ETV Bharat / entertainment

ಸೌತ್​ ಸಿನಿಮಾ ಬಗ್ಗೆ ರಶ್ಮಿಕಾ ಹೇಳಿಕೆ.. ಟ್ರೋಲಿಗರಿಗೆ ಮತ್ತೆ ಗುರಿಯಾದ ಮಂದಣ್ಣ - ಮಿಷನ್ ಮಜ್ನು

ಸೌತ್​ ಸಿನಿಮಾ ಬಗ್ಗೆ ರಶ್ಮಿಕಾ ಹೇಳಿಕೆ - ಬಾಲಿವುಡ್ ಬಗ್ಗೆ ಕೊಂಡಾಡಿದ ಮಂದಣ್ಣ - ಮತ್ತೆ ಟ್ರೋಲಿಗರಿಗೆ ಗುರಿಯಾದ ನಟಿ.

actress rashmika mandanna
ನಟಿ ರಶ್ಮಿಕಾ ಮಂದಣ್ಣ
author img

By

Published : Dec 29, 2022, 4:09 PM IST

Updated : Dec 29, 2022, 4:24 PM IST

ನಟಿ ರಶ್ಮಿಕಾ ಮಂದಣ್ಣ

ಕಿರಿಕ್​ ಪಾರ್ಟಿ ಸಿನಿಮಾ ಮೂಲಕ ನ್ಯಾಷನಲ್​ ಕ್ರಶ್​ ಎಂದು ಶೈನ್​ ಆದ ನಟಿ ರಶ್ಮಿಕಾ ಮಂದಣ್ಣ ಈಗ ಟೀಕೆಗಳ ಮಳೆಗೆ ತತ್ತರಗೊಂಡಿದ್ದಾರೆ. ಸಿನಿಮಾ, ಅಭಿನಯ ಚೆನ್ನಾಗಿದ್ದರೂ ಟೀಕೆ, ಟ್ರೋಲ್​ಗಳಿಂದಲೇ ಹೆಚ್ಚು ಸುದ್ದಿಯಾಗುತ್ತಿರುತ್ತಾರೆ. ಇದೀಗ ದಕ್ಷಿಣ​ ಸಿನಿಮಾ ರಂಗದ ಬಗ್ಗೆ ರಶ್ಮಿಕಾ ಹೇಳಿಕೆ ಕೊಟ್ಟಿದ್ದು ದಕ್ಷಿಣ ಭಾರತ ಸಿನಿ ಪ್ರಿಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಮಿಷನ್ ಮಜ್ನು ಸಾಂಗ್​ ರಿಲೀಸ್: ನಟಿ ರಶ್ಮಿಕಾ ಮಂದಣ್ಣ ಅವರು ಡಿಸೆಂಬರ್ 25ರಂದು ತಮ್ಮ ಮುಂಬರುವ ಹಿಂದಿ ಭಾಷೆಯ ಮಿಷನ್ ಮಜ್ನು ಚಿತ್ರದ ಹಾಡು ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದರು. ರಬ್ಬಾ ಜಂಡಾ ಹಾಡು ಬಿಡುಗಡೆ ಸಮಾರಂಭದಲ್ಲಿ ಅವರು ನೀಡಿರುವ ಹೇಳಿಕೆ ಈಗ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಮಾಧ್ಯಮ ಸಂವಾದದ ಸಂದರ್ಭದಲ್ಲಿ, ರಶ್ಮಿಕಾ ಬಾಲಿವುಡ್ ರೊಮ್ಯಾಂಟಿಕ್ ಹಾಡುಗಳ ಬಗ್ಗೆ ಹೊಗಳಿದರು. ಆದರೆ, ಅವರ ಸೌತ್​ ಸಿನಿಮಾ ಬಗೆಗಿನ ಹೇಳಿಕೆ ಈಗ ಸಿಕ್ಕಾಪಟ್ಟೆ ಟ್ರೋಲ್​ ಆಗುತ್ತಿದೆ.

ಬಾಲಿವುಡ್​ ರೊಮ್ಯಾಂಟಿಕ್​ ಸಾಂಗ್: ರಶ್ಮಿಕಾ ಅವರು ಬಾಲಿವುಡ್ ಐಕಾನಿಕ್ ರೊಮ್ಯಾಂಟಿಕ್ ಸಾಂಗ್​ಗಳಲ್ಲಿ ನಿಮ್ಮನ್ನು ನೀವು ಎಂದಾದರೂ ಕಲ್ಪಿಸಿಕೊಂಡಿದ್ದೀರಾ ಎಂದು ಕೇಳಲಾಯಿತು. ಅದಕ್ಕೆ ನಟಿ ತಮ್ಮ ಮೊದಲ ಬಾಲಿವುಡ್ ರೊಮ್ಯಾಂಟಿಕ್ ಹಾಡಿನ ಬಗ್ಗೆ ತುಂಬಾ ಉತ್ಸುಕಳಾಗಿದ್ದೇನೆ ಎಂದು ಹೇಳಿದರು.

