ಹಿಂದಿ ಚಿತ್ರರಂಗದ ಜನಪ್ರಿಯ ತಾರಾ ದಂಪತಿ ಅಜಯ್ ದೇವ್ಗನ್ ಮತ್ತು ಕಾಜೋಲ್ ದೇವ್ಗನ್ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಪ್ರಸಿದ್ಧ ನಟಿ ಕಾಜೋಲ್ ಮುಂಬೈನಲ್ಲಿ ಕೋಟಿಗಟ್ಟಲೆ ಮೌಲ್ಯದ ಆಸ್ತಿ ಖರೀದಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಸೂಪರ್ ಸ್ಟಾರ್, ಪತಿ ಅಜಯ್ ದೇವಗನ್ ಅವರು ಈಗಾಗಲೇ ಆ ಸ್ಥಳದಲ್ಲಿ ಐದು ಫ್ಲಾಟ್ಗಳನ್ನು ಖರೀದಿಸಿದ್ದು, ಅದೇ ಸ್ಥಳದಲ್ಲಿ ನಟಿ ಕಾಜೋಲ್ ಕಚೇರಿ ಸ್ಥಳ ಖರೀದಿದ್ದಾರೆ. ಓಶಿವಾರದಲ್ಲಿರುವ ಸಿಗ್ನೇಚರ್ ಬಿಲ್ಡಿಂಗ್ ಬಳಿ ನಟಿ ತಮ್ಮ ಕಚೇರಿಗಾಗಿ ಜಾಗ ಖರೀದಿಸಿದ್ದಾರೆ. ಈ ಜಾಗದ ಬೆಲೆ ಕೇಳಿದ ನೆಟ್ಟಿಗರು ಶಾಕ್ ಆಗಿದ್ದಾರೆ.
ಬೆಲೆ ಕೇಳಿ ಹುಬ್ಬೇರಿಸಿದ ನೆಟ್ಟಿಗರು: ವರದಿಗಳ ಪ್ರಕಾರ, ವೀರ್ ಸಾವರ್ಕರ್ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಈ ಆಸ್ತಿಯನ್ನು ಮಾರಾಟ ಮಾಡಿದ್ದಾರೆ. ಪ್ರಸಕ್ತ ಸಾಲಿನಲ್ಲಿ (2023) ನಟಿ ಖರೀದಿಸಿರುವ ಎರಡನೇ ಆಸ್ತಿ ಇದು. ಈ ಆಸ್ತಿ ಒಪ್ಪಂದ ಜುಲೈ 28 ರಂದು ಮಾಡಲಾಗಿದೆ. ಕಾಜೋಲ್ ಅವರ ಹೊಸ ಆಸ್ತಿ 194.67 ಚದರ್ ಮೀಟರ್ ಇದ್ದು, 7.64 ಕೋಟಿ ರೂ. ಕೊಟ್ಟು ಖರೀದಿಸಿದ್ದಾರೆ ಎಂದು ಹೇಳಲಾಗಿದೆ. ಗಮನಾರ್ಹ ಅಂಶವೆಂದರೆ ನಟಿಯ ಪತಿ, ನಟ ಅಜಯ್ ದೇವಗನ್ ಸಹ ಇದೇ ಜಾಗದ ಬಳಿ 5 ಫ್ಲ್ಯಾಟ್ಗಳನ್ನು ಖರೀದಿಸಿದ್ದಾರೆ. ಇದರ ಮೌಲ್ಯ ಬರೋಬ್ಬರಿ 45 ಕೊಟಿ ರೂ. ಆಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ತಾವು ಕೆಲಸ ನಿರ್ವಹಿಸಿದ್ದ ಬಿಎಂಟಿಸಿ ಡಿಪೋಗೆ ಭೇಟಿ ಕೊಟ್ಟ ರಜನಿಕಾಂತ್: ಸಿಬ್ಬಂದಿ ಫುಲ್ ಖುಷ್
ಇದಕ್ಕೂ ಮುನ್ನ ಕೆಲ ಆಸ್ತಿ ಖರೀದಿಸಿದ್ದ ಸಿನಿಮಾ: ರಿಲಯನ್ಸ್ ಎಂಟರ್ಟೈನ್ಮೆಂಟ್, ಸಾಜಿದ್ ನಾಡಿಯಾಡ್ವಾಲಾ, ಅಬುಂದಾಟಿಯಾ ಎಂಟರ್ಟೈನ್ಮೆಂಟ್ ಮತ್ತು ಬನಿಜಯ್ ಏಷ್ಯಾ ಸೇರಿದಂತೆ ಪ್ರಸಿದ್ಧ ಕಂಪನಿಗಳಿರುವ ಜಾಗದಲ್ಲಿ ನಟಿ ಹೊಸ ಆಸ್ತಿ ಖರೀದಿಸಿದ್ದಾರೆ. ಇತ್ತೀಚೆಗೆ ನಟಿ ಮುಂಬೈನಲ್ಲಿ 16.5 ಕೋಟಿ ರೂ. ಮೌಲ್ಯದ ಆಸ್ತಿವೊಂದನ್ನು ಖರೀದಿಸಿದ್ದಾರೆ. ಅದೇ ಸಂದರ್ಭ ಜುಹು ಪ್ರದೇಶದ ಅನನ್ಯಾ ಬಿಲ್ಡಿಂಗ್ನಲ್ಲಿ ನಟಿ ಎರಡು ಅಪಾರ್ಟ್ಮೆಂಟ್ ಸೇರಿ 11.95 ಕೋಟಿ ರೂ.ಗೆ ಒಪ್ಪಂದ ಮಾಡಿಕೊಂಡಿದ್ದರು. ಇದೀಗ ಮತ್ತೊಮ್ಮೆ ಆಸ್ತಿ ಖರೀದಿಸಿ ಸುದ್ದಿಯಾಗಿದ್ದಾರೆ.
ಇದನ್ನೂ ಓದಿ: Jawan: ಎಸ್ಆರ್ಕೆ ಸಿನಿಮಾ ಸದ್ದು - ಖ್ಯಾತ ಥಿಯೇಟರ್ನಲ್ಲಿ ಮುಂಜಾನೆ 6 ಗಂಟೆಗೆ ಜವಾನ್ ಪ್ರದರ್ಶನ!
ನಟ ನಟಿಯ ಸಿನಿಮಾಗಳು: ನಟಿ ಕಾಜೋಲ್ ಕೆಲಸದ ವಿಚಾರ ಗಮನಿಸುವುದಾದರೆ, ಕೊನೆಯದಾಗಿ ಒಟಿಟಿ ವೆಬ್ ಸೀರಿಸ್ಗಳಾದ ದಿ ಟ್ರಯಲ್ ಮತ್ತು ಲಸ್ಟ್ ಸ್ಟೋರಿಸ್ 2 ನಲ್ಲಿ ಕಾಣಿಸಿಕೊಂಡರು. ನಟ ಅಜಯ್ ದೇವ್ಗನ್ ಅವರ ಕೊನೆಯ ಸಿನಿಮಾ ಭೋಲಾ. ಸದ್ಯ ಆಸ್ತಿ ಸಲುವಾಗಿ ಸುದ್ದಿಯಲ್ಲಿದ್ದಾರೆ.