ವಂಚಕ ಸುಖೇಶ್ ಚಂದ್ರಶೇಖರ್ನ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಕಳೆದ ಹಲವು ದಿನಗಳಿಂದ ಸುದ್ದಿಯಲ್ಲಿದ್ದಾರೆ. ಇದೀಗ ಕಾಸ್ಮೆಟಿಕ್ ಸರ್ಜರಿ ಬಗ್ಗೆ ನಟಿಯ ಅಭಿಪ್ರಾಯಗಳು ಸಿಕ್ಕಾಪಟ್ಟೆ ಟ್ರೋಲ್ ಆಗಿ ಮತ್ತೆ ಸುದ್ದಿಯಾಗಿದ್ದಾರೆ.
- " class="align-text-top noRightClick twitterSection" data="
">
ಜಾಕ್ವೆಲಿನ್ ಅವರ ಹಳೇ ವಿಡಿಯೋವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಮಿಸ್ ಯೂನಿವರ್ಸ್ ಶ್ರೀಲಂಕಾ ಸ್ಪರ್ಧೆಯ ಪ್ರಶ್ನೋತ್ತರ ಸುತ್ತಿನಲ್ಲಿ ಕಾಸ್ಮೆಟಿಕ್ ಸರ್ಜರಿ ಕುರಿತು ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವುದನ್ನು ಈ ವಿಡಿಯೋದಲ್ಲಿ ನೀವು ಕಾಣಬಹುದು. ಕಾಸ್ಮೆಟಿಕ್ ಸರ್ಜರಿಯ ಬಗ್ಗೆ ಕೇಳಿದಾಗ, ಜಾಕ್ವೆಲಿನ್ ಇದು ನೈಸರ್ಗಿಕ ಸೌಂದರ್ಯವನ್ನು ಆಚರಿಸುವ ಕಲ್ಪನೆಗೆ ವಿರುದ್ಧವಾಗಿದೆ ಎಂದು ಹೇಳಿದ್ದರು.
![Jacqueline Fernandez trolled](https://etvbharatimages.akamaized.net/etvbharat/prod-images/17136488_sdrbfhe4.jpg)
ಕಾಸ್ಮೆಟಿಕ್ ಸರ್ಜರಿ ಸೌಂದರ್ಯ ಸ್ಪರ್ಧೆಗಳ ಸಂಪೂರ್ಣ ಪರಿಕಲ್ಪನೆಗೆ ವಿರುದ್ಧವಾಗಿದೆ. ಮಹಿಳೆಯರ ನೈಸರ್ಗಿಕ ಸೌಂದರ್ಯವನ್ನು ಆಚರಿಸುವುದೇ ಸೌಂದರ್ಯ ಸ್ಪರ್ಧೆಯ ಉದ್ದೇಶ. ಜೊತೆಗೆ, ಕಾಸ್ಮೆಟಿಕ್ ಸರ್ಜರಿ ಪ್ರೋತ್ಸಾಹಿಸುವ ವಿಷಯಕ್ಕೆ ಬಂದರೆ, ಯಾರು ಅದನ್ನು ಭರಿಸಬಲ್ಲರು ಅಥವಾ ನಿಭಾಯಿಸಬಲ್ಲರು ಅವರು ಕಾಸ್ಮೆಟಿಕ್ ಸರ್ಜರಿಯನ್ನು ಬೆಂಬಲಿಸುತ್ತಾರೆ.
ಯಾರಿಂದ ಕಾಸ್ಮೆಟಿಕ್ ಸರ್ಜರಿ ನಿಭಾಯಿಸಲು, ಭರಿಸಲು ಸಾಧ್ಯವಿಲ್ಲ ಅವರು ಅದನ್ನು ನಿರಾಕರಿಸುತ್ತಾರೆ. ಆದರೆ ಸೌಂದರ್ಯ ಸ್ಪರ್ಧೆಗಳು ಈ ವಿಷಯಕ್ಕೆ ಸಂಬಂಧಿಸಿಲ್ಲ. ಇಲ್ಲಿ ಕೇವಲ ನೈಸರ್ಗಿಕ ಸೌಂದರ್ಯವನ್ನು ಆಚರಿಸಲಾಗುತ್ತದೆ ಎಂದು ವಿಡಿಯೋದಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಹೇಳಿದ್ದಾರೆ.
ಈ ವೈರಲ್ ವಿಡಿಯೋ ಈಗ ಟ್ರೋಲಿಗರ ತುತ್ತಾಗಿದೆ. ನೀವು ಎಷ್ಟು ಬಾರಿ ಕಾಸ್ಮೆಟಿಕ್ ಸರ್ಜರಿಗೆ ಒಳಗಾಗಿದ್ದೀರಾ? ಎಂದು ನೆಟಿಜೆನ್ಸ್ ಪ್ರಶ್ನಿಸುತ್ತಿದ್ದಾರೆ. ಏಕೆಂದರೆ ನಟಿಯ ಮುಖವು ಸದ್ಯ ಆ ವೈರಲ್ ವಿಡಿಯೋಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಅವರು ದೇಹದ ಮೇಲೆ ಎಲ್ಲ ರೀತಿಯ ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿದ್ದಾರೆಂದು ಜನರು ಸೋಷಿಯಲ್ ಮೀಡಿಯಾದಲ್ಲಿ ಟೀಕೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬಾಲಿವುಡ್ ಪ್ರವೇಶಕ್ಕೆ ಸಜ್ಜಾದ ಕಿಂಗ್ ಖಾನ್ ಶಾರುಖ್ ಪುತ್ರ; ತೆರೆ ಹಿಂದೆ ಕೆಲಸ ಮಾಡಲಿರುವ ಆರ್ಯನ್ ಖಾನ್
2006ರ ವಿಡಿಯೋ ಜಾಕ್ವೆಲಿನ್‌ರನ್ನು ಟ್ರೋಲ್ ಲೋಕಕ್ಕೆ ಇಳಿಸಿಬಿಟ್ಟಿದೆ. ಆದಾಗ್ಯೂ, ಅವರ ಉತ್ತರವು ಮಿಸ್ ಶ್ರೀಲಂಕಾ ಯೂನಿವರ್ಸ್ ಸ್ಪರ್ಧೆಯ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆಲ್ಲಲು ಸಹಾಯ ಮಾಡಿತ್ತು.