ಈ ಸಿನಿಮಾ ಎಂಬ ಕ್ರಿಯೇಟಿವ್ ಜಗತ್ತಿನಲ್ಲಿ ಯಾರು ಏನು ಬೇಕಾದರೂ ಆಗಬಹುದು. ಅದೇ ರೀತಿ ನಟಿಯೊಬ್ಬರು ಇಲ್ಲಿ ನಿರ್ದೇಶಕಿಯಾಗಲು ತಯಾರಾಗಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ನಟಿಸಿ, ನಿರ್ದೇಶಿಸಿದ್ದ ಸಿನಿಮಾ ಅಪೂರ್ವ. ಆ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡವರು ನಟಿ ಅಪೂರ್ವ. ಆ ಹೆಸರಿನಿಂದಲೇ ಸ್ಯಾಂಡಲ್ವುಡ್ನಲ್ಲಿ ಅಪೂರ್ವ ಫೇಮಸ್ ಆದರು. ಬಳಿಕ ವಿಕ್ಟರಿ 2, ಕೃಷ್ಣ ಟಾಕೀಸ್ ಹಲವು ಸಿನಿಮಾಗಳಲ್ಲಿ ನಟಿಸಿರುವ ಅಪೂರ್ವ ಇದೀಗ ನಿರ್ದೇಶಕಿಯಾಗಿದ್ದಾರೆ.
- " class="align-text-top noRightClick twitterSection" data="">
ಹೌದು, 'ಓ ನನ್ನ ಚೇತನ' ಚಿತ್ರದ ಮೂಲಕ ಅಪೂರ್ವ ಅವರು ನಿರ್ದೇಶಕಿಯಾಗಿ ಬಡ್ತಿ ಪಡೆದುಕೊಂಡಿದ್ದಾರೆ. ಅಲ್ಲದೆ, ಅವರ ನಿರ್ದೇಶನದ ಮೊದಲ ಸಿನಿಮಾಕ್ಕೆ ಅಂತಾರಾಷ್ಟ್ರೀಯ ಮನ್ನಣೆ ಸಿಕ್ಕಿದೆ. ಇದೀಗ ಓ ನನ್ನ ಚೇತನ ಚಿತ್ರದ ಮೊದಲ ಹಾಡು ಸೋಮವಾರ ರಿಲೀಸ್ ಆಗಿದೆ. ಅಷ್ಟೇ ಅಲ್ಲ ಅಪೂರ್ವ ತಮ್ಮ ಹೆಸರಿನ ಮುಂದೆ ಆಶಾದೇವಿ ಅಂತಾನೂ ಸೇರಿಕೊಂಡಿದ್ದಾರೆ. ಒಂದು ಫೋನ್ ಸುತ್ತಾ ಸುತ್ತೋ ಹಳ್ಳಿ ಸೊಗಡಿನ ಸಿನಿಮಾ. ಅಲೆಮಾರಿ ಖ್ಯಾತಿಯ ಹರಿ ಸಂತು ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಪ್ರದೀಪ್ ವರ್ಮಾ ಸಂಗೀತ ಸಂಯೋಜಿಸಿದ್ದಾರೆ. ಹರಿ ಸಂತು ಸಾಹಿತ್ಯವಿರುವ ಅಂಜು ಹಾಡು ಇವತ್ತು ಎ2 ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಿದೆ.
ಮಾಧುರ್ಯ ಭರಿತವಾಗಿರುವ ಈ ಹಾಡಿಗೆ ಅಶ್ವಿನ್ ಶರ್ಮಾ ಧ್ವನಿಯಾಗಿದ್ದಾರೆ. ಗುರುಪ್ರಶಾಂತ್ ಛಾಯಾಗ್ರಹಣ, ಕೆ.ಎಂ ಪ್ರಕಾಶ್ ಸಂಕಲನ ಚಿತ್ರಕ್ಕಿದೆ. ಚಿತ್ರದ ಮುಖ್ಯಭೂಮಿಕೆಯಲ್ಲಿ ಮಾಸ್ಟರ್ ಪ್ರತೀಕ್, ಮಾಸ್ಟರ್ ಪ್ರೀತಮ್, ಬೇಬಿ ದಾನೇಶ್ವರಿ, ಬೇಬಿ ಡಿಂಪನಾ, ಬೇಬಿ ಮೋನಿಕಾ ನಟಿಸಿದ್ದಾರೆ. ಸಂದೇಶ ಸಾರೋದ್ರ ಜೊತೆಗೆ ಔಟ್ ಅಂಡ್ ಔಟ್ ಎಂಟರ್ಟೈನ್ಮೆಂಟ್ ಪ್ಯಾಕೇಜ್ ಆಗಿ ಬರುತ್ತಿರುವ ಓ ನನ್ನ ಚೇತನ ಯಾವುದೇ ಕಮರ್ಷಿಯಲ್ ಎಂಟರ್ಟೈನ್ಮೆಂಟ್ಗೆ ಕಡಿಮೆ ಇಲ್ಲದ ಹಾಗೇ ಮೂಡಿ ಬಂದಿದೆ ಅನ್ನೋದು ಚಿತ್ರತಂಡದ ಮಾತು.
ಇದೀಗ ರಿಲೀಸ್ ಆಗಿರೋ ಅಂಜು ಹಾಡೇ ಅದಕ್ಕೆ ಉದಾಹರಣೆ. ಈ ಚಿತ್ರಕ್ಕೆ ಅನುಭವವುಳ್ಳ ಬ್ರ್ಯಾಂಡ್ ತಂತ್ರಜ್ಞರೇ ಕೆಲಸ ಮಾಡಿರೋದು ವಿಶೇಷ. ಎಸ್ ಅಂಡ್ ಎಸ್ ಬ್ಯಾನರ್ ಅಡಿಯಲ್ಲಿ ದೀಪಕ್ ವಿ. ಎಸ್ ಮಹೇಶ್, ವಿ. ಪ್ರಶಾಂತ್, ಹರೀಶ್ ಕುಮಾರ್, ಸಾಯಿ ಅಶೋಕ್ ಕುಮಾರ್, ಡಾ. ನಾರಾಯಣ್ ಹೊಸ್ಮನೆ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಈ ಚಿತ್ರದ ಹಾಡನ್ನು ನೋಡಿದ ಮೇಲೆ ಈ ಸಿನಿಮಾದ ಮೇಲೆ ನಿರೀಕ್ಷೆಯೂ ದೊಡ್ಡಾಗಿದೆ.
ಇದನ್ನೂ ಓದಿ: ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಕಾಂತಾರ 2 ಚಿತ್ರದ ಫಸ್ಟ್ ಲುಕ್ ರಿಲೀಸ್