ಹಿಂದಿಯ ಸಾಲು ಸಾಲು ಚಿತ್ರಗಳು ಮಕಾಡೆ ಮಲಗುತ್ತಿದ್ದು, ಇದು ಬಾಲಿವುಡ್ ಮಂದಿಯನ್ನು ಕಂಗೆಡಿಸಿದೆ. ಈ ಕುರಿತು ಮಾತನಾಡಿರುವ ನಟಿ ಕಾಜೋಲ್, ಹಿಂದಿ ಚಿತ್ರರಂಗ ಪ್ರಗತಿಪರವಾದ ಉದ್ಯಮ. ಬಾಲಿವುಡ್ ಸಿನಿಮಾಗಳು ಉತ್ತಮ ಪ್ರದರ್ಶನ ಕಾಣುತ್ತಿಲ್ಲ ಎಂಬುದು ಕೆಲವು ಸಮಯದ ವಿಷಯವಷ್ಟೇ ಎಂದು ಸಮರ್ಥನೆ ನೀಡಿದ್ದಾರೆ.
ತಮ್ಮ ಮುಂದಿನ ಚಿತ್ರ 'ಸಲಾಂ ವೆಂಕಿ'ಯಲ್ಲಿ ಬ್ಯುಸಿಯಾಗಿರುವ ನಟಿ ಮಾತನಾಡಿ, ಹಿಂದಿ ಸಿನಿಮಾಗಳು ಮಾತ್ರ ಉತ್ತಮ ಪ್ರದರ್ಶನ ಕಾಣುತ್ತಿಲ್ಲ ಎಂಬುದು ಸರಿಯಲ್ಲ. ಪ್ರಪಂಚದಾದ್ಯಂತ ಅನೇಕ ಸಿನಿಮಾಗಳಿಗೂ ಇದು ಅನ್ವಯವಾಗುತ್ತದೆ ಎಂದರು.
ವಾಸ್ತವ ಎಂದರೆ ಹಿಂದಿ ಸಿನಿಮಾಗಳ ಮೇಲೆ ಅನೇಕ ಹೂಡಿಕೆ ನಡೆಯುತ್ತವೆ. ಅನೇಕ ಸ್ಟೇಕ್ ಹೋಲ್ಡರ್ಗಳು ಅವಲಂಬಿತರಾಗಿದ್ದಾರೆ. ಕೋವಿಡ್ ಸಾಂಕ್ರಾಮಿಕತೆಯ ಬಳಿಕ ಪ್ರೇಕ್ಷಕರ ಅಭಿರುಚಿಯಲ್ಲಿ ಬದಲಾವಣೆಯಾಗಿದೆ. ಹಿಂದಿ ಸಿನಿಮಾ ಮಾತ್ರವಲ್ಲ, ಪ್ರಪಂಚದೆಲ್ಲೆಡೆ ಥಿಯೇಟರ್‌ಗಳ ಕಡೆ ಮುಖ ಮಾಡುವ ಜನರ ಸಂಖ್ಯೆ ಕಡಿಮೆ ಆಗಿದೆ ಎಂದು ಕಾಜೋಲ್ ಹೇಳಿದರು.
![Hindi cinema is progressive will bounce back stronger says Kajol](https://etvbharatimages.akamaized.net/etvbharat/prod-images/17080366_sdss.jpg)
ಇದು ಒಂದು ಸಮಯವಷ್ಟೇ. ನಮ್ಮ ಸಿನಿಮಾಗಳು ಮತ್ತಷ್ಟು ಗಟ್ಟಿಯಾಗಿ ಬಲವಾಗಿ ಮತ್ತೆ ಬರುತ್ತವೆ. ಉದ್ಯಮವಾಗಿ ನಾವು ಅದಕ್ಕೆ ಕೆಲಸ ಮಾಡಬೇಕಿದೆ. ವೈಯಕ್ತಿಕ ಮಟ್ಟದಲ್ಲಿ ಬದಲಾವಣೆ ಮತ್ತು ಹೋರಾಟದ ಚಿತ್ರದತ್ತ ನೋಡಬೇಕು. ವೈಯಕ್ತಿಕ ಶಕ್ತಿಗಳು ಮತ್ತು ಪ್ರಯತ್ನಗಳ ಜೊತೆಯಲ್ಲಿ ನಮ್ಮ ಉದ್ಯಮ ಮತ್ತೆ ಹಳಿಗೆ ಮರಳಲಿದೆ ಎಂದು ಅಭಿಪ್ರಾಯಪಟ್ಟರು.
'ಸಲಾಂ ವೆಂಕಿ' ಚಿತ್ರವನ್ನು ರೇವತಿ ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ವಿಶಾಲ್ ಜೆತ್ವಾ, ರಾಹುಲ್ ಬೋಸ್, ರಾಜೀವ್ ಖಂಡೇವಾಲ್, ಪ್ರಕಾಶ್ ರಾಜ್, ಅಹಾನ ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಲಿದ್ದಾರೆ.
ಇದನ್ನೂ ಓದಿ: ಬಾಲಿವುಡ್ ನಟಿ ರವೀನಾ ಟಂಡನ್ಗೆ ಆಪತ್ತು ತಂದ ವೈರಲ್ ವಿಡಿಯೋ: ತನಿಖೆಗೆ ಆದೇಶ