ಬಾಲಿವುಡ್ ಬೆಸ್ಟ್: ರೊಮ್ಯಾಂಟಿಕ್ ಹಾಡುಗಳನ್ನು ನಿರ್ಮಾಣ ಮಾಡುವುದರಲ್ಲಿ ಬಾಲಿವುಡ್ ಬೆಸ್ಟ್. ಚಿಕ್ಕಂದಿನಿಂದಲೂ ಈ ಹಾಡುಗಳನ್ನು ನೋಡುತ್ತಲೇ ಬೆಳೆದಿದ್ದೇನೆ. ರೊಮ್ಯಾಂಟಿಕ್ ಹಾಡುಗಳಿಗೆ ಬಾಲಿವುಡ್​ ಹೆಸರುವಾಸಿ. ದಕ್ಷಿಣ ಚಿತ್ರರಂಗದಲ್ಲಿ ಮಾಸ್ ಮಸಾಲಾ, ಐಟಂ ನಂಬರ್ಸ್​​ ಮತ್ತು ಡ್ಯಾನ್ಸ್ ನಂಬರ್ಸ್​ ಇವೆ ಎಂದರು. ಜೊತೆಗೆ ಇದು ನನ್ನ ಮೊದಲ ಬಾಲಿವುಡ್ ರೊಮ್ಯಾಂಟಿಕ್ ಹಾಡು. ಸಾಂಗ್​ ತುಂಬಾ ಚೆನ್ನಾಗಿದೆ. ನಾನು ಬಹಳ ಉತ್ಸುಕಳಾಗಿದ್ದೇನೆ ಎಂದು ಹೇಳಿದರು.

ಟೀಕೆಗೆ ಗುರಿಯಾದ ನಟಿ: ಸೌತ್ ಹಾಡುಗಳ ಬಗ್ಗೆ ರಶ್ಮಿಕಾ ಅವರ ಅಭಿಪ್ರಾಯ ಈಗ ಸೋಷಿಯಲ್​ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿವೆ. ಒಂದು ವರ್ಗದ ಬಳಕೆದಾರರು ಅವರ ಬೆಂಬಲಕ್ಕೆ ನಿಂತರೆ, ಮತ್ತೊಂದಿಷ್ಟು ಮಂದಿ ಟೀಕಿಸುತ್ತಿದ್ದಾರೆ. ಅಭಿಮಾನಿಗಳಾಗಿ ನಾವೆಲ್ಲರೂ ನಮ್ಮ ಮಸಾಲಾ ಮತ್ತು ಐಟಂ ಸಂಖ್ಯೆಗಳ ಬಗ್ಗೆ ಹೆಮ್ಮೆ ಪಡುತ್ತೇವೆ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಹೃದಯಾಘಾತದಿಂದ ನಿರ್ಮಾಪಕ ನಿತಿನ್ ಮನ್​​​ಮೋಹನ್ ನಿಧನ

ಮಿಷನ್ ಮಜ್ನು ಸಿನಿಮಾ 2023ರ ಜನವರಿ 20ರಂದು ಒಟಿಟಿ ಪ್ಲಾಟ್​ಫಾರ್ಮ್​​ನಲ್ಲಿ ಬಿಡುಗಡೆ ಆಗಲಿದೆ. ನೈಜ ಘಟನೆಗಳಿಂದ ಸ್ಫೂರ್ತಿ ಪಡೆದಿರುವ ಈ ಚಲನಚಿತ್ರವು ಸ್ಪೈ- ಥ್ರಿಲ್ಲರ್ ಆಗಿದೆ. ಮತ್ತು ಹಿಂದಿನ ಭಾರತದ ಪ್ರಮುಖ ಕಾರ್ಯಾಚರಣೆಗಳಲ್ಲಿ ಒಂದನ್ನು ಬಹಿರಂಗಪಡಿಸುತ್ತದೆ. ಚಿತ್ರವನ್ನು ಶಾಂತನು ಬಾಗ್ಚಿ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಕುಮುದ್ ಮಿಶ್ರಾ, ಪರ್ಮೀತ್ ಸೇಥಿ, ಶರೀಬ್ ಹಶ್ಮಿ, ಮೀರ್ ಸರ್ವರ್ ಮತ್ತು ಜಾಕಿರ್ ಹುಸೇನ್ ಸಹ ನಟಿಸಿದ್ದಾರೆ. ಆರ್‌ಎಸ್‌ವಿಪಿ ಮತ್ತು ಜಿಬಿಎ ನಿರ್ಮಾಣದ ಚಿತ್ರವು ನೆಟ್‌ಫ್ಲಿಕ್ಸ್‌ನಲ್ಲಿ ತೆರೆ ಕಾಣಲಿದೆ.

ಇದನ್ನೂ ಓದಿ: ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವ ಅಗತ್ಯವಿಲ್ಲ; ತನ್ನ ಮೇಲೆ ಹೇರಿದ ನಿಷೇಧದ ಬಗ್ಗೆ ರಶ್ಮಿಕಾ ಕ್ಲಾರಿಟಿ!

ಕೆಲ ದಿನಗಳ ಹಿಂದೆ ತನ್ನನ್ನು ಲಾಂಚ್ ಮಾಡಿದ ಪ್ರೊಡಕ್ಷನ್ ಹೌಸ್ ಹಸರು ಬಳಸದ ಹಿನ್ನೆಲೆ ಕನ್ನಡ ಚಿತ್ರರಂಗದಿಂದ ಅವರನ್ನು ಬ್ಯಾನ್ ಮಾಡಬೇಕು ಎಂಬ ಕೂಗು ಜೋರಾಗಿಯೇ ಕೇಳಿ ಬಂದಿತ್ತು. ಅದಕ್ಕೆ ಪ್ರತಿಕ್ರಿಯಿಸಿದ್ದ ನಟಿ ರಶ್ಮಿಕಾ ಮಂದಣ್ಣ, "ನಾನು ಅವರನ್ನು ಪ್ರೀತಿಸುತ್ತೇನೆ, ಉಳಿದದ್ದು ಅವರಿಗೆ ಬಿಟ್ಟದ್ದು" ಎಂದು ನಟಿ ತಿಳಿಸಿದ್ದರು. ಜೊತೆಗೆ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವ ಅಗತ್ಯವಿಲ್ಲ ಎಂದು ಕೂಡ ಹೇಳಿದ್ದರು.

Last Updated : Dec 29, 2022, 4:24 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.