ETV Bharat / entertainment

ನಟಿ ಸಮಂತಾ ರುತ್ ಪ್ರಭು "ಹ್ಯಾಪಿ ಪ್ಲೇಸ್​" ಯಾವುದು ಗೊತ್ತಾ? "ಚೇತರಿಕೆಯ ಪ್ರಯಾಣ"ದಲ್ಲಿ ಸೌತ್​ ಸುಂದರಿ - ಇಶಾ ಫೌಂಡೇಶನ್​

ನಟಿ ಸಮಂತಾ ರುತ್ ಪ್ರಭು ತಮಿಳುನಾಡು ಪ್ರವಾಸವನ್ನು ಎಂಜಾಯ್​ ಮಾಡುತ್ತಿದ್ದಾರೆ.

Samantha Ruth Prabhu
ನಟಿ ಸಮಂತಾ ರುತ್ ಪ್ರಭು ತಮಿಳುನಾಡು ಪ್ರವಾಸ
author img

By

Published : Jul 16, 2023, 3:41 PM IST

ದಕ್ಷಿಣ ಚಿತ್ರರಂಗದ ಪ್ರಸಿದ್ಧ ನಟಿ ಸಮಂತಾ ರುತ್ ಪ್ರಭು ಸಿನಿಮಾಗಳಿಂದ ಸಣ್ಣ ಬ್ರೇಕ್​ ಪಡೆದಿದ್ದಾರೆ. ಆದ್ರೆ ಸೌತ್​ ಸುಂದರಿ ಸಾಮಾಜಿಕ ಮಾಧ್ಯಮದಲ್ಲಿ ಬಹಳ ಸಕ್ರಿಯರಾಗಿದ್ದಾರೆ. ಅನಾರೋಗ್ಯದ ವಿರುದ್ಧ ಹೋರಾಡುತ್ತಿರುವ ನಟಿ ಸದ್ಯ ಆರೋಗ್ಯ ಚೇತರಿಕೆಗೆ ಆದ್ಯತೆ ನೀಡಿದ್ದಾರೆ. ಈ ಹಿನ್ನೆಲೆ ತಾವು ಒಪ್ಪಿಕೊಂಡಿರುವ ಪ್ರಾಜೆಕ್ಟ್​ಗಳನ್ನು ಪೂರ್ಣಗೊಳಿಸಿದ್ದಾರೆ. ಶನಿವಾರ ಸಮಂತಾ ಅವರು ತಮಿಳುನಾಡಿನ ವೆಲ್ಲೂರಿನ ಶ್ರೀಪುರಂ ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡಿದ ಕ್ಷಣಗಳನ್ನು ಹಂಚಿಕೊಂಡಿದ್ದರು. ಇಂದು ತಮ್ಮ "ಹ್ಯಾಪಿ ಪ್ಲೇಸ್​" ಎಂದು ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಇಶಾ ಯೋಗ ಸೆಂಟರ್​ಗೆ ಭೇಟಿ: ನಟಿ ಸಮಂತಾ ರುತ್ ಪ್ರಭು ಇಂದು ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ತಮ್ಮ ಆಧ್ಯಾತ್ಮಿಕ ಪ್ರಯಾಣದ ಫೋಟೋ ಶೇರ್ ಮಾಡಿದ್ದಾರೆ. ತಮಿಳುನಾಡು ರಾಜ್ಯದ ಕೊಯಮತ್ತೂರಿನಲ್ಲಿರುವ ವೆಲ್ಲಿಯಂಗಿರಿಯ ತಪ್ಪಲಿನಲ್ಲಿರುವ ಇಶಾ ಯೋಗ ಸೆಂಟರ್​ನ ಫೋಟೋವನ್ನು ಹಂಚಿಕೊಂಡಿದ್ದಾರೆ. ಶನಿವಾರದಂದು ವೆಲ್ಲೂರಿನ ಶ್ರೀಪುರಂ ಗೋಲ್ಡನ್ ಟೆಂಪಲ್‌ ಫೋಟೋ ಶೇರ್ ಮಾಡಿದ್ದರು.

