ETV Bharat / entertainment

ಆತ್ಮಹತ್ಯೆ ಹಂತಕ್ಕೆ ತಲುಪಿದಾಗ ರಾಹುಲ್​​ ಗಾಂಧಿ ಶಕ್ತಿ ತುಂಬಿದರು: ನಟಿ ರಮ್ಯಾ - actress Ramya

ವೀಕೆಂಡ್ ವಿತ್ ರಮೇಶ್ ಶೋನಲ್ಲಿ ನಟಿ ರಮ್ಯಾ ಅವರು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಬಗ್ಗೆ ಮಾತನಾಡಿದ್ದರು.

Ramya speaks on Rahul Gandhi
ರಾಹುಲ್ ಗಾಂಧಿ ಬಗ್ಗೆ ಮಾತನಾಡಿದ ರಮ್ಯಾ
author img

By

Published : Mar 31, 2023, 2:56 PM IST

ಸ್ಯಾಂಡಲ್​ವುಡ್​ ಮೋಹಕತಾರೆ ರಮ್ಯಾ ಅವರು ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಬಗ್ಗೆ ಮಾತನಾಡಿದ್ದಾರೆ. ತಾನು ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯಲ್ಲಿದ್ದಾಗ ರಾಹುಲ್ ಗಾಂಧಿ ಅದನ್ನು ತಡೆದರು. ತಂದೆ ನಿಧನದ ನಂತರ ನಾನು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ ಸಂದರ್ಭ ರಾಹುಲ್​ ಗಾಂಧಿ ಅವರು ನನ್ನಲ್ಲಿ ಭಾವನಾತ್ಮಕ ಶಕ್ತಿ ತುಂಬಿದ್ದರು ಎಂದು ರಮ್ಯಾ ತಿಳಿಸಿದ್ದಾರೆ.

ಕನ್ನಡದ ಜನಪ್ರಿಯ ಶೋ ವೀಕೆಂಡ್ ವಿತ್ ರಮೇಶ್ ಸೀಸನ್ - 5 ಕಳೆದ ವಾರ ಅದ್ಧೂರಿಯಾಗಿ ಆರಂಭವಾಗಿದೆ. ಈ ಕಾರ್ಯಕ್ರಮದಲ್ಲಿ ನಟಿ ರಮ್ಯಾ ಮೊದಲ ಅತಿಥಿಯಾಗಿ ಭಾಗಿ ಆಗಿದ್ದರು. ರಮ್ಯಾ ಸಾಧನೆಯ ಕಥೆ ಈ ಕಾರ್ಯಕ್ರಮದಲ್ಲಿ ಅನಾವರಣ ಆಗಿತ್ತು. ಆ ವೇಳೆ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಕುರಿತು ನಟಿ ರಮ್ಯಾ ಮೆಚ್ಚುಗೆಯ ಮಾತುಗಳನ್ನಾಡಿದ್ದರು.

ರಾಹುಲ್ ಗಾಂಧಿ ಅವರ ಮಾತು ಕೇಳಿದೆ. ನನ್ನ ಕಠಿಣ ಸಮಯದಲ್ಲಿ ಅವರು ನನಗೆ ಭಾವನಾತ್ಮಕ ಬೆಂಬಲ ಕೊಟ್ಟರು. ಹೊಸ ರೀತಿಯಲ್ಲಿ ಜೀವನ ಪ್ರಾರಂಭಿಸಲು ಅವರ ಪ್ರೇರಣೆ ಪೂರಕವಾಯಿತು. ಆರಂಭದಲ್ಲಿ ಕಷ್ಟವಾದರೂ ಕ್ರಮೇಣ ಎಲ್ಲವೂ ಸರಿಯಾಗತೊಡಗಿತು ಎಂದು ಸ್ಯಾಂಡಲ್​ವುಡ್​ ಕ್ವೀನ್​ ತಿಳಿಸಿದ್ದಾರೆ.

ತಂದೆ ನಿಧನದ ನಂತರ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೆ. ಚುನಾಚಣೆಯಲ್ಲಿ ಸೋಲನ್ನೂ ಅನುಭವಿಸಿದ್ದೆ. ಅಂತಹ ಸಂದರ್ಭದಲ್ಲಿ ರಾಹುಲ್​ ಗಾಂಧಿ ಶಕ್ತಿ ತುಂಬಿದರು. ನನ್ನ ಜೀವನದಲ್ಲಿ ರಾಹುಲ್ ಗಾಂಧಿ ದೊಡ್ಡ ಮಟ್ಟಿನ ಪ್ರಭಾವ ಬೀರಿದ ವ್ಯಕ್ತಿ ಆಗಿದ್ದಾರೆಂದು ರಮ್ಯಾ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.

