ETV Bharat / entertainment

'ನಾನು ನಿಮ್ಮನ್ನು ಆಹ್ವಾನಿಸಿಲ್ಲ': ಸಿಟ್ಟಾದ ನಟಿ ಪರಿಣಿತಿ ಚೋಪ್ರಾ - ಪರಿಣಿತಿ ಚೋಪ್ರಾ ಸಿನಿಮಾ

Parineeti Chopra angry on paparazzi: ಪಾಪರಾಜಿಗಳ (ಜನಪ್ರಿಯ ವ್ಯಕ್ತಿಗಳನ್ನು ಹಿಂಬಾಲಿಸಿ ಅವರ ಫೋಟೋಗಳನ್ನು ತೆಗೆದು ದಿನಪತ್ರಿಕೆಗಳು ಹಾಗು ನಿಯತಕಾಲಿಕೆಗಳಿಗೆ ನೀಡುವ ಫೋಟೋಗ್ರಾಫರ್‌ಗಳು) ವರ್ತನೆಗೆ ಬಾಲಿವುಡ್​ ನಟಿ ಪರಿಣಿತಿ ಚೋಪ್ರಾ ಕೋಪಗೊಂಡ ಘಟನೆ ಮುಂಬೈನಲ್ಲಿ ನಡೆಯಿತು.

Parineeti Chopra angry on paparazzi
ಪಾಪರಾಜಿಗಳ ವರ್ತನೆಗೆ ಅಸಮಧಾನಗೊಂಡ ಪರಿಣಿತಿ ಚೋಪ್ರಾ
author img

By ETV Bharat Karnataka Team

Published : Sep 17, 2023, 7:24 AM IST

ಸೆಲೆಬ್ರಿಟಿಗಳನ್ನು ಕಂಡೊಡನೆ ಅವರ ಫೋಟೋ, ವಿಡಿಯೋ ಸೆರೆ ಹಿಡಿಯುವುದು ಸಾಮಾನ್ಯವಾಗಿಬಿಟ್ಟಿದೆ. ಅದ್ರಲ್ಲೂ ಹೆಚ್ಚಾಗಿ ಬಾಲಿವುಡ್​ ಮಂದಿ ಪಾಪರಾಜಿಗಳ ಕ್ಯಾಮರಾದೊಳಗೆ ಸೆರೆಯಾಗುತ್ತಿರುತ್ತಾರೆ. ಯಾವುದೇ ಈವೆಂಟ್​ ಅಥವಾ ಏರ್​ಪೋರ್ಟ್​ಗಳಲ್ಲಿ ಸೆಲೆಬ್ರಿಟಿಗಳ ಚಲನವಲನಗಳನ್ನು ಸೆರೆಹಿಡಿಯುವ ಅವಕಾಶವನ್ನು ಕ್ಯಾಮರಾಮ್ಯಾನ್​ಗಳು ತಪ್ಪಿಸಿಕೊಳ್ಳುವುದಿಲ್ಲ.

ಪಾಪರಾಜಿಗಳ ಈ ನಡೆ ಬಾಲಿವುಡ್​ ತಾರೆಯರಿಗೆ ಅಭ್ಯಾಸವಾಗಿದೆಯಾದರೂ, ಕೆಲವೊಮ್ಮೆ ಕಿರಿಕಿರಿ ಅನಿಸೋದುಂಟು. ಅಂತಹದ್ದೇ ಒಂದು ಘಟನೆ ಇತ್ತೀಚೆಗೆ ನಡೆದಿದೆ. ಅದ್ಧೂರಿ ಮದುವೆಗೆ ಸಜ್ಜಾಗುತ್ತಿರುವ ಬಾಲಿವುಡ್​ ನಟಿ ಪರಿಣಿತಿ ಮುಂಬೈನಲ್ಲಿ ಕಾಣಿಸಿಕೊಂಡಿದ್ದರು. ತಕ್ಷಣ ಅವರ ವಿಡಿಯೋ ಮಾಡಲು ತೆರಳಿದ ಪಾಪರಾಜಿಗಳ ಮೇಲೆ ನಟಿ ಅಸಮಾಧಾನಗೊಂಡರು. ನಾನು ನಿಮ್ಮನ್ನು ಆಹ್ವಾನಿಸಿಲ್ಲ ಎಂದುಬಿಟ್ಟರು. ಅಷ್ಟೇ ಅಲ್ಲ, ಫೋಟೋ, ವಿಡಿಯೋ ಮಾಡಬೇಡಿ ಎಂದು ಗರಂ ಆದರು.

ವಿಡಿಯೋ ಸಾರಾಂಶ: ಸಾಮಾಜಿಕ ಜಾಲತಾಣದಲ್ಲಿ ಪರಿಣಿತಿ ಚೋಪ್ರಾ ಮಾತನಾಡುವ ಈ ವಿಡಿಯೋ ವೈರಲ್​ ಆಗಿದೆ. 'ಇಶಕ್​ಜಾದೆ' ಸಿನಿಮಾ ನಟಿ ಕಾರಿನಿಂದ ಹೊರಬರುತ್ತಿದ್ದಂತೆ ಪಾಪರಾಜಿಗಳು ಫೋಟೋ, ವಿಡಿಯೋ ಕ್ಲಿಕ್ಕಿಸಲು ಮುಂದಾಗಿದ್ದಾರೆ. ಇದು ನಟಿಯ ಪಿತ್ತ ನೆತ್ತಿಗೇರಿಸಿದೆ.

