ETV Bharat / entertainment

ಮುಂಗಾರು ಮಳೆ ಬೆಡಗಿ ಪೂಜಾ ಗಾಂಧಿಗೆ ಜನ್ಮದಿನದ ಸಂಭ್ರಮ

ಒಂದು ಕಾಲದಲ್ಲಿ ಸ್ಯಾಂಡಲ್​​ವುಡ್​​ನಲ್ಲಿ ಬಹುಬೇಡಿಕೆ ನಟಿಯಾಗಿ ಮಿಂಚಿದ ಮುಂಗಾರು ಮಳೆಯ ಬೆಡಗಿ ಪೂಜಾ ಗಾಂಧಿ ಇಂದು 39ನೇ ಬರ್ತ್​ ಡೇ ಸೆಲೆಬ್ರೇಟ್ ಮಾಡಿಕೊಳ್ಳುತ್ತಿದ್ದಾರೆ.

actress pooja gandhi birthday
ನಟಿ ಪೂಜಾ ಗಾಂಧಿ ಜನ್ಮದಿನ
author img

By

Published : Oct 7, 2022, 1:47 PM IST

ಸ್ಯಾಂಡಲ್​​ವುಡ್​​ನಲ್ಲಿ ಮುಂಗಾರು ಮಳೆ ಸಿನಿಮಾ ಯಶಸ್ಸಿನ ಮೂಲಕ ಬಹುಬೇಡಿಕೆ ನಟಿಯಾಗಿ ಮಿಂಚಿದ ಪೂಜಾ ಗಾಂಧಿ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. 39ನೇ ಬರ್ತ್​ ಡೇ ಸೆಲೆಬ್ರೇಟ್ ಮಾಡಿಕೊಳ್ಳುತ್ತಿರುವ ಅವರಿಗೆ ಆತ್ಮೀಯರು, ಸಿನಿರಂಗ ಸೇರಿದಂತೆ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ.

1973ರ ಅಕ್ಟೋಬರ್​ 7ರಂದು ಉತ್ತರ ಪ್ರದೇಶದ ಮೀರತ್​ನಲ್ಲಿ ಪೂಜಾ ಗಾಂಧಿ ಜನಿಸಿದರು. ಇವರ ಮೂಲ ಹೆಸರು ಸಂಜನಾ ಗಾಂಧಿ. ಮೊದಲು ಆ್ಯಡ್​ ಹಾಗೂ ಮಾಡೆಲಿಂಗ್​ನಲ್ಲಿ ತೊಡಗಿಸಿಕೊಂಡಿದ್ದ ಅವರು ಮುಂಗಾರು ಮಳೆ ಸಿನಿಮಾ ಯಶಸ್ಸಿನ ಮೂಲಕ ಬಹು ಬೇಡಿಕೆ ನಟಿ ಆದರು.

ಮುಂಗಾರು ಮಳೆ ಸಿನಿಮಾ ಸೂಪರ್ ಹಿಟ್ ಆದ ನಂತರ ಪೂಜಾ ಗಾಂಧಿಗೆ ಬೇಡಿಕೆ ಹೆಚ್ಚಿತ್ತು. ಇದಾದ ಬಳಿಕ ಪೂಜಾ ಗಾಂಧಿ ಕಾಲ್​ಶೀಟ್​ಗಾಗಿ ನಿರ್ಮಾಪಕರು ಮುಗಿ ಬೀಳುತ್ತಿದ್ದರು. ಸಾಲು ಸಾಲು ಸಿನಿಮಾಗಳಲ್ಲಿ ಪೂಜಾ ಗಾಂಧಿ ಕಾಣಿಸಿಕೊಂಡರು.

ಇದನ್ನೂ ಓದಿ: ಹೊಂಬಾಳೆ ಫಿಲ್ಸ್ಮ್ ಜೊತೆ ವಿಕ್ರಾಂತ್ ರೋಣನ ಹೊಸ ಸಿನಿಮಾ: ಕುತೂಹಲ ಹೆಚ್ಚಿಸಿದ ಒಂದು ಫೋಟೋ

ಒಂದು ದಶಕ ಅವಧಿಯಲ್ಲಿ ಮಿಲನ, ಕೃಷ್ಣ, ಮನ್ಮಥ, ಹನಿ ಹನಿ, ಆ್ಯಕ್ಸಿಡೆಂಟ್​, ನೀ ಟಾಟಾ ನಾ ಬಿರ್ಲಾ, ತಾಜ್​ಮಹಲ್​, ಬುದ್ದಿವಂತ, ಹುಚ್ಚಿ, ಗೋಕುಲ, ದಂಡುಪಾಳ್ಯ, ನಿನಗಾಗಿ ಕಾದಿರುವೆ, ಕೋಡಗನ ಕೋಳಿ ನುಂಗಿತ್ತಾ, ಹೀಗೆ ಸುಮಾರು 50 ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳು, ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ಕೂಡ ಅಭಿನಯಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.