ETV Bharat / entertainment

None of your business: ವೈಯಕ್ತಿಕ ಜೀವನದ ಬಗ್ಗೆ ಕಾಮೆಂಟ್​​ ಮಾಡಿದವರಿಗೆ ಸುಶ್ಮಿತಾ ಸೇನ್​ ತಿರುಗೇಟು - ಸುಶ್ಮಿತಾ ಸೇನ್ ಲಲಿತ್​ ಮೋದಿ

Sushmita Sen on negative comments: ನೆಗೆಟಿವ್​ ಕಾಮೆಂಟ್​ಗಳ ಬಗ್ಗೆ ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್​ ಪ್ರತಿಕ್ರಿಯಿಸಿದ್ದಾರೆ.

Sushmita Sen
ನಟಿ ಸುಶ್ಮಿತಾ ಸೇನ್
author img

By

Published : Aug 5, 2023, 6:45 PM IST

ಮಾಜಿ ವಿಶ್ವಸುಂದರಿ ಸುಶ್ಮಿತಾ ಸೇನ್​ ನಟನೆಯ ಮುಂಬರುವ ಪ್ರೊಜೆಕ್ಟ್​ 'ತಾಲಿ'. ಸೀರಿಸ್​ನಲ್ಲಿ ಬಾಲಿವುಡ್​ ನಟಿ ತೃತೀಯಲಿಂಗಿ ಪಾತ್ರದಲ್ಲಿ ನಟಿಸಿದ್ದಾರೆ. ಮೊಟ್ಟ ಮೊದಲ ಬಾರಿಗೆ ಸುಶ್ಮಿತಾ ಸೇನ್​ ಅವರು ಟ್ರಾನ್ಸ್​ಜೆಂಡರ್​ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಾಲಿ ಸರಣಿ ತೃತೀಯಲಿಂಗಿ ಕಾರ್ಯಕರ್ತೆ ಶ್ರೀ ಗೌರಿ ಸಾವಂತ್​​ ಅವರ ಜೀವನಾಧಾರಿತ ಕಥೆಯಾಗಿದೆ. ತೆರೆ ಮೇಲೆ ಶ್ರೀ ಗೌರಿ ಸಾವಂತ್​​ ಆಗಿ ಸುಶ್ಮಿತಾ ಅವರು ದರ್ಶನ ಕೊಡಲಿದ್ದು, ಸಿನಿಮಾ ಪ್ರಚಾರ ಭಾಗವಾಗಿ ಸಂದರ್ಶನಗಳಲ್ಲಿ ಭಾಗಿಯಾಗುತ್ತಿದ್ದಾರೆ. ತಾಲಿ ಪ್ರಮೋಶನ್​ ಸಂದರ್ಶನವೊಂದರಲ್ಲಿ ನಟಿ ವೈಯಕ್ತಿಕ ಜೀವನ ವಿಚಾರವಾಗಿ ಟೀಕಿಸಿದವರಿಗೆ ತಕ್ಕ ಉತ್ತರ ಕೊಟ್ಟಿದ್ದಾರೆ.

ಇಂಡಿಯನ್​ ಪ್ರೀಮಿಯರ್​ ಲೀಗ್​ನ ಮಾಜಿ ಅಧ್ಯಕ್ಷ ಲಲಿತ್​ ಮೋದಿ ಲಂಡನ್​ನಿಂದ ಸುಶ್ಮಿತಾ ಅವರೊಂದಿಗೆ ಕ್ಲಿಕ್ಕಿಸಿದ್ದ ಫೋಟೋಗಳನ್ನು ಹಂಚಿಕೊಂಡಿದ್ದರು. ಆ ವೇಳೆ ಸುಶ್ಮಿತಾ ಅವರು ಸಖತ್​ ಸುದ್ದಿಯಾದರು. ಅಲ್ಲದೇ ಆ ಸಮಯದಲ್ಲಿ ಸುಶ್ಮಿತಾ ಅವರ ಹೆಸರು ಮಾಡೆಲ್​​ ರೋಹ್ಮನ್​ ಶಾಲ್​ ಜೊತೆ ಕೇಳಿ ಬರುತ್ತಿತ್ತು. ಆ ಸಂದರ್ಭ ಲಲಿತ್​ ಮೋದಿ ಜೊತೆ ಸುಶ್ಮಿತಾ ಅವರ ರೊಮ್ಯಾಂಟಿಕ್​ ಫೋಟೋಗಳನ್ನು ಕಂಡ ನೆಟ್ಟಿಗರು ನಟಿ ವಿರುದ್ಧ ಕಿಡಿಕಾರಿದ್ದರು. ಸುಶ್ಮಿತಾ ಸೇನ್​ ಅವರನ್ನು 'gold digger' ಎಂದು ಟೀಕಿಸಲಾಯಿತು. ಆ ವೇಳೆ ಮಾಜಿ ವಿಶ್ವಸುಂದರಿ ಕೂಡ ಸುಧೀರ್ಘ ಬರಹದೊಂದಿಗೆ ನೆಟ್ಟಿಗರಿಗೆ ಪ್ರತ್ಯುತ್ತರ ಕೊಟ್ಟಿದ್ದರು.

