ETV Bharat / entertainment

ಕಿಡ್ನಿ ವೈಫಲ್ಯ.. ಮೇರೆ ಸಾಯಿ ಖ್ಯಾತಿಯ ನಟಿ ಅನಯಾ ಸೋನಿ ಸ್ಥಿತಿ ಗಂಭೀರ - Anaya Soni treatment

ನಟಿ ಅನಯಾ ಸೋನಿ ಕಿಡ್ನಿ ವೈಫಲ್ಯ ಆಗಿದ್ದು ಸದ್ಯದಲ್ಲೇ ಕಿಡ್ನಿ ಟ್ರಾನ್ಸ್‌ಪ್ಲಾಂಟ್‌ ಮಾಡಿಸಿಕೊಳ್ಳಲಿದ್ದಾರೆ.

actress Anaya Soni health condition
ನಟಿ ಅನಯಾ ಸೋನಿ ಕಿಡ್ನಿ ವೈಫಲ್ಯ
author img

By

Published : Oct 2, 2022, 5:46 PM IST

ಮೇರೆ ಸಾಯಿ ಧಾರಾವಾಹಿ ಖ್ಯಾತಿಯ ನಟಿ ಅನಯಾ ಸೋನಿ ಕಿಡ್ನಿ ವೈಫಲ್ಯ ಆಗಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಶೀಘ್ರದಲ್ಲೇ ಕಿಡ್ನಿ ಕಸಿ ಮಾಡಿಸಿಕೊಳ್ಳಬೇಕಿದೆ ಎಂಬುದನ್ನು ಸ್ವತಃ ನಟಿಯೇ ಶನಿವಾರ ಬಹಿರಂಗಪಡಿಸಿದ್ದಾರೆ.

ನಟಿ ಅನಯಾ ಸೋನಿ ತಮ್ಮ ಅನಾರೋಗ್ಯ ಸ್ಥಿತಿಯನ್ನು ಇನ್​ಸ್ಟಾಗ್ರಾಮ್​ನಲ್ಲಿ ಸುದೀರ್ಘ ಬರಹದೊಂದಿಗೆ ಹಂಚಿಕೊಂಡಿದ್ದಾರೆ. 'ನನ್ನ ಕಿಡ್ನಿ ವೈಫಲ್ಯವಾಗಿದೆ, ಡಯಾಲಿಸಿಸ್ ಮಾಡಬೇಕಾಗಿದೆ ಎಂದು ವೈದ್ಯರು ಹೇಳುತ್ತಿದ್ದಾರೆ. ನನ್ನ ಕ್ರಿಯೇಟಿನೈನ್ ಪ್ರಮಾಣ 15.76, ಹಿಮೋಗ್ಲೋಬಿನ್ ಪ್ರಮಾಣ 15.76 ಇದ್ದು, ಸ್ಥಿತಿ ಗಂಭೀರವಾಗಿದೆ. ನಾನು ಸೋಮವಾರದಂದು ಅಂಧೇರಿಯ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ. ನನಗಾಗಿ ಪ್ರಾರ್ಥನೆ ಮಾಡಿ. ನನ್ನ ಜೀವನದ ಪ್ರಯಾಣ ಸುಲಭವಿಲ್ಲ. ಆದರೆ ಪ್ರಸ್ತುತ ಕ್ಷಣವನ್ನು ಆನಂದಿಸುವ ಮೂಲಕ ಅದನ್ನು ಸುಲಭವಾಗಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಈ ಸಮಯ ಬರುತ್ತದೆ ಎಂದು ನನಗೆ ತಿಳಿದಿತ್ತು. ಆದರೆ ಇದು ಕೂಡ ಹಾದುಹೋಗುತ್ತದೆ. ಶೀಘ್ರದಲ್ಲೇ ನನ್ನ ಕಿಡ್ನಿ ಟ್ರಾನ್ಸ್‌ಪ್ಲಾಂಟ್‌ ಮಾಡಿಸುತ್ತೇನೆ. ಬಳಿಕ ಡಯಾಲಿಸಿಸ್‌ಗೆ ಒಳಗಾಗುತ್ತೇನೆ ಎಂದಿದ್ದಾರೆ.

ಈ ಸುದ್ದಿ ಹೊರ ಬೀಳುತ್ತಿದ್ದಂತೆ ಅಭಿಮಾನಿಗಳು ಚಿಂತೆಗೊಳಗಾಗಿದ್ದಾರೆ. ನೀವು ಶೀಘ್ರವಾಗಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇವೆ. ನಮ್ಮ ಪ್ರಾರ್ಥನೆ ನಿಮ್ಮೊಂದಿಗಿದೆ. ಶೀಘ್ರ ಗುಣಮುಖರಾಗಿ ಎಂದು ಅಭಿಮಾನಿಗಳು ಹಾರೈಸಿದ್ದಾರೆ. ಈ ಹಿಂದೆ 2021ರಲ್ಲಿ, ಅನಯಾ ಸೋನಿ ಅವರು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಕಿಡ್ನಿ ಸಮಸ್ಯೆ ಸಂಬಂಧ ಕೆಲ ವಿಡಿಯೋಗಳನ್ನು ಹಂಚಿಕೊಂಡಿದ್ದರು. ಜೊತೆಗೆ ಚಿಕಿತ್ಸೆಗೆ ಹಣಕಾಸಿನ ಸಹಾಯ ಕೋರಿದ್ದರು.

ಇದನ್ನೂ ಓದಿ: ಸಂಡೇ ವಿತ್ ಸುದೀಪ್​.. ನಾಮಿನೇಟ್ ಆದ 12 ಮಂದಿಯಲ್ಲಿ ಮೂವರು ಸೇಫ್.. ಯಾರಾಗ್ತಾರೆ ಔಟ್?

ನಟಿ ಅನಯಾ ಸೋನಿ ಅವರು ಮೇರೆ ಸಾಯಿ, ನಾಮಕರಣ್, ಅದಾಲತ್ ಮತ್ತು ಜನಪ್ರಿಯ ಅಪರಾಧ ಕಾರ್ಯಕ್ರಮ Crime Patrol ನಂತಹ ಟಿವಿ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.