ETV Bharat / entertainment

ವಿವಾಹ ಸಂಭ್ರಮದಲ್ಲಿ ನಟಿ ಅದಿತಿ ಪ್ರಭುದೇವ.. ಮೆಹೆಂದಿ ಶಾಸ್ತ್ರದ ಫೋಟೋಗಳು ಇಲ್ಲಿವೆ - Aditi Prabhudeva haldi photo

ನಟಿ ಅದಿತಿ ಪ್ರಭುದೇವ ತಮ್ಮ ಮೆಹೆಂದಿ ಶಾಸ್ತ್ರದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Aditi Prabhudeva Mehendi Shastra Photos
ಅದಿತಿ ಪ್ರಭುದೇವ ಮೆಹೆಂದಿ ಶಾಸ್ತ್ರದ ಫೋಟೋಗಳು
author img

By

Published : Nov 27, 2022, 8:28 PM IST

ಕನ್ನಡ ಚಿತ್ರರಂಗದಲ್ಲಿ ಕಿರುತೆರೆಯಿಂದ ಸಿನಿ‌ ಜರ್ನಿ ಆರಂಭಿಸಿದ ಚಂದವನದದ ಗೊಂಬೆ ಅದಿತಿ ಪ್ರಭುದೇವ ತಮ್ಮ ಮದುವೆ ಸಂಭ್ರಮದಲ್ಲಿದ್ದಾರೆ. ಅಭಿನಯ, ಫೊಟೋಶೂಟ್ ಜೊತೆಗೆ ನಡೆ-ನುಡಿಯಿಂದ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ನಟಿ ಅದಿತಿ ಪ್ರಭುದೇವ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಅರಮನೆ ಮೈದಾನದಲ್ಲಿ ಈಗಾಗಲೇ ಅರಶಿಣ ಶಾಸ್ತ್ರ ನಡೆದಿದೆ. ಇಂದು ಮಹೆಂದಿ ಮತ್ತು ವರ ಪೂಜೆ ನಡೆದಿದೆ. ನಾಳೆ ಮದುವೆ ಸಂಭ್ರಮ ಜರುಗಲಿದ್ದು, ಶಾಸ್ತ್ರಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಯಶಸ್ (ಯಶಸ್ವಿ) ಎಂಬ ಉದ್ಯಮಿಯ ಕೈಹಿಡಿಯಲಿದ್ದು, ಮದುವೆ ಶಾಸ್ತ್ರಗಳು ಭರ್ಜರಿಯಾಗಿ ನಡೆಯುತ್ತಿದೆ. ತಂದೆ - ತಾಯಿ ನೋಡಿದ ಹುಡುಗನ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಈಟಿವಿ ಭಾರತಕ್ಕೆ ಈ ಮೊದಲು ಸ್ವತಃ ನಟಿಯೇ ತಿಳಿಸಿದ್ದರು.

Aditi Prabhudeva Mehendi Shastra Photos
ಅದಿತಿ ಪ್ರಭುದೇವ ಮೆಹೆಂದಿ ಶಾಸ್ತ್ರದ ಫೋಟೋಗಳು

ಇದನ್ನೂ ಓದಿ: ಹಸೆಮಣೆ ಏರಲು ಸಜ್ಜಾದ ಅದಿತಿ ಪ್ರಭುದೇವ.. ಅರಿಶಿಣ ಶಾಸ್ತ್ರ ಫೋಟೋಗಳು ಇಲ್ಲಿವೆ

ಕಳೆದ ಡಿಸೆಂಬರ್​ನಲ್ಲಿ ಅದಿತಿ ಪ್ರಭುದೇವ ಎಂಗೇಜ್​ಮೆಂಟ್ ಮಾಡಿಕೊಂಡಿರುವ ಹುಡುಗನ ಜೊತೆ ಫೋಟೋ ಹಾಕಿಕೊಂಡು, 'ಒಂದು ಕನಸಿನಂತೆ ಈ ಕನಸು ನನಸಾಯಿತು' ಎಂದು ಬರೆದುಕೊಂಡಿದ್ದರು. ಆ ಫೋಟೋದಲ್ಲಿ ಅದಿತಿ ಕೈಯಲ್ಲಿರುವ ಉಂಗುರ ಹೈಲೈಟ್​ ಆಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.