2012 ರಲ್ಲಿ ನಟಿ ರಮ್ಯಾ ಅವರು ಕಾಂಗ್ರೆಸ್​ನಲ್ಲಿ ಗುರುತಿಸಿಕೊಂಡರು. 2013ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಕಂಡಿದ್ದರು. ಕಳೆದ ವರ್ಷವೇ ರಾಜಕೀಯದಿಂದ ಚಲನಚಿತ್ರಗಳಿಗೆ ಮರಳಲು ಮನಸ್ಸು ಮಾಡಿದರು. ತಮ್ಮದೇ ಆದ ಚಲನಚಿತ್ರ ನಿರ್ಮಾಣ ಸಂಸ್ಥೆಯನ್ನೂ ಸಹ ಆರಂಭಿಸಿದ್ದಾರೆ. ಪ್ರಸ್ತುತ ಚಲನಚಿತ್ರ ಮತ್ತು ರಾಜಕೀಯ ಎರಡರಲ್ಲೂ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲೂ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: ಪರಿಣಿತಿ-ರಾಘವ್ ಮದುವೆ ಖಚಿತಪಡಿಸಿದ ಗಾಯಕ ಹಾರ್ಡಿ ಸಂಧು

ನಟ ರಮೇಶ್ ಅರವಿಂದ್ ನಡೆಸಿಕೊಡುವ 'ವೀಕೆಂಡ್ ವಿತ್ ರಮೇಶ್' ಕನ್ನಡದ ಜನಪ್ರಿಯ ಶೋ. ಅದರ ಸೀಸನ್​​ 5 ಕಳೆದ ಶನಿವಾರ ಆರಂಭವಾಗಿದೆ. ಮೊದಲ ಅತಿಥಿಯಾಗಿ ರಮ್ಯಾ ಭಾಗಿಯಾಗಿದ್ದು, ನಾಳೆ ನಡೆಯುವ ಶೋನಲ್ಲಿ ಎರಡನೇ ಅತಿಥಿಯಾಗಿ ನಟ, ನೃತ್ಯ ನಿರ್ದೇಶಕ ಪ್ರಭು ದೇವ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಮಂಗಳಮುಖಿಯರು ಚಪ್ಪಾಳೆ ತಟ್ಟುವುದೇಕೆ?: ಸುಶ್ಮಿತಾ ಸೇನ್ ಸಾಮಾಜಿಕ ಸಂದೇಶ- ವಿಡಿಯೋ

ಈ ಶೋನ 5ನೇ ಸೀಸನ್​ನ ಮೊದಲ ಅತಿಥಿಯಾಗಿ ಸ್ಯಾಂಡಲ್​ವುಡ್​ ಮೋಹಕತಾರೆ ರಮ್ಯಾ ಭಾಗಿಯಾಗಿದ್ದ ವೇಳೆ ನಟ ರಮೇಶ್‌ ನಟಿಯ ಸಾಧನೆ ಬಗ್ಗೆ ಮಾತನಾಡಿದ್ದರು. ಆ ಎಪಿಸೋಡ್​​ ಸಾಕಷ್ಟು ಜನರ ಮನ ಮುಟ್ಟಿತ್ತು. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ನಟಿಯ ಎಪಿಸೋಡ್​​​ ಅನ್ನು ಸಾಕಷ್ಟು ಜನರು ವೀಕ್ಷಿಸಿದ್ದರು. ಆದ್ರೆ ಶೋನಲ್ಲಿ ಹೆಚ್ಚಾಗಿ ಇಂಗ್ಲೀಷ್ ಬಳಕೆ ಮಾಡಿದ ವಿಚಾರವಾಗಿ ನಟಿ ಟ್ರೋಲ್ ಕೂಡ ಆಗಿದ್ದರು. ಕನ್ನಡದ ನಟಿಗೆ ಕನ್ನಡ ಗೊತ್ತಿಲ್ಲ ಎಂದು ಟ್ರೋಲಿಗರು ಕಿಡಿಕಾರಿದ್ದರು. ಅದಾದ ಬಳಿಕ ಎಲ್ಲರನ್ನೂ ತಲುಪುವ ಸಲುವಾಗಿ ಇಂಗ್ಲಿಷ್ ಅನ್ನು ಹೆಚ್ಚಾಗಿ ಬಳಸಿದೆ ಎಂದು ರಮ್ಯಾ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.