ETV Bharat / entertainment

ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಟಿ ರವೀನಾ ಟಂಡನ್ ಜಿಪ್ಸಿ.. ಜಾಲತಾಣದಲ್ಲಿ ವಿಡಿಯೋ ವೈರಲ್, ತನಿಖೆ

ಸಾತ್ಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜಂಗಲ್ ಸಫಾರಿ ವೇಳೆ, ಯಾವುದೇ ವಾಹನವನ್ನು ಕಾಡು ಪ್ರಾಣಿಗಳ ಹತ್ತಿರ ತೆಗೆದುಕೊಂಡು ಹೋಗುವಂತಿಲ್ಲ. ಆದರೆ ಹುಲಿ ಸಮೀಪ ಜಿಪ್ಸಿ ವಾಹನದೊಂದಿಗೆ ಹೋಗಿದ್ದ ವಿಡಿಯೋವನ್ನು ನಟಿ ರವೀನಾ ಟಂಡನ್ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.

Actress Raveena Tandon
ನಟಿ ರವೀನಾ ಟಂಡನ್
author img

By

Published : Nov 29, 2022, 6:21 PM IST

ನರ್ಮದಾಪುರಂ: ಬಾಲಿವುಡ್ ನಟಿ ರವೀನಾ ಟಂಡನ್ ಕೆಲವು ದಿನಗಳಿಂದ ವಿವಾದದ ಸುಳಿಗೆ ಸಿಲುಕಿದ್ದಾರೆ. ಚಿತ್ರವೊಂದರ ಶೂಟಿಂಗ್‌ಗಾಗಿ ಇತ್ತೀಚೆಗೆ ಮಧ್ಯಪ್ರದೇಶಕ್ಕೆ ಬಂದಿದ್ದರು. ಬಿಡುವಿನ ವೇಳೆ ಅರಣ್ಯ ವಿಹಾರಕ್ಕೆ ತೆರಳಿದ್ದಾಗ ಕೆಲ ಪ್ರವಾಸಿಗರು ಹುಲಿ ಮೇಲೆ ಕಲ್ಲು ತೂರಾಟ ನಡೆಸಿರುವುದು ದೃಶ್ಯದಲ್ಲಿ ಕಂಡು ಬಂದಿದೆ. ಆದರೆ ಈ ಘಟನೆ ನಟಿ ರವೀನಾ ಟಂಡನ್ ರನ್ನು ಕೆರಳಿಸಿದೆ. ಕಲ್ಲುತೂರಾಟ ನಡೆಸಿದವರ ವಿರುದ್ಧ ರವೀನಾ ಟಂಡನ್ ಅವರು ಭೋಪಾಲ್​ ವನ್ಯಜೀವಿ ಇಲಾಖೆಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು.

ನಟಿ ಸ್ವತಃ ತಾವು ವನವಿಹಾರ ನಿಯಮ ಗಮನದಲ್ಲಿಟ್ಟುಕೊಂಡು ಅರಣ್ಯವನ್ನು ಸ್ವಚ್ಛಗೊಳಿಸುವ ವೇಳೆ ಫೋಟೋ, ವಿಡಿಯೋ ಕ್ಲಿಕ್ಕಿಸಿರುವುದನ್ನು ದೃಶ್ಯದಲ್ಲಿ ಕಾಣಬಹುದು. ಪ್ರವಾಸಿಗರು ಜಂಗಲ್ ಸಫಾರಿ ವೇಳೆ ಕಾಡುಪ್ರಾಣಿಗಳ ಹತ್ತಿರ ಹೋಗಬಾರದೆಂಬ ನಿಯಮವಿದೆ. ಆದರೆ ಕಾಡುಪ್ರಾಣಿಗಳ ಸಮೀಪ ಹೋಗಿರುವ ವಿಡಿಯೋವನ್ನು ನಟಿ ರವೀನಾ ಟಂಡನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ತನಿಖೆಗೆ ಆದೇಶಿಸಲಾಗಿದೆ.

