ETV Bharat / entertainment

ಪಠಾಣ್​ ಯಶಸ್ಸು: ಅಭಿಮಾನಿಗಳ ಪ್ರತಿಕ್ರಿಯೆ ನೋಡಲು ಥಿಯೇಟರ್​​ಗೆ ಬಂದ ದೀಪಿಕಾ ಪಡುಕೋಣೆ - ನಟ ಶಾರುಖ್​ ಅಭಿಯನದ ಪಠಾಣ್​ ಸದ್ದು

ಜಗತ್ತಿನಾದ್ಯಂತ ಚಿತ್ರರಸಿಕರ ಬಾಯಲ್ಲಿ ನಟ ಶಾರುಖ್​ ಅಭಿನಯದ ಪಠಾಣ್​ ಸಿನಿಮಾದ್ದೇ ಮಾತು. ಈ ಯಶಸ್ಸನ್ನು ಕಾಣಲು ನಟಿ ದೀಪಿಕಾ ಪಡುಕೋಣೆ ಖುದ್ದು ಸಿನಿಮಾ ಮಂದಿರಕ್ಕೆ ಭೇಟಿ ನೀಡಿದ್ದರು.

ಪಠಾಣ್​ ಯಶಸ್ಸು; ಅಭಿಮಾನಿಗಳ ಪ್ರತಿಕ್ರಿಯೆ ನೋಡಲು ಮುಖ ಮುಚ್ಚಿಕೊಂಡು ಥಿಯೇಟರ್​​ಗೆ ಭೇಟಿ ನೀಡಿದ ನಟಿ ದೀಪಿಕಾ ಪಡುಕೋಣೆ
actress-deepika-padukone-visited-the-theater-to-see-audience-reaction-in-pathaan-success
author img

By

Published : Jan 30, 2023, 2:29 PM IST

ಮುಂಬೈ: ಪಠಾಣ್​ ಚಿತ್ರ ಬಾಲಿವುಡ್​ನಲ್ಲಿ ಬಹುದೊಡ್ಡ ಯಶಸ್ಸು ಕಾಣುತ್ತಿದೆ. ಈ ಯಶಸ್ಸಿನ ಸಂಭ್ರಮದಲ್ಲಿ ಚಿತ್ರತಂಡ ತೇಲುತ್ತಿದ್ದು, ಅಭಿಮಾನಿಗಳೊಂದಿಗೆ ಚಿತ್ರವನ್ನು ನೋಡಿ ಅನಂದಿಸಲು ನಟಿ ದೀಪಿಕಾ ಪಡುಕೋಣೆ ಕೂಡ ಮುಂದಾಗಿದ್ದಾರೆ. ಇದಕ್ಕಾಗಿ ಮುಂಬೈನ ಥಿಯೇಟರ್​ಗೆ ಮುಖ ಮುಚ್ಚಿಕೊಂಡು ಹೋಗಿರುವ ಅವರು ಅಭಿಮಾನಿಗಳ ಪ್ರತಿಕ್ರಿಯೆಯನ್ನು ಎಂಜಾಯ್​ ಮಾಡಿದ್ದಾರೆ.

ಭಾನುವಾರ ಮುಂಬೈನ ಗೈಟಿ ಗ್ಯಾಲಕ್ಸಿಗೆ ಭೇಟಿ ನೀಡಿದ ದೀಪಿಕಾ, ಕಪ್ಪು ಬಣ್ಣದ ಹುಡ್ಡಿಯಲ್ಲಿ ಕಂಡು ಬಂದರು. ಮುಖ ಕಾಣದಂತೆ ಹುಡ್ಡಿ ಕ್ಯಾಪ್​ ತೊಟ್ಟು, ಮಾಸ್ಕ್​​ ಧರಿಸಿದ್ದರು. ಥಿಯೇಟರ್​ಗೆ ಭೇಟಿ ನೀಡಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ. ಥಿಯೇಟರ್​ನಲ್ಲಿ ಕೆಲವು ಕ್ಷಣಗಳನ್ನು ಕಳೆದ ನಟಿ ಸಂತಸಪಟ್ಟಿದ್ದಾರೆ.

ಬಾಕ್ಸ್​ ಆಫೀಸ್​ನಲ್ಲಿ ಸಿಕ್ಕಾಪಟ್ಟೆ ಧೂಳೆಬ್ಬಿಸುತ್ತಿರುವ ಪಠಾಣ್​ ಜಗತ್ತಿನಾದ್ಯಂತ ನಾಲ್ಕು ದಿನದಲ್ಲಿ 429 ಕೋಟಿ ರೂ ಬಾಚಿದ್ದು, ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಯಶ್​ ರಾಜ್​ ಫಿಲ್ಮ್ಸ್​ನಡಿ ನಿರ್ಮಾಣವಾಗಿರುವ ಚಿತ್ರಕ್ಕೆ ಸಿದ್ಧಾರ್ಥ್​ ಆನಂದ್​ ನಿರ್ದೇಶನ ಮಾಡಿದ್ದಾರೆ. ಸಾಕಷ್ಟು ಬಹಿಷ್ಕಾರದ ಟ್ರೋಲ್‌ಗಳನ್ನು ಎದುರಿಸಿದ್ದ ಸಿನಿಮಾ ಬಿಡುಗಡೆ ದಿನ ಅನೇಕ ಕಡೆ ಸಮಸ್ಯೆ ಎದುರಿಸಿದ್ದರೂ, ಮೊದಲ ದಿನವೇ ದಾಖಲೆ ಮಟ್ಟದ ಕಲೆಕ್ಷನ್​ ಮಾಡಿತ್ತು. ಇದು ಚಿತ್ರ ಪಂಡಿತರು ಹುಬ್ಬೇರುವಂತೆ ಮಾಡಿತ್ತು. ಸದ್ಯ ಐದನೇ ದಿನವೂ ಉತ್ತಮ ಪ್ರದರ್ಶನ ಕಾಣುತ್ತಿದೆ.

