ದಕ್ಷಿಣ ಭಾರತ ಚಿತ್ರರಂಗದವರ ಸಮಾಗಮದಲ್ಲಿ ನಡೆಯುವ ಪ್ರತಿಷ್ಠಿತ ಸೈಮಾ ಅವಾರ್ಡ್ಸ್ 2022 ಈ ಬಾರಿ ನಮ್ಮನ್ನಗಲಿದ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ನೆನಪಿನೊಂದಿಗೆ ಸೆಪ್ಟೆಂಬರ್ 10, 11ರಂದು ಬೆಂಗಳೂರಿನ ಅರಮನೆ ಆವರಣದಲ್ಲಿ ಅದ್ಧೂರಿಯಾಗಿ ನಡೆಯಿತು. ಕಳೆದ ಹತ್ತು ವರ್ಷಗಳಲ್ಲಿ ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಸಿನಿಮಾ ರಂಗದವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
ಸಮಾರಂಭದಲ್ಲಿದ್ದ ಹಿರಿಯ ನಟ ಕಮಲ್ ಹಾಸನ್ ಬಳಿ ನಟಿ ಮಾಲಾಶ್ರೀ ತೆರಳಿ ಬಹಳ ಸಂತೋಷದಿಂದ ಮಾತನಾಡಿದ್ದಾರೆ. ಈ ಕಲಾವಿದರು ಉಭಯಕುಶಲೋಪರಿ ವಿಚಾರಿಸಿಕೊಂಡಿದ್ದಾರೆ. ಈ ಬಗ್ಗೆ ನಟಿ ಮಾಲಾಶ್ರೀ ಟ್ವಿಟರ್ನಲ್ಲಿ ಫೋಟೋ ಶೇರ್ ಮಾಡಿಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.
-
Such an honour to meet the icon @ikamalhaasan sir🤩. Felt so special when he remembered me as Kanna from Neela Malargal🥹💃, so grateful and proud that I had worked with him as a child✨🥰🤗💛💛 pic.twitter.com/ur6D7qRheS
— Malashree Ramu (@RamuMalashree) September 12, 2022 " class="align-text-top noRightClick twitterSection" data="
">Such an honour to meet the icon @ikamalhaasan sir🤩. Felt so special when he remembered me as Kanna from Neela Malargal🥹💃, so grateful and proud that I had worked with him as a child✨🥰🤗💛💛 pic.twitter.com/ur6D7qRheS
— Malashree Ramu (@RamuMalashree) September 12, 2022Such an honour to meet the icon @ikamalhaasan sir🤩. Felt so special when he remembered me as Kanna from Neela Malargal🥹💃, so grateful and proud that I had worked with him as a child✨🥰🤗💛💛 pic.twitter.com/ur6D7qRheS
— Malashree Ramu (@RamuMalashree) September 12, 2022
ಐಕಾನ್ ಕಮಲ್ ಹಾಸನ್ ಅವರನ್ನು ಭೇಟಿ ಮಾಡಿದ್ದು ಬಹಳ ಸಂತೋಷಕರ ವಿಷಯ. ನೀಲ ಮಲರ್ಗಲ್ ಸಿನಿಮಾದಲ್ಲಿ ನಿರ್ವಹಿಸಿದ್ದ ಕನ್ನ ಪಾತ್ರ ನೆನಪಿಸಿಕೊಂಡಾಗ ತುಂಬಾ ವಿಶೇಷ ಅನಿಸಿತು. ಬಾಲ್ಯದಲ್ಲಿ ನಾನು ಅವರೊಂದಿಗೆ ಕೆಲಸ ಮಾಡಿದ್ದು, ತುಂಬಾ ಹೆಮ್ಮೆಯ ವಿಷಯ ಎಂದು ನಟಿ ಮಾಲಾಶ್ರೀ ಟ್ವೀಟ್ ಮಾಡಿದ್ದಾರೆ. 1979ರಲ್ಲಿ ತರೆಕಂಡ ಕಮಲ್ ಹಾಸನ್ ಅಭಿನಯದ Neela Malargal ಸಿನಿಮಾದಲ್ಲಿ ಮಾಲಾಶ್ರೀ ಕನ್ನನ್ (ಬಾಲಕಿ ಪಾತ್ರ) ಪಾತ್ರ ನಿರ್ವಹಿಸಿದ್ದರು.
ಇದನ್ನೂ ಓದಿ: ಕ್ರಿಕೆಟ್ ಆಟಗಾರನಾಗಿ ಗೋಲ್ಡನ್ ಸ್ಟಾರ್ ಗಣೇಶ್.. ಬಾನ ದಾರಿಯಲ್ಲಿ ಚಿತ್ರೀಕರಣ