ETV Bharat / entertainment

Tiger 3 ಹಾಡಿಗೆ ನಟಿ ಕತ್ರಿನಾ ರಿಹರ್ಸಲ್​; ವಿಡಿಯೋ ವೈರಲ್​

author img

By

Published : Aug 21, 2023, 2:24 PM IST

ಬಾಲಿವುಡ್​ನಲ್ಲಿ ತಮ್ಮ ಡ್ಯಾನ್ಸ್​ ಮೂಲಕ ಈಗಾಗಲೇ ಎಲ್ಲರನ್ನು ಸೆಳೆದಿರುವ ನಟಿ ಕತ್ರಿನಾ ನೃತ್ಯದ ವಿಡಿಯೋ ವೈರಲ್​ ಆಗಿದೆ.

Actress Katrina rehearsal for Tiger 3 song; The video is viral

ಮುಂಬೈ: ಬಾಲಿವುಡ್​ ಬೆಡಗಿ ಕತ್ರಿನಾ ಕೈಫ್​ ಸದ್ಯ ತಮ್ಮ ಮುಂಬರುವ ಬಹು ನಿರೀಕ್ಷಿತ ಚಿತ್ರ 'ಟೈಗರ್​ 3' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ನಟ ಸಲ್ಮಾನ್​ ಜೊತೆಗೆ ನಟಿಸುತ್ತಿರುವ ಈ ಚಿತ್ರ ಆ್ಯಕ್ಷನ್​ ಥ್ರಿಲ್ಲರ್​ ಆಗಿದ್ದು, ಈ ವರ್ಷ ಬಿಡುಗಡೆ ಆಗಲು ಸಜ್ಜಾಗಿದೆ. ಈ ಸಿನಿಮಾದ ಹಾಡಿನ ಶೂಟಿಂಗ್​ನಲ್ಲಿ ನಟಿ ಹೆಜ್ಜೆ ಹಾಕಿದ್ದು, ಈ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಕೊರಿಯಾಗ್ರಾಫ್​ ಹೇಳಿಕೊಟ್ಟಂತೆ ನಟಿ ಕತ್ರಿನಾ ಕೈಫ್​ ಹೆಜ್ಜೆ ಹಾಕಲು ತಾಲೀಮು ನಡೆಸುತ್ತಿರುವ ವಿಡಿಯೋ ವೈರಲ್​ ಆಗಿದ್ದು, ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ವಿಡಿಯೋದಲ್ಲಿ ನಟಿ ಹಿಂದಿ ಸಹ ನಟಿಯರನ್ನು ಕಾಣಬಹುದಾಗಿದೆ. ಇನ್ನು ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ ಅವರ ಅಭಿಮಾನಿಗಳು ಪ್ರಶಂಸೆಯ ಮಳೆ ಸುರಿಸಿದ್ದಾರೆ. ಅದ್ಬುತ ನೃತ್ಯ ಪ್ರದರ್ಶನದಿಂದ ಈಗಾಗಲೇ ಅಭಿಮಾನಿಗಳು ಸೇರಿದಂತೆ ಸಿನಿ ಕುಟುಂಬದ ಹಲವು ನಟ ನಟಿಯರ ಮೆಚ್ಚುಗೆ ನಟಿ ಕತ್ರಿನಾ ಪಾತ್ರರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಅವರ ನೃತ್ಯಕ್ಕೆ ಫಿದಾ ಆಗಿರುವುದಾಗಿ ತಿಳಿಸಿದ್ದಾರೆ. ಬಳಕೆದಾರರೊಬ್ಬರು, ಕ್ಯಾಟ್​ ಅನ್ನು 'ನೃತ್ಯದಲ್ಲಿ ಮ್ಯಾಚ್​ ಮಾಡಲು ಯಾರಿಂದಲೂ ಸಾಧ್ಯವಾಗುವುದಿಲ್ಲ. ಡ್ಯಾನ್ಸ್​​ನಲ್ಲಿ ಆಕೆ ರಾಣಿ' ಎಂದಿದ್ದಾರೆ. ಮತ್ತೊಬ್ಬರು ಅವರ 'ಈ ಹಾಡಿಗಾಗಿ ಕಾಯುತ್ತಿರುವುದಾಗಿ' ತಿಳಿಸಿದ್ದಾರೆ. ಆಕೆಯ ಸ್ಕ್ರೀನ್​ ಪ್ರೆಸೆನ್ಸ್​ ಅದ್ಬುತ ಎಂದು ಮತ್ತೊಬ್ಬರು ತಿಳಿಸಿದ್ದಾರೆ.