ಇದೀಗ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ನಟಿ, ಅವಮಾನ ಅಥವಾ ನೆಗೆಟಿವ್​ ಕಾಮೆಂಟ್ಸ್ ನನ್ನ ಮೇಲೆ ಪರಿಣಾಮ ಬೀರಲು ನಾನು ಬಿಡುವುದಿಲ್ಲ. ಆತ್ಮವಿಶ್ವಾಸದ ಶಕ್ತಿಯನ್ನು ನಂಬುವ ನಾನು ನನ್ನ ಮೌಲ್ಯವನ್ನು ಇತರರ ಅಭಿಪ್ರಾಯಗಳಿಂದ ವ್ಯಾಖ್ಯಾನಿಸಲು ನಾನು ಬಿಡುವುದಿಲ್ಲ. ಈ ಮನಸ್ಥಿತಿ ತನ್ನನ್ನು ನೋಯಿಸುವ ಟೀಕೆಗಳಿಂದ ಪ್ರಭಾವಿತಳಾಗದಂತೆ ನೋಡಿಕೊಳ್ಳುತ್ತದೆ. ತನ್ನ ಜೀವನದಲ್ಲಿ ಅಪ್ರಸ್ತುತವಲ್ಲದ್ದನ್ನು ತಳ್ಳಿಹಾಕಲು ಅನುವು ಮಾಡಿಕೊಡುತ್ತದೆ. ಅವಮಾನವನ್ನು ಸ್ವೀಕರಿಸಿದರೆ ಮಾತ್ರ ಅದು ಅವಮಾನ. ಅಂತಹ ನೆಗೆಟಿವ್​ ಕಾಮೆಂಟ್​ಗಳನ್ನು ನಾನು ಸ್ವೀಕರಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಸ್ಟ್ರಾಂಗ್​ ವುಮನ್ ಏಕೆ​ ರೊಮ್ಯಾಂಟಿಕ್​ ಆಗಿರಬಾರದು? ಚುಂಬನ ದೃಶ್ಯಗಳ ಬಗ್ಗೆ ಶಬಾನಾ ಅಜ್ಮಿ ಪ್ರತಿಕ್ರಿಯೆ

ನನ್ನ ವೈಯಕ್ತಿಕ ಜೀವನದ ಕೆಲ ವಿಚಾರಗಳು ಕೇವಲ ನನಗೆ ಸಂಬಂಧಿಸಿದ್ದಾಗಿದೆ. ಅವುಗಳು ಜನರ ಸ್ವತ್ತಲ್ಲ. ನಟಿ ಅಭಿಮಾನಿಗಳ ಕುತೂಹಲವನ್ನು ಒಪ್ಪಿಕೊಂಡರೂ, ತಮ್ಮ ಖಾಸಗಿ ವಿಷಯಗಳು ಊಹಾಪೋಹಗಳಿಗೆ ಅಥವಾ ತೀರ್ಪಿಗೆ ಮುಕ್ತವಾಗಿರಬಾರದು ಎಂದು ತಿಳಿಸಿದ್ದಾರೆ. ಇದು ನಿಮ್ಮ ವ್ಯವಹಾರವಲ್ಲ ("None of your business") ಎಂದು ಹೇಳುವ ಮೂಲಕ ತಮ್ಮ ವೈಯಕ್ತಿಕ ಜೀವನದ ಸುತ್ತ ಗಡಿ ಸ್ಥಾಪಿಸಿಕೊಂಡರು.

ಇದನ್ನೂ ಓದಿ: 'ಪ್ರತೀ ಶುಕ್ರವಾರ ನಟರ ಭವಿಷ್ಯ ನಿರ್ಧಾರವಾಗುತ್ತದೆ': ಅಭಿಷೇಕ್​ ಬಚ್ಚನ್​

ಕಳೆದ ವರ್ಷ ಇನ್​ಸ್ಟಾಗ್ರಾಮ್​ನಲ್ಲಿ, ಜಗತ್ತಿನಲ್ಲಿ ಹೆಚ್ಚುತ್ತಿರುವ ನಕಾರಾತ್ಮಕತೆ ಬಗ್ಗೆ ತಮ್ಮ ನಿರಾಶೆ ವ್ಯಕ್ತಪಡಿಸಿದ್ದರು. ಜೊತೆಗೆ ತಮ್ಮನ್ನು ವಜ್ರವೆಂದು ಪರಿಗಣಿಸಿ ಸೋಷಿಯಲ್​ ಮೀಡಿಯಾ ಪೋಸ್ಟ್ ಹಾಕಿದ್ದರು. ತಮ್ಮನ್ನು ತಾವು ವಜ್ರವೆಂದು ತಿಳಿಸಿ, ಅದನ್ನು ಹೆಮ್ಮೆಯಿಂದ ಖರೀದಿಸುತ್ತೇನೆ ಎಂದು ತಿಳಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.