ಬಾಲಿವುಡ್ ನಟಿ ರವೀನಾ ಟಂಡನ್ ಇತ್ತೀಚೆಗೆ ತಮ್ಮ ಮಕ್ಕಳೊಂದಿಗೆ ಮಧ್ಯಪ್ರದೇಶದ ಬೋರಿ ಸಫಾರಿ ಲಾಡ್ಜ್ನ ಸಾತ್ಪುರ ಅರಣ್ಯಕ್ಕೆ ತೆರಳಿದ್ದು ಎಂಜಾಯ್ ಮಾಡುತ್ತಿದ್ದಾರೆ. ಕೆಲಸದ ಒತ್ತಡದ ನಡುವೆ ಕೆಜಿಎಫ್ ನಟಿ ಕೊಂಚ ವಿರಾಮ ತೆಗೆದುಕೊಂಡು ನಿರಾಳರಾಗಿರುವಂತೆ ಕಾಣುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ಕುಟುಂಬದೊಂದಿಗಿರುವ ಸುಂದರ ಚಿತ್ರವನ್ನು ರವೀನಾ ಹಂಚಿಕೊಂಡಿದ್ದಾರೆ. "ನನಗೆ ಅತಂತ್ಯ ಪ್ರಿಯವಾದ ಜಾಗಕ್ಕೆ ಬಂದಿದ್ದೇನೆ, ಜೆಹಾನ್ ನುಮಾ ವೈಲ್ಡರ್‌ನೆಸ್ ನಿಮ್ಮ ಆತಿಥ್ಯಕ್ಕಾಗಿ ಧನ್ಯವಾದಗಳು..." ಎಂದು ಬರೆದುಕೊಂಡಿದ್ದಾರೆ.
ರವೀನಾ ತಮ್ಮ ಮುಂದಿನ ಸಿನಿಮಾ ಚಿತ್ರೀಕರಣಕ್ಕಾಗಿ ಪ್ರಸ್ತುತ ಭೋಪಾಲ್ನ ಜೆಹಾನ್ ನುಮಾ ರಿಟ್ರೀಟ್ನಲ್ಲಿ ತಂಗಿದ್ದಾರೆ.
ಇದನ್ನೂ ಓದಿ:ಶೆಹನಾಜ್ ಗಿಲ್ ಅಭಿಮಾನಿಗಳ ಹಾಟ್ ಫೇವರಿಟ್.. ವಿಡಿಯೋ ನೋಡಿ