ನಟಿ ದೀಪಿಕಾ ಪಡುಕೋಣೆ
ನಟಿ ದೀಪಿಕಾ ಪಡುಕೋಣೆ

ಸಿದ್ಧಾರ್ಥ್ ಆನಂದ್ ನಿರ್ದೇಶನದ ಪಠಾಣ್ ಜನವರಿ 25ರಂದು ಬಿಡುಗಡೆಯಾಗಿತ್ತು. ಶಾರುಖ್ ಜೊತೆಗೆ, ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ ಸೇರಿದಂತೆ ಪ್ರಮುಖರು ಬಣ್ಣ ಹಚ್ಚಿದ್ದಾರೆ. ಆ್ಯಕ್ಷನ್​ ಪಾತ್ರದಲ್ಲಿ ಶಾರುಖ್​ ಖಾನ್​ ಮಿಂಚಿದ್ದು, ಈ ಸಿನಿಮಾಗಾಗಿ ತಮ್ಮ ದೇಹವನ್ನು 57ನೇ ವಯಸ್ಸಿನಲ್ಲೂ ಕಟ್ಟುಮಸ್ತಾಗಿ ಹುರಿಗೊಳಿಸಿದ್ದಾರೆ. ಕಳೆದ ವರ್ಷ ಬಿಡುಗಡೆಯಾಗಿದ್ದ ಕೆಜಿಎಫ್ 2 ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಈ ದಾಖಲೆಯನ್ನು ಮುರಿದು ಅತಿ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಸಂಪಾದನೆ ಮಾಡಿದ ದಾಖಲೆಯನ್ನು ಪಠಾಣ್ ಮಾಡಿದೆ.

ಪಠಾಣ್​ ಸಿನಿಮಾಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದ್ದು, ನಾಲ್ಕು ವರ್ಷದ ಅಂತರದಲ್ಲಿ ಒಂದೊಳ್ಳೆ ಸಿನಿಮಾವನ್ನು ಶಾರುಖ್​ ನೀಡಿದ್ದಾರೆ ಎಂದೇ ಹೇಳಲಾಗುತ್ತಿದೆ. ಶಾರುಖ್​ ಕೂಡ ಸಿನಿಮಾಗಾಗಿ ಸಾಕಷ್ಟು ತಯಾರಿ ನಡೆಸಿದ್ದು, ಅದ್ಭುತ ಪ್ರದರ್ಶನ ತೋರಿದ್ದಾರೆ. ಸಿನಿಮಾ ಹೀಗೆ ಗಲ್ಲಾ ಪೆಟ್ಟಿಗೆಯಲ್ಲಿ ಧೂಳೆಬ್ಬಿಸುತ್ತಿದ್ದರೆ, ಮತ್ತಷ್ಟು ಹೊಸ ದಾಖಲೆಗಳನ್ನು ಬರೆಯಲಿದೆ ಎಂಬುದು ಸಿನಿಮಾ ಪಂಡಿತರ ಲೆಕ್ಕಾಚಾರ.

ಶಾರುಖ್​ ಖಾನ್​ ಕೂಡ ಅಭಿಮಾನಿಗಳ ಅಭಿಮಾನಕ್ಕೆ ಮನಸೋತಿದ್ದು, ಚಿತ್ರದ ಯಶಸ್ಸನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಭಾನುವಾರ ಸಂಜೆ ಅವರ ಮನ್ನತ್​ ಮನೆ ಮುಂದೆ ಹರಿದು ಬಂದ ಅಭಿಮಾನಿ ಸಾಗರಕ್ಕೆ ಫ್ಲೈಯಿಂಗ್​ ಕಿಸ್​ ನೀಡಿದ್ದಾರೆ.

ಇದನ್ನೂ ಓದಿ: ಐದನೇ ದಿನವೂ ಮುಂದುವರೆದ 'ಪಠಾಣ್'​ ಅಬ್ಬರ: ವಿಶ್ವಾದ್ಯಂತ 429 ಕೋಟಿ ಸಂಪಾದಿಸುವ ಮೂಲಕ ಬಾಕ್ಸ್​ ಆಫೀಸ್​ ಕಿಂಗ್ ಆದ ಶಾರುಖ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.