ETV Bharat / entertainment

ಪ್ರೇಕ್ಷಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಹೊಂದಿದ್ದಾರೆ: ಬ್ರಹ್ಮಾಸ್ತ್ರ ನಟಿ ಆಲಿಯಾ ಭಟ್ - ಬ್ರಹ್ಮಾಸ್ತ್ರ ಸಿನಿಮಾ ಕುರಿತು ಮಿಶ್ರ ಪ್ರತಿಕ್ರಿಯೆ

ಬ್ರಹ್ಮಾಸ್ತ್ರ ಸಿನಿಮಾ ಕುರಿತು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಇದಕ್ಕೆ ಸ್ವತಃ ಚಿತ್ರದ ನಾಯಕಿ ಆಲಿಯಾ ಭಟ್ ಪ್ರತಿಕ್ರಿಯೆ ನೀಡಿದ್ದಾರೆ.

actress Alia Bhatt reacts on Brahmastra movie reviews
ನಟಿ ಆಲಿಯಾ ಭಟ್ - ನಟ ರಣ್​ಬೀರ್​ ಕಪೂರ್
author img

By

Published : Sep 17, 2022, 1:14 PM IST

ಬಾಲಿವುಡ್​ ಸೂಪರ್​ ಸ್ಟಾರ್ ರಣ್​​ಬೀರ್​ ಕಪೂರ್​ ಮತ್ತು ಬಹುಬೇಡಿಕೆ ನಟಿ ಆಲಿಯಾ ಭಟ್ ಒಟ್ಟಿಗೆ ಮೊದಲ ಬಾರಿಗೆ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಬ್ರಹ್ಮಾಸ್ತ್ರ ಸಿನಿಮಾ ವಿಶ್ವದಾದ್ಯಂತ 300 ಕೋಟಿ ಗಳಿಸಿದೆ ಎಂದು ಚಿತ್ರ ತಯಾರಕರು ಶುಕ್ರವಾರ ಘೋಷಿಸಿದ್ದಾರೆ. ಆದರೆ ಇದನ್ನು ಪ್ರೇಕ್ಷಕರು ಒಪ್ಪುತ್ತಿಲ್ಲ. ಸುಳ್ಳು ಸಂದೇಶ ರವಾನೆಯಾಗುತ್ತಿದೆ ಎಂದು ಟೀಕಿಸಿದ್ದಾರೆ. ಬ್ರಹ್ಮಾಸ್ತ್ರ ಸಿನಿಮಾ ಕುರಿತು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಇದಕ್ಕೆ ಸ್ವತಃ ಚಿತ್ರದ ನಾಯಕಿ ಆಲಿಯಾ ಭಟ್ ಪ್ರತಿಕ್ರಿಯಿಸಿದ್ದಾರೆ.

ಪ್ರೇಕ್ಷಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಮತ್ತು ಚಲನಚಿತ್ರವನ್ನು ಟೀಕಿಸುವ ಹಕ್ಕು ಹೊಂದಿದ್ದಾರೆ ಎಂದು ನಟಿ ಆಲಿಯಾ ಭಟ್ ಹೇಳಿದ್ದಾರೆ. "ನಮಗೆ ಎರಡು ಆಯ್ಕೆಗಳಿವೆ: ಒಂದು- ಸಕಾರಾತ್ಮಕ ವಿಷಯಗಳ ಮೇಲೆ ನಮ್ಮ ಗಮನ ಕೇಂದ್ರೀಕರಿಸಬೇಕು ಅಥವಾ ಋಣಾತ್ಮಕವಾದವುಗಳ ಬಗ್ಗೆಯೇ ಯೋಚಿಸುತ್ತಿರುವುದು. ಟೀಕೆ, ಅಭಿಪ್ರಾಯಗಳು ಮತ್ತು ಪ್ರತಿಕ್ರಿಯೆಗಳು ಪ್ರೇಕ್ಷಕರ ಹಕ್ಕು. ನಾವು ಋಣಾತ್ಮಕವಾಗಿರುವುದಕ್ಕಿಂತ ಧನಾತ್ಮಕ ವಿಷಯಗಳನ್ನು ಮಾತ್ರ ಪಡೆಯುತ್ತೇವೆ ಎಂದು ಭಾವಿಸುತ್ತೇವೆ" ಎಂದು ಅಹಮದಾಬಾದ್​ನಲ್ಲಿ ಬ್ರಹ್ಮಾಸ್ತ್ರ ಸಿನಿಮಾ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಆಲಿಯಾ ತಿಳಿಸಿದರು. ಅಲ್ಲದೇ, ಬ್ರಹ್ಮಾಸ್ತ್ರ ಬಿಡುಗಡೆಯಾದಾಗಿನಿಂದ ಬಾಕ್ಸ್​ ಆಫೀಸ್​​ ಕೊಳ್ಳೆ ಹೊಡೆಯುತ್ತಿದೆ. ಚಿತ್ರವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ ಎಂದು ಆಲಿಯಾ ಹೇಳಿದರು.