'ಟೈಗರ್​ 3' ಚಿತ್ರವನ್ನು ಮನೀಶ್​ ಶರ್ಮಾ ನಿರ್ದೇಶಿಸಿದ್ದು, ಇದೊಂದು ಸಾಹಸ ಚಿತ್ರವಾಗಿದೆ. ಚಿತ್ರದ ಪ್ರಮುಖ ಪಾತ್ರದಲ್ಲಿ ನಟ ಇಮ್ರಾನ್​ ಹಶ್ಮಿ ಮತ್ತು ಸಲ್ಮಾನ್​ ಖಾನ್​ ಇದ್ದಾರೆ. ಇನ್ನು ಚಿತ್ರದ ಬಿಡುಗಡೆ ಯಾವಾಗ ಎಂಬ ಕುರಿತು ಚಿತ್ರತಂಡ ಅಧಿಕೃತ ಪಡಿಸಿಲ್ಲ. ಆದರೆ, ಮೂಲಗಳ ಪ್ರಕಾರ ಈ ಚಿತ್ರ ಈ ವರ್ಷಾಂತ್ಯಕ್ಕೆ ಬೆಳ್ಳಿ ಪರದೆ ಮೇಲೆ ಬರಲು ಸಜ್ಜಾಗಿದೆ. ವರದಿಗಳ ಪ್ರಕಾರ ಈ ಚಿತ್ರದಲ್ಲಿ ನಟ ಕಿಂಗ್​ ಖಾನ್​ ಶಾರುಖ್​ ಖಾನ್​ ಕೂಡ ಕಾಣಿಸಿಕೊಳ್ಳಲಿದ್ದಾರೆ. ಆ್ಯಕ್ಷನ್​ ದೃಶ್ಯದಲ್ಲಿ ಅವರು ನಟ ಸಲ್ಮಾನ್​ ಜೊತೆಗೆ ಕೆಲವು ಕ್ಷಣಗಳು ಕಾಣಿಸಿಕೊಂಡಿದ್ದಾರೆ. ಈ ದೃಶ್ಯದ ಚಿತ್ರೀಕರಣ ಮದ್​ ದ್ವೀಪದಲ್ಲಿ ಈ ತಿಂಗಳ ಆರಂಭದಲ್ಲಿ ಮುಗಿಸಲಾಗಿದೆ.

ಚಿತ್ರದದ ಹೊರತಾಗಿ ನಟಿ ಕತ್ರಿನಾ ಫಾರನ್​ ಅಖ್ತರ್​ ಜೊತೆಗೆ 'ಜೀ ಲೇ ಜಾರಾ' ಚಿತ್ರದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ, ಆಲಿಯಾ ಭಟ್​ ಜೊತೆಗೆ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೇ ಕತ್ರಿನಾ ಕೈಫ್​ ಅಭಿನಯದ 'ಮೇರಿ ಕ್ರಿಸ್ಮಸ್'​ ಚಿತ್ರ ಡಿಸೆಂಬರ್​ 15ಕ್ಕೆ ಬಿಡುಗಡೆಗೆ ಸಜ್ಜಾಗಿದೆ.

ಇದನ್ನೂ ಓದಿ: ದಿಶಾ ಪಟಾನಿ ಗೆಳೆಯನ ಕೈ ಮೇಲೆ ಟ್ಯಾಟೂ... ವದಂತಿಗೆ ಪುಷ್ಟಿ ನೀಡಿದ ಹಚ್ಚೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.