ಹುಲಿ ಬಳಿ ನಟಿ ಜಿಪ್ಸಿ: ವಾರದ ಹಿಂದೆ ಸಾತ್ಪುರ ಹುಲಿ ಸಂರಕ್ಷಿತ ಪ್ರದೇಶದ ಚುರ್ನಾದಲ್ಲಿ ಜಂಗಲ್ ಸಫಾರಿಗೆ ಬಂದಿದ್ದ ಚಿತ್ರನಟಿ ರವೀನಾ ಟಂಡನ್ ಅವರ ಜಿಪ್ಸಿ ಹತ್ತಿರ ಹುಲಿ ಬಂದಿರುವ ವಿಡಿಯೋ ಬಹಿರಂಗವಾಗಿದೆ. ಈ ಬಗ್ಗೆ ತನಿಖೆಯೂ ಶುರುವಾಗಿದೆ. ನಿಯಮದ ಪ್ರಕಾರ, ಸಾತ್ಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಜಂಗಲ್ ಸಫಾರಿ ವೇಳೆ, ಯಾವುದೇ ವಾಹನವನ್ನು ಕಾಡು ಪ್ರಾಣಿಗಳ ಹತ್ತಿರ ತೆಗೆದುಕೊಂಡು ಹೋಗುವಂತಿಲ್ಲ. ಆದ್ರೆ ರವೀನಾ ಟಂಡನ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಕೆಲವು ಪೊಟೋಗಳು ಮತ್ತು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ 'ನನ್ನ ಹೃದಯ ಎಲ್ಲಿಗೆ ಹಿಂತಿರುಗಿದೆ' (Back to where my heart belongs) ಎಂದು ಬರೆಯಲಾಗಿದೆ, ವಿಡಿಯೋದಲ್ಲಿ, ಹುಲಿ ರವೀನಾ ಅವರ ಜಿಪ್ಸಿಗೆ ಹತ್ತಿರ ಬರುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಜಿಪ್ಸಿಯನ್ನು ಹುಲಿಯ ಬಳಿ ಸುಮಾರು 20 ಮೀಟರ್ ವರೆಗೆ ತೆಗೆದುಕೊಂಡು ಹೋಗಲಾಗಿದೆ. ಸಾತ್ಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ವಹಣೆ ಬಗ್ಗೆ ತನಿಖೆ ನಡೆಸುವಂತೆ ಸೂಚನೆ ನೀಡಲಾಗಿದೆ. ಎಸ್‌ಡಿಒ ಧೀರಜ್ ಸಿಂಗ್ ಚೌಹಾಣ್ ಅವರು ತನಿಖೆ ನಡೆಸಲಿದ್ದಾರೆ.

ಸಮಗ್ರ ತನಿಖೆ : ಈ ಕುರಿತು ಅರಣ್ಯ ಇಲಾಖೆ ಉಪನಿರ್ದೇಶಕ ಸಂದೀಪ್ ಮಾತನಾಡಿ, ನಟಿ ರವೀನಾ ಖಾಸಗಿ ಪ್ರವಾಸದ ಸಂದರ್ಭದಲ್ಲಿ ಚಾರಣಕ್ಕೆ ಬಂದಿದ್ದರು. ಈ ಸಮಯದಲ್ಲಿ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಈ ಕುರಿತು ತನಿಖೆಗೆ ಆದೇಶಿಸಲಾಗಿದೆ. ಇದರೊಂದಿಗೆ ಪ್ರವಾಸಿಗರು ಜಂಗಲ್ ಸಫಾರಿ ವೇಳೆ ಕಾಡುಪ್ರಾಣಿಗಳ ಹತ್ತಿರ ಹೋಗದಂತೆ ಮನವಿ ಮಾಡಲಾಗಿದೆ. ತಪ್ಪಿತಸ್ಥರಾಗಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇದೇ ವೇಳೆ ಅರಣ್ಯ ಇಲಾಖೆ ನಿರ್ದೇಶಕಿ ಪದ್ಮಪ್ರಿಯಾ ಬಾಲಕೃಷ್ಣ ಅವರ ಹೇಳಿಕೆ ಮುನ್ನೆಲೆಗೆ ಬಂದಿದೆ. "ಮೊದಲ ವಿಡಿಯೋ ನೋಟದಲ್ಲಿ ತನಗೆ ಯಾವುದೋ ಕಲ್ಲು ಬಡಿಯುತ್ತಿರುವಂತೆ ಕಾಣುತ್ತಿಲ್ಲ, ಖಂಡಿತಾ ಕೂಗಿದ ಶಬ್ದ ಕೇಳಿಬರುತ್ತಿದೆ. ಈ ಬಗ್ಗೆ ಪೂರ್ತಿ ವಿಡಿಯೋ ಇದ್ದರೆ ಪರಿಶೀಲಿಸಿ ತನಿಖೆ ನಡೆಸುತ್ತೇನೆ. ಆದರೆ ಈಗ ಆ್ಯಕ್ಷನ್ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಜನರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ರಿಷಬ್​ ಶೆಟ್ಟಿಯ 'ಶಿವಮ್ಮ' ಚಿತ್ರಕ್ಕೆ ಅಂತಾರಾಷ್ಟ್ರೀಯ ಪ್ರಶಸ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.