actress Alia Bhatt reacts on Brahmastra movie reviews
ನಟಿ ಆಲಿಯಾ ಭಟ್ - ನಟ ರಣ್​ಬೀರ್​ ಕಪೂರ್

ಚಿತ್ರದ ಪ್ರದರ್ಶನದ ಬಗ್ಗೆ ನನಗೆ ಸಂತೋಷವಾಗಿದೆ. ನಕಾರಾತ್ಮಕ ಅಥವಾ ಧನಾತ್ಮಕವಾದ ಎಲ್ಲಾ ವಿಮರ್ಶೆಗಳನ್ನು ನಾವು ಇನ್ನೂ ಸ್ವೀಕರಿಸಬೇಕಿದೆ. ಒಟ್ಟಾರೆಯಾಗಿ ಚಲನಚಿತ್ರವು ಉತ್ತಮ ಪ್ರದರ್ಶನ ನೀಡುತ್ತಿದೆ. ನಾವು ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರಿಗಾಗಿ ಚಲನಚಿತ್ರಗಳನ್ನು ಮಾಡುತ್ತೇವೆ, ಬಿಡುಗಡೆಯಾದಾಗಿನಿಂದ ಸಿನಿಮಾ ಪ್ರದರ್ಶನದ ಬಗ್ಗೆ ನಮಗೆ ತೃಪ್ತಿಯಿದೆ. ನಾನು ಧನಾತ್ಮಕ ಶಕ್ತಿಯತ್ತ ಮಾತ್ರ ಗಮನ ಹರಿಸುತ್ತೇನೆ. ವಿವಿಧ ರೀತಿಯ ವಿಮರ್ಶೆಗಳು ಬಂದಿವೆ ಎಂದು ನನಗೆ ತಿಳಿದಿದೆ ಎಂದು ನಿರ್ದೇಶಕ ಅಯಾನ್​ ಮುಖರ್ಜಿ ತಿಳಿಸಿದರು. ಅಲ್ಲದೇ ನನಗೆ ಆ ಎಲ್ಲಾ ವಿಮರ್ಶೆಗಳನ್ನು ಸ್ವೀಕರಿಸಲು ಸಾಧ್ಯವಾಗಲಿಲ್ಲ, ಬ್ರಹ್ಮಾಸ್ತ್ರ ಎರಡನೇ ಭಾಗಕ್ಕೆ ಹೋಗುವ ಮೊದಲು ನಾನು ಎಲ್ಲವನ್ನೂ ಪರಿಗಣನೆಗೆ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.

ಸುಮಾರು 9 ವರ್ಷಗಳ ದೀರ್ಘಾವಧಿಯಲ್ಲಿ 400 ಕೋಟಿಗೂ ಅಧಿಕ ಬಜೆಟ್‌ನಲ್ಲಿ ನಿರ್ಮಿಸಿರುವ ಈ ಸಿನಿಮಾ ಸೆಪ್ಟೆಂಬರ್ 9ರಂದು ಅದ್ಧೂರಿಯಾಗಿ ಬಿಡುಗಡೆಯಾಯಿತು. ಸ್ಟಾರ್ ಸ್ಟುಡಿಯೋಸ್ ಮತ್ತು ಧರ್ಮ ಪ್ರೊಡಕ್ಷನ್ಸ್ ಬಂಡವಾಳ ಹೂಡಿರುವ ಬ್ರಹ್ಮಾಸ್ತ್ರ ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಸಿನಿಮಾಗೆ ಬಾಯ್ಕಾಟ್ ಬಿಸಿ ತಾಗಿತ್ತು. ನಟ, ನಟಿಯ ಹೇಳಿಕೆ ತೀವ್ರ ವಿವಾದಕ್ಕೆ ಒಳಗಾಗಿತ್ತು. ಆದರೂ ಸಿನಿಮಾ ನಿರೀಕ್ಷೆಗೂ ಮೀರಿದ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದೆ.

ಇದನ್ನೂ ಓದಿ: 300 ಕೋಟಿ ಗಳಿಸಿದ ಬ್ರಹ್ಮಾಸ್ತ್ರ ಸಿನಿಮಾ.. ಸುಳ್ಳಿನ ಹರಡುವಿಕೆಗೂ ಮಿತಿ ಇದೆ ಎಂದ ನೆಟಿಜನ್​ಗಳು

ಈ ಸಿನಿಮಾದಲ್ಲಿ ಅಮಿತಾಭ್​ ಬಚ್ಚನ್, ಮೌನಿ ರಾಯ್ ಮತ್ತು ನಾಗಾರ್ಜುನ ಅಕ್ಕಿನೇನಿ ಕೂಡ ನಟಿಸಿದ್ದಾರೆ. ಸದ್ಯ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ರಣಬೀರ್ ಮತ್ತು ಆಲಿಯಾ ಸೇರಿದಂತೆ ಚಿತ್ರತಂಡ ಸಿನಿಮಾದ ಪ್ರಚಾರದಲ್ಲಿ ತೊಡಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.