಶನಲ್​​ ಈವೆಂಟ್​ನಲ್ಲಿ​ ತಮ್ಮ ಪ್ರೀತಿಯ ವಿಚಾರವನ್ನು ಬಹಿರಂಗಪಡಿಸಿದರು.

ಇದನ್ನೂ ಓದಿ: Jawan: ಬಾಕ್ಸ್​ ಆಫೀಸ್​ನಲ್ಲಿ 'ಜವಾನ್​' ಅಬ್ಬರ: ಅಬ್ಬಬ್ಬಾ.. ಎರಡು ದಿನದಲ್ಲಿ ಇಷ್ಟೊಂದು ಕಲೆಕ್ಷನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.