ETV Bharat / entertainment

'ಇಷ್ಟು ದಿನ ನೀವೆಲ್ಲಿದ್ರಿ'.. ಬಾಲಿವುಡ್​ ಕ್ಯಾಟ್​ ಫೋಟೋಗೆ ಫ್ಯಾನ್ಸ್​ ಪ್ರಶ್ನೆ?! - etv bharat kannada

ಬಾಲಿವುಡ್​ ನಟಿ ಕತ್ರಿನಾ ಕೈಫ್​ ವಿವಿಧ ಭಂಗಿಯಲ್ಲಿ ನಿಂತ ಮೂರು ಫೋಟೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

instagram
ನಟಿ ಕತ್ರಿನಾ ಕೈಫ್
author img

By

Published : Mar 4, 2023, 3:22 PM IST

ಬಾಲಿವುಡ್​ ಬಹುಬೇಡಿಕೆಯ ನಟಿ ಕತ್ರಿನಾ ಕೈಫ್​ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಕೆಲವು ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ನಟಿಯ ಹೊಸ ಸ್ಟೈಲ್​ ನೋಡಿ ಅಭಿಮಾನಿಗಳಂತೂ ಫುಲ್​ ಖುಷಿಯಾಗಿದ್ದು, ಕಮೆಂಟ್​ಗಳ ಸುರಿಮಳೆಯನ್ನೇ ಹರಿಸಿದ್ದಾರೆ.

ಸಿನಿಮಾವೊಂದರ ಚಿತ್ರೀಕರಣದಲ್ಲಿ ತೊಡಗಿದ್ದ ಕತ್ರಿನಾ, ಅದು ಮುಗಿದ ಬಳಿಕ ತಮ್ಮ ಫೋಟೋವನ್ನು ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿದ್ದಾರೆ. ವಿವಿಧ ಭಂಗಿಯಲ್ಲಿ ನಿಂತು ಮೂರು ಫೋಟೋಗಳಿಗೆ ಪ್ರತ್ಯೇಕ ಪೋಸ್​ ನೀಡಿದ್ದು, "ಪೋಸ್ಟ್-ಪ್ಯಾಕ್-ಅಪ್ ಪೋಸಿಂಗ್" ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ಚಿತ್ರದಲ್ಲಿ ಏಕ್​ ಥಾ ಟೈಗರ್​ ನಟಿ ಬಿಳಿ ಬಣ್ಣದ ಟ್ಯಾಂಕ್​ ಟಾಪ್​ ಮತ್ತು ನೀಲಿ ಬಣ್ಣದ ಡೆನಿಮ್​ ಶಾರ್ಟ್ಸ್​ನೊಂದಿಗೆ ಕ್ಯಾಶುವಲ್​ ಲುಕ್​ನಲ್ಲಿ ಕಾಣಿಸಿದ್ದಾರೆ. ಟ್ಯಾಂಪ್​ ಟಾಪ್​ ಮೇಲೆ ಡೆನಿಮ್​ ಶರ್ಟ್​ ಧರಿಸಿರುವ ನಟಿ, ಬಟನ್​ ಮಾಡದೇ ಹಾಗೆಯೇ ಮುಂಭಾಗದಲ್ಲಿ ಗಂಟು ಹಾಕಿದ್ದಾರೆ. ತಮ್ಮ ಕೇಶವನ್ನು ಫ್ರೀ ಬಿಟ್ಟು, ಲೈಟ್ ಮೇಕಪ್​ನಲ್ಲಿ ಸಿಂಪಲ್ಲಾಗಿ ಕಾಣಿಸಿದ್ದಾರೆ.

ಇದನ್ನೂ ಓದಿ: ಪವರ್ ಸ್ಟಾರ್ ಯಶಸ್ವಿ ಹಾದಿಯಲ್ಲಿ ಯುವ ರಾಜ್​ಕುಮಾರ್​: ಅಪ್ಪು ಕಾರ್​ ನಂಬರ್​ ಯುವ ಸಿನಿಮಾದಲ್ಲಿ ಬಳಕೆ