ಈ ಸಂದರ್ಭದಲ್ಲಿ ನಟಿ ಬ್ಲ್ಯೂ ಜೀನ್ಸ್, ಬ್ಲ್ಯೂ ಆ್ಯಂಡ್​ ರೆಡ್​ ಲೈನ್​ ಟೀ ಶರ್ಟ್ ಧರಿಸಿದ್ದರು. ಪರಿಣಿತಿ ಯಾವುದೋ ಒಂದು ಸ್ಥಳದ ಒಳಾಂಗಣಕ್ಕೆ ಹೋಗಲು ಬಹಳ ವೇಗವಾಗಿ​ ಮುನ್ನಡೆದರು. ಪಾಪರಾಜಿಗಳು ಹಿಂಬಾಲಿಸಲು ಯತ್ನಿಸಿದರು.

'ನಾನು ನಿಮ್ಮನ್ನು ಆಹ್ವಾನಿಸಿಲ್ಲ': ಈ ಸಂದರ್ಭದಲ್ಲಿ ನಟಿ, ತನ್ನ ಫೋಟೋ, ವಿಡಿಯೋ ತೆಗೆಯದಂತೆ ಕೈ ಜೋಡಿಸಿ ಕೇಳಿಕೊಂಡರು. "ನಹೀ ಬುಲಾಯಾ ಆಪ್ಕೋ ಮೈನೆ ಯಾರ್"​ (ನಾನು ನಿಮ್ಮನ್ನು ಆಹ್ವಾನಿಸಿಲ್ಲ) ಎಂದು ಕೆಂಗಣ್ಣು ಬೀರಿದರು. ಬಳಿಕ ನಾನು ನಿಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತಿದ್ದೇನೆ, ದಯವಿಟ್ಟು ನಿಲ್ಲಿಸಿ ಎಂದು ಮನವಿ ಮಾಡಿದರು.

ನಟಿಯ ನಡೆಗೆ ಮಿಶ್ರ ಪ್ರತಿಕ್ರಿಯೆ: ವಿಡಿಯೋ ವೈರಲ್​ ಆಗುತ್ತಿದ್ದಂತೆ ಅಭಿಮಾನಿಗಳು ಮತ್ತು ನೆಟ್ಟಿಗರು ಪ್ರತಿಕ್ರಿಯೆ ವ್ಯಕ್ತಪಡಿಸಲು ಆರಂಭಿಸಿದ್ದಾರೆ. ಕಾಮೆಂಟ್​ ವಿಭಾಗದಲ್ಲಿ ಬಹುತೇಕರು ಪರಿ ಎಂದು ಬರೆದು ಬೇಸರದ ಎಮೋಜಿ ಹಾಕಿದ್ದಾರೆ. ಸೋಷಿಯಲ್​ ಮೀಡಿಯಾ ಬಳಕೆದಾರರೋರ್ವರು ಪ್ರತಿಕ್ರಿಯಿಸಿ, ಅವರು ನಿಜವಾಗಿಯೂ ಸಿಟ್ಟಾಗಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಹೆಚ್ಚಿನ ಸೆಲ್ಫಿಗೆ ನಿರಾಕರಿಸಿದ ನಟನ ಮೇಲೆ ಬಾಟಲ್​ ಎಸೆದ ಅಭಿಮಾನಿ: ವಿಡಿಯೋ ವೈರಲ್​

ನಟಿಯ ಸಿನಿಮಾ ವಿಚಾರ ಗಮನಿಸುವುದಾದರೆ, 'ಮಿಷನ್​ ರಾಣಿಗಂಜ್​​​: ದ ಗ್ರೇಟ್​ ಭಾರತ್​ ರೆಸ್ಕ್ಯೂ' ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಕ್ಷಯ್​ ಕುಮಾರ್​ ಜೊತೆ ಅಭಿನಯಿಸುತ್ತಿದ್ದಾರೆ. ಟಿನು ಸುರೇಶ್​ ನಿರ್ದೇಶನದ ಈ ಸಿನಿಮಾ ನೈಜ ಘಟನೆಗಳನ್ನು ಆಧರಿಸಿವೆ ಎಂದು ಚಿತ್ರತಂಡ ತಿಳಿಸಿದೆ. ಅಕ್ಟೋಬರ್​ 6 ರಂದು ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಕಾಣಲಿದೆ. ಕೊನೆಯದಾಗಿ ಇವರು ಕೋಡ್​ ನೇಮ್​​: ತಿರಂಗಾ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಆದ್ರೆ ಈ ಚಿತ್ರ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಗಳಿಸಲಿಲ್ಲ.

ಇದನ್ನೂ ಓದಿ: Tiger vs Pathaan: ಬರಲಿದೆ ಟೈಗರ್​ vs ಪಠಾಣ್​ ಸಿನಿಮಾ - ಸಲ್ಲು, ಎಸ್​ಆರ್​ಕೆ ಸ್ಕ್ರೀನ್​ ಶೇರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.