ETV Bharat / entertainment

'ನಾನು ಈಗಾಗಲೇ ಮದುವೆಯಾಗಿದ್ದೇನೆ, ಅವನನ್ನು ತುಂಬಾ ಪ್ರೀತಿಸುತ್ತೇನೆ': ಫ್ಯಾನ್ಸ್​ಗೆ ಶಾಕ್​ ಕೊಟ್ಟ ರಶ್ಮಿಕಾ ಮಂದಣ್ಣ - ಈಟಿವಿ ಭಾರತ ಕನ್ನಡ

'ನಾನು ಈಗಾಗಲೇ ಮದುವೆಯಾಗಿದ್ದೇನೆ' ಎಂದು ಹೇಳುವ ಮೂಲಕ ನಟಿ ರಶ್ಮಿಕಾ ಮಂದಣ್ಣ ಫ್ಯಾನ್ಸ್​ಗೆ ಶಾಕ್​ ನೀಡಿದ್ದಾರೆ.

Rashmika mandanna
ರಶ್ಮಿಕಾ ಮಂದಣ್ಣ
author img

By

Published : Aug 3, 2023, 3:35 PM IST

ಸ್ಯಾಂಡಲ್​ವುಡ್​ನಿಂದ ವೃತ್ತಿಜೀವನ ಆರಂಭಿಸಿ ಸದ್ಯ ಬಹುಭಾಷೆಗಳಲ್ಲಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ. ಇವರು ಅಭಿಮಾನಿಗಳ ನೆಚ್ಚಿನ ತಾರೆ. 'ನ್ಯಾಷನಲ್​ ಕ್ರಶ್​' ಎಂದೇ ಫೇಮಸ್. ಇವರ ಮದುವೆ ಬಗ್ಗೆ ಈಗಾಗಲೇ ಅನೇಕ ಸುದ್ದಿಗಳು ಹರಿದಾಡುತ್ತಿವೆ. ಸ್ಟಾರ್​ ತಾರೆಯರ ಮದುವೆಯ ಬಗ್ಗೆ ವದಂತಿಗಳು ಹಬ್ಬುವುದೇನು ಹೊಸತಲ್ಲ. ಅನೇಕರು ಇಂತಹ ವಿಚಾರವಾಗಿ ಪ್ರತಿಕ್ರಿಯಿಸುತ್ತಾರೆ. ಕೆಲವರು ಮಾತನಾಡಲು ನಿರಾಕರಿಸುತ್ತಾರೆ. ಆದರೆ ರಶ್ಮಿಕಾ ಮಂದಣ್ಣ ಮಾತ್ರ 'ನಾನು ಈಗಾಗಲೇ ಮದುವೆಯಾಗಿದ್ದೇನೆ' ಎಂದು ಹೇಳುವ ಮೂಲಕ ಫ್ಯಾನ್ಸ್​ಗೆ ಶಾಕ್​ ನೀಡಿದ್ದಾರೆ.

ರಕ್ಷಿತ್ ಶೆಟ್ಟಿ ಒಡೆತನದ ಪರಂವಾ ಸ್ಟುಡಿಯೋಸ್ ಅಡಿ ನಿರ್ಮಾಣವಾದ ಕಿರಿಕ್ ಪಾರ್ಟಿ ಚಿತ್ರ 2016ರ ಡಿಸೆಂಬರ್​​ 30ರಂದು ತೆರೆ ಕಂಡಿತ್ತು. ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದರು. ಇವರಿಬ್ಬರ ಆನ್​ ಸ್ಕ್ರೀನ್​ ಪ್ರೇಮಕಥೆ ಪ್ರೇಕ್ಷಕರನ್ನು ಮೋಡಿ ಮಾಡಿತ್ತು. ಬಳಿಕ ಇವರಿಬ್ಬರು ಪ್ರೀತಿಯಲ್ಲಿದ್ದರು. ಎರಡು ಕುಟುಂಬಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದರು. ಆದರೆ ನಂತರದ ಕೆಲವು ದಿನಗಳಲ್ಲಿ ಇವರಿಬ್ಬರ ಸಂಬಂಧ ಮುರಿದುಬಿತ್ತು.