ಸಮಂತಾ ಹ್ಯಾಪಿ ಪ್ಲೇಸ್: ಶಾಕುಂತಲಾ ಸಿನಿಮಾ ನಟಿ ಸಮಂತಾ ರುತ್ ಪ್ರಭು ಇಶಾ ಫೌಂಡೇಶನ್‌ನ ಫೋಟೋ ಹಂಚಿಕೊಳ್ಳುತ್ತ, "ಹ್ಯಾಪಿ ಪ್ಲೇಸ್" ಎಂದು ಬರೆದು ವೈಟ್​ ಹಾರ್ಟ್ ಎಮೋಜಿಯನ್ನು ಹಾಕಿದ್ದಾರೆ. ತಮ್ಮ ಪೋಸ್ಟ್‌ನಲ್ಲಿ ಆಧ್ಯಾತ್ಮಿಕ ಸಂಸ್ಥೆ ಇಶಾ ಯೋಗ ಸೆಂಟರ್​ ಅನ್ನು ಟ್ಯಾಗ್​​ ಮಾಡಿದ್ದಾರೆ. ಸಮಂತಾ ಅವರು ಇಶಾ ಫೌಂಡೇಶನ್‌ನ ಸಂಸ್ಥಾಪಕರಾದ ಸದ್ಗುರು ಜಗ್ಗಿ ವಾಸುದೇವ್​ ಅವರ ಅಭಿಮಾನಿ ಆಗಿದ್ದಾರೆ. ನಟಿ ಆಗಾಗ್ಗೆ ಇಶಾ ಫೌಂಡೇಶನ್ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಸದ್ಗುರುಗಳ ಫಿಲಾಸಫಿಕಲ್​ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಸಿನಿಮಾಗಳಿಂದ ಬ್ರೇಕ್​: 36ರ ಹರೆಯದ ನಟಿ ಕಳೆದರೆಡು ವಾರದಿಂದ ಬ್ರೇಕ್​ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಅರೋಗ್ಯದೆಡೆಗೆ ಗಮನ ಕೊಡುವ ಸಲುವಾಗಿ ನಟಿ ಒಂದು ವರ್ಷ ಸಿನಿಮಾಗಳಿಂದ ಬ್ರೇಕ್​ ಪಡೆಯುವುದಾಗಿ ವರದಿಗಳು ಸೂಚಿಸಿದ್ದವು. ಇತ್ತ ನಟಿ ಮತ್ತು ಅವರ ಹೇರ್ ಸ್ಟೈಲಿಸ್ಟ್ ರೋಹಿತ್ ಭಟ್ಕರ್ ಅವರ ಸೋಷಿಯಲ್​ ಮೀಡಿಯಾ ಪೋಸ್ಟ್ ಸಹ ಪರೋಕ್ಷವಾಗಿ ಅದನ್ನೇ ಹೇಳಿದ್ದವು.

Samantha Ruth Prabhu
ನಟಿ ಸಮಂತಾ ರುತ್ ಪ್ರಭು ಇನ್​ಸ್ಟಾಗ್ರಾಮ್​ ಪೋಸ್ಟ್

ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ಅಭಿಷೇಕ್ ಬಚ್ಚನ್ ಸ್ಪರ್ಧೆ ಸಾಧ್ಯತೆ: ಯಾವ ಪಕ್ಷ, ಕ್ಷೇತ್ರ ಯಾವುದು ಗೊತ್ತೇ?

ಆದ್ರೆ 'ಸಿನಿಮಾಗಳಿಂದ ಬ್ರೇಕ್​​' ವಿಚಾರದ ಬಗ್ಗೆ ನಟಿ ಪ್ರತಿಕ್ರಿಯಿಸಿಲ್ಲ. ಇತ್ತ ಹೇರ್ ಸ್ಟೈಲಿಸ್ಟ್ ರೋಹಿತ್ ಭಟ್ಕರ್ ಅವರು ನಟಿಯ ವಿರಾಮವನ್ನು ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಪರೋಕ್ಷವಾಗಿ ಖಚಿತಪಡಿಸಿದ್ದಾರೆ. ರೋಹಿತ್ ತಮ್ಮ ಭಾವನಾತ್ಮಕ ಪೋಸ್ಟ್‌ನಲ್ಲಿ, ಸಮಂತಾ ಹಿಂದೆಂದಿಗಿಂತಲೂ ಬಲಶಾಲಿಯಾಗಿ ಹಿಂತಿರುಗಲು "ಚೇತರಿಕೆಯ ಪ್ರಯಾಣ"ದಲ್ಲಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಜೂ. ಎನ್​ಟಿಆರ್ 'ದೇವರ' ಸಿನಿಮಾದಲ್ಲಿ ಅಲ್ಲು ಅರ್ಜುನ್​ ಪುತ್ರಿ: 6ರ ಹರೆಯದ ಅಲ್ಲು ಅರ್ಹಾ ಸಂಭಾವನೆ ಕೇಳಿದ್ರೆ ತಲೆತಿರುಗುತ್ತೆ!

ಮೈಯೋಸಿಟಿಸ್ ಕಾಯಿಲೆಗೆ ಚಿಕಿತ್ಸೆ ಪಡೆಯುವ ಸಲುವಾಗಿ ಅಮೆರಿಕಕ್ಕೆ ತೆರಳುವ ಸಾಧ್ಯತೆಗಳಿವೆ ಎಂದು ವರದಿಗಳು ತಿಳಿಸಿದ್ದವು. ಇತ್ತೀಚೆಗಷ್ಟೇ ಅವರ ಮುಂದಿನ ಸಿಟಾಡೆಲ್​ ಮತ್ತು ಕುಶಿ ಪ್ರಾಜೆಕ್ಟ್​ನ ಶೂಟಿಂಗ್​​ ಮುಗಿಸಿದ್ದಾರೆ. ಸದ್ಯ ನಟಿ ಆಧ್ಯಾತ್ಮಿಕ ಪ್ರವಾಸದಲ್ಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.