ನಟಿ ಚಿತ್ರಗಳನ್ನು ಪೋಸ್ಟ್​ ಮಾಡಿದ ತಕ್ಷಣ ನೆಟ್ಟಿಗರು ಕಾಮೆಂಟ್​ ವಿಭಾಗವನ್ನು ಕೆಂಪು ಹೃದಯ ಮತ್ತು ಬೆಂಕಿಯ ಇಮೋಜಿನೊಂದಿಗೆ ತುಂಬಿದ್ದಾರೆ. ಇಷ್ಟು ದಿನ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದ ನಟಿ ಫ್ರೀ ಮಾಡಿಕೊಂಡು ಫೋಟೋಗಳನ್ನು ಶೇರ್​ ಮಾಡಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ. ಹೀಗಾಗಿ ನಟಿ ಫ್ಯಾನ್ಸ್​ 'ರಾಣಿ ಹಿಂತಿರುಗಿದ್ದಾರೆ!' ಎಂದು ಕಮೆಂಟ್​ ಮಾಡುತ್ತಿದ್ದಾರೆ. ಫೋಸ್ಟ್​ಗೆ ಪ್ರತಿಕ್ರಿಯಿಸಿರುವ ಅಭಿಮಾನಿಯೊಬ್ಬರು, ವಾವ್ಹ್​..! ಇಷ್ಟು ದಿನ ನೀವೆಲ್ಲಿದ್ರಿ... ನಿಮ್ಮ ಅಭಿಮಾನಿಗಳಿಗೆ ಈ ರೀತಿ ನಿರಾಸೆ ಮಾಡಬೇಡಿ. ದಯವಿಟ್ಟು ಹೆಚ್ಚು ಸಕ್ರಿಯರಾಗಿರಿ" ಎಂದು ಬರೆದುಕೊಂಡಿದ್ದಾರೆ.

ಸಿನಿಮಾ ಶೂಟಿಂಗ್​ನಲ್ಲಿ ಕತ್ರಿನಾ ಬ್ಯುಸಿ: ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿಯಾಗಿರುವ ನಟಿ ಕತ್ರಿನಾ ಕೈಫ್ ಸೋಶಿಯಲ್​ ಮೀಡಿಯಾದಿಂದ ಕೊಂಚ ದೂರವೇ ಉಳಿದಿದ್ದಾರೆ. ಹೀಗಾಗಿ ಅಭಿಮಾನಿಗಳು ನಟಿಯ ಅಪ್ಡೇಟ್​ಗಾಗಿ ಎದುರು ನೋಡುತ್ತಿದ್ದರು. ಇದೀಗ ಕತ್ರಿನಾ ತಮ್ಮ ಫೋಟೋಗಳನ್ನು ಹಂಚಿಕೊಂಡಿದ್ದು, ಫ್ಯಾನ್ಸ್​ಗೆ ಖುಷಿ ತಂದುಕೊಟ್ಟಿದೆ. ​ಶೂಟಿಂಗ್​ನಲ್ಲಿ ಹೆಚ್ಚು ತೊಡಗಿಸಿಕೊಂಡಿರುವ ನಟಿ ಟೈಗರ್​ 3 ಸಿನಿಮಾ ಮೂಲಕ ಸಲ್ಮಾನ್​ ಖಾನ್​ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೇ ಶ್ರೀರಾಘವನ್​ ಅವರ ಮುಂಬರುವ ಚಿತ್ರ ಮೇರಿ ಕ್ರಿಸ್ಮಸ್​ನಲ್ಲಿ ಕಾಲಿವುಡ್​ ನಟ ವಿಜಯ್​ ಸೇತುಪತಿ ಜೊತೆ ಅಭಿನಯಿಸಲಿದ್ದಾರೆ.

ಬಾಲಿವುಡ್​ ಜೋಡಿ ವಿಕ್ಯಾಟ್​: ​ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್ ಬಾಲಿವುಡ್​ ಚಿತ್ರರಂಗದ ಬ್ಯೂಟಿಫುಲ್​ ಕಪಲ್ ಎಂದೇ ಗುರುತಿಸಿಕೊಂಡಿದ್ದಾರೆ​. ಡೇಟಿಂಗ್​ನಲ್ಲಿದ್ದ ಅವರಿಬ್ಬರು 2021 ರ ಡಿಸೆಂಬರ್​​ 9 ರಂದು ರಾಜಸ್ಥಾನದ ಸಿಕ್ಸ್​ ಸೆನ್ಸಸ್​ ಪೋರ್ಟ್​ ಬವೇರಾದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಅದ್ದೂರಿಯಾಗಿ ಹಮ್ಮಿಕೊಂಡಿದ್ದ ಮದುವೆ ಸಮಾರಂಭದಲ್ಲಿ ವಿಕ್ಯಾಟ್​ ಕುಟುಂಬಸ್ಥರು, ಆತ್ಮೀಯರು ಭಾಗಿಯಾಗಿದ್ದರು. ವಿವಾಹದ ಬಳಿಕ ಈ ಜೋಡಿಯ ನಡೆ ಅಭಿಮಾನಿಗಳ ಮನ ಗೆಲ್ಲುತ್ತಿದೆ.

ಇದನ್ನೂ ಓದಿ: ವಿರಾಟ್​ ಕೊರಳಲ್ಲಿ ರುದ್ರಾಕ್ಷಿ ಸರ, ಭಸ್ಮ ಆರತಿಯಲ್ಲಿ ವಿರುಷ್ಕಾ ಭಾಗಿ.. ಮಹಾಕಾಳೇಶ್ವರನ ದರ್ಶನ ಪಡೆದ ದಂಪತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.