ಸದ್ಯ ಟಾಲಿವುಡ್​ ನಟ ವಿಜಯ್​ ದೇವರಕೊಂಡ ಜೊತೆ ರಶ್ಮಿಕಾ ಮಂದಣ್ಣ ಡೇಟಿಂಗ್​ ನಡೆಸುತ್ತಿದ್ದಾರೆ ಎನ್ನಲಾಗಿದೆ. ಗೀತ ಗೋವಿಂದಂ, ಡಿಯರ್ ಕಾಮ್ರೇಡ್​ನಂತಹ ಹಿಟ್ ಚಿತ್ರಗಳಲ್ಲಿ ಸ್ಕ್ರೀನ್​ ಶೇರ್ ಮಾಡಿರುವ ಈ ರೂಮರ್​ ಲವ್​ ಬರ್ಡ್ಸ್, ಆನ್‌ಸ್ಕ್ರೀನ್​ನಲ್ಲಿ ಸಿನಿಮಾಗಳು ಹಿಟ್​ ಆಗುತ್ತಿದ್ದಂತೆ, ಅಭಿಮಾನಿಗಳು ಈ ಇಬ್ಬರೂ ನಿಜವಾಗಿಯೂ ಡೇಟಿಂಗ್ ಮಾಡುತ್ತಿದ್ದಾರಾ? ಎಂದು ಊಹಿಸಲು ಪ್ರಾರಂಭಿಸಿದರು. ಆದ್ರೆ ಈ ಜೋಡಿ ಮಾತ್ರ ಆಪ್ತ ಸ್ನೇಹಿತರು ಎಂದು ಹೇಳಿಕೊಂಡು ಬಂದಿದೆ. ಆದರೆ ಇಬ್ಬರ ನಡುವೆ ಪ್ರೀತಿ ಇದೆ ಎಂಬುದಕ್ಕೆ ಅನೇಕ ಘಟನೆಗಳು, ಸಂದರ್ಭಗಳು ಸಾಕ್ಷಿಯಾಗಿವೆ.

ಇದೀಗ ರಶ್ಮಿಕಾ ಮಂದಣ್ಣ ತಮ್ಮ ಮದುವೆ ವಿಚಾರವಾಗಿ ಮಾತನಾಡಿದ್ದಾರೆ. ಇತ್ತೀಚೆಗೆ ಬಾಲಿವುಡ್​ ಹೀರೋ ಟೈಗರ್​ ಶ್ರಾಫ್​ ಜೊತೆ ಸಿನಿಮಾ ಪ್ರಚಾರಕ್ಕೆ ಹೋಗಿದ್ದರು. ಈ ವೇಳೆ ಆ್ಯಂಕರ್, ನಿಮ್ಮ ಮದುವೆ ಯಾವಾಗ? ಎಂಬ ಪ್ರಶ್ನೆಯನ್ನು ರಶ್ಮಿಕಾಗೆ ಕೇಳಿದ್ದರು. ತಮಾಷೆಯ ಉತ್ತರವನ್ನು ಕೊಟ್ಟ ನಟಿ, "ನಾನು ಈಗಾಗಲೇ ಮದುವೆಯಾಗಿದ್ದೇನೆ. ನಾನು ನರುಟೊನನ್ನು ವಿವಾಹವಾಗಿದ್ದೇನೆ. ಅವನನ್ನು ತುಂಬಾ ಪ್ರೀತಿಸುತ್ತೇನೆ. ನನ್ನ ಮನಸ್ಸಿನಲ್ಲಿ ಅವನೊಬ್ಬನೇ ಇದ್ದಾನೆ" ಎಂದು ಹೇಳಿದ್ದಾರೆ. ಈ ವಿಚಾರ ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

'ನರುಟೊ' ನಿಮಗೆಲ್ಲಾ ಗೊತ್ತಿರುವುದೇ. 'ಎನಿಮೆ' ಕಾರ್ಟೂನ್​ ಸಿರೀಸ್​ನಲ್ಲಿ ಬರುವ ಒಂದು ಪಾತ್ರವಷ್ಟೇ. ಇಂತಹ ಕಾರ್ಟೂನ್​ಗಳಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಮಕ್ಕಳಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಎಲ್ಲರೂ ಈ ಕಾರ್ಟೂನ್​ ಪಾತ್ರವನ್ನು ಇಷ್ಟಪಡುತ್ತಾರೆ​. ಅಂತಹವರಲ್ಲಿ ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ ಕೂಡ ಒಬ್ಬರು. ಇನ್ನು ಇವರ ಸಿನಿಮಾ ವಿಚಾರವಾಗಿ ನೋಡುವುದಾದರೆ, ಅಲ್ಲು ಅರ್ಜುನ್​ ಜೊತೆ ಪುಷ್ಪ 2ನಲ್ಲಿ ಬ್ಯುಸಿಯಾಗಿದ್ದಾರೆ. ಇದಲ್ಲದೇ ಅನಿಮಲ್​ ಮತ್ತು ರೇನ್​ಬೋ ಎಂಬ ಮಹಿಳಾ ಪ್ರಧಾನ ಚಿತ್ರದಲ್ಲೂ ನಟಿಸುತ್ತಿದ್ದಾರೆ. ನಿತಿನ್​ ಜೊತೆ ಟಾಲಿವುಡ್​ನಲ್ಲಿ ಸಿನಿಮಾ ಮಾಡುತ್ತಿದ್ದಾರೆ.

ಇದನ್ನೂ ಓದಿ: 'ರಶ್ಮಿಕಾ ಬ್ಯೂಟಿಫುಲ್​'..ಕ್ಯಾಶುವಲ್​ ಲುಕ್​ನಲ್ಲಿ ಅಭಿಮಾನಿಗಳ ಗಮನ ಸೆಳೆದ 'ನ್ಯಾಷನಲ್​ ಕ್ರಶ್​​'​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.