ETV Bharat / entertainment

ಹೆಣ್ಣು ಮಗುವಿಗೆ ಜನ್ಮ ನೀಡಿದ ಆಲಿಯಾ ಭಟ್: ರಾಲಿಯಾ ಕುಟುಂಬದಲ್ಲಿ ಸಂತಸ - ಆಲಿಯಾ ರಣ್​ಬೀರ್ ಮಗು

ಮುಂಬೈನ ಹೆಚ್​ಹೆನ್​ ರಿಲಯನ್ಸ್​​​​​ ಆಸ್ಪತ್ರೆಯಲ್ಲಿಂದು ಬಾಲಿವುಡ್ ನಟಿ ಆಲಿಯಾ ಭಟ್​ ಹೆಣ್ಣು ಮಗುವಿಗೆ ಜನ್ಮ ನೀಡಿದರು.

Actress Aliya bhatt gave birth to baby girl
ಹೆಣ್ಣು ಮಗುವಿಗೆ ಜನ್ಮ ನೀಡಿದ ಆಲಿಯಾ ಭಟ್
author img

By

Published : Nov 6, 2022, 1:15 PM IST

Updated : Nov 6, 2022, 3:37 PM IST

ಮುಂಬೈ: ಕಳೆದ ಏಪ್ರಿಲ್​​ 14ರಂದು ಮುಂಬೈನ ಬಾಂದ್ರಾ ನಿವಾಸದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಬಾಲಿವುಡ್ ಜೋಡಿ ರಣ್​ಬೀರ್​ ಕಪೂರ್​ ಮತ್ತು ಆಲಿಯಾ ಭಟ್​ ತಮ್ಮ ಮೊದಲ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ. ಹೌದು, ಆಲಿಯಾ ಭಟ್ ಇಂದು ಮಧ್ಯಾಹ್ನ 12 ಗಂಟೆಯ ಹೊತ್ತಿಗೆ ಹೆಣ್ಣು ಮಗುವಿಗೆ ಜನ್ಮ ನೀಡಿದರು.

ಬೆಳಗ್ಗೆ 7:30ಕ್ಕೆ ಮುಂಬೈನ ಹೆಚ್​ಹೆನ್​ ರಿಲಯನ್ಸ್​​​​​​ ಆಸ್ಪತ್ರೆಗೆ ರಾಲಿಯಾ ಕಪಲ್ ಮತ್ತು ಕುಟುಂಬಸ್ಥರು ತಲುಪಿದ್ದರು. ಇಂದೇ ಮಗುವಾಗುವ ನಿರೀಕ್ಷೆಯೂ ಇತ್ತು. ಇದೀಗ ಉಭಯ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ.

Actress Aliya bhatt gave birth to baby girl
ನಟಿ ಆಲಿಯಾ ಭಟ್​ ಇನ್​ಸ್ಟಾಗ್ರಾಮ್​ ಪೋಸ್ಟ್

ಆಲಿಯಾ ಭಟ್ ಇನ್‌ಸ್ಟಾಗ್ರಾಮ್‌ ಪೋಸ್ಟ್‌ನಲ್ಲಿ ಶುಭ ಸುದ್ದಿಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಒಂದು ಮರಿ ಸಿಂಹದ ಜೊತೆಗೆ ಎರಡು ಪೋಷಕ ಸಿಂಹಗಳಿರುವ ಫೋಟೋದೊಂದಿಗೆ, ''ನಮ್ಮ ಜೀವನದ ಅತ್ಯುತ್ತಮ ಸುದ್ದಿ. ನಮ್ಮ ಮಗು ಈಗ ನಮ್ಮೊಂದಿಗೆ. ಅಬ್ಬಾ ಎಂಥಾ ಮ್ಯಾಜಿಕಲ್ ಹುಡುಗಿ. ನಾವು ಅಧಿಕೃತವಾಗಿ ಪ್ರೀತಿಯಿಂದ ಈ ವಿಷಯವನ್ನು ಘೋಷಣೆ ಮಾಡುತ್ತಿದ್ದೇವೆ. ಆಶೀರ್ವಾದ ಗಳಿಸಿದ ಪೋಷಕರು - ಲವ್ ಲವ್ ಲವ್ ಆಲಿಯಾ ಮತ್ತು ರಣಬೀರ್'' ಎಂದು ಬರೆದಿದ್ದಾರೆ.

ಪೋಸ್ಟ್ ಹಾಕುತ್ತಿದ್ದಂತೆ ಪೋಷಕರಾಗಿ ಬಡ್ತಿ ಪಡೆದಿರುವ ತಾರಾ ದಂಪತಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಅಭಿಮಾನಿಗಳು, ಚಿತ್ರರಂಗದವರು ಮೆಚ್ಚುಗೆಯ ಸಂದೇಶ ರವಾನಿಸುತ್ತಿದ್ದಾರೆ.

ಇದನ್ನೂ ಓದಿ: ಆಸ್ಪತ್ರೆಗೆ ದಾಖಲಾದ ಆಲಿಯಾ ಭಟ್: ಮೊದಲ ಮಗುವಿನ ನಿರೀಕ್ಷೆಯಲ್ಲಿ 'ರಾಲಿಯಾ' ದಂಪತಿ

''ಅಭಿನಂದನೆಗಳು ಡಾರ್ಲಿಂಗ್, ನಿಮ್ಮ ರಾಜಕುಮಾರಿಯನ್ನು ನೋಡಲು ಕಾಯಲು ಸಾಧ್ಯವಿಲ್ಲ" ಎಂದು ನಟಿ ಸೋನಂ ಕಪೂರ್ ಬರೆದಿದ್ದಾರೆ. ಹಾಸ್ಯನಟ ಕಪಿಲ್ ಶರ್ಮಾ ಶುಭಾಶಯ ತಿಳಿಸಿದ್ದು, "ಅಭಿನಂದನೆಗಳು ಮಮ್ಮಿ ಪಾಪಾ, ಇದು ನಿಮಗೆ ದೇವರ ಅತ್ಯುತ್ತಮ ಕೊಡುಗೆ, ಪುಟ್ಟ ರಾಜಕುಮಾರಿಯು ನಿಮ್ಮ ಸುಂದರ ಕುಟುಂಬಕ್ಕೆ ಆಗಮಿಸಲು ಸಾಕಷ್ಟು ಆಶೀರ್ವದಿಸಲ್ಪಟ್ಟಿದ್ದೀರಿ" ಎಂದು ಬರೆದಿದ್ದಾರೆ. ಕೃತಿ ಸನೂನ್​​, ಶ್ವೇತಾ ಬಚ್ಚನ್​ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಶುಭಾಶಯ ತಿಳಿಸಿದ್ದಾರೆ.

ಇದನ್ನೂ ಓದಿ: ಮುದ್ದಾದ ಹೆಣ್ಣು ಮಗುವಿನ ಪೋಷಕರಾದ 'ರಾಲಿಯಾ': ತಾರಾ ದಂಪತಿಗೆ ಶುಭಾಶಯಗಳ ಮಹಾಪೂರ

Last Updated : Nov 6, 2022, 3:37 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.