ETV Bharat / entertainment

ಮಾರ್ಕ್ ಆ್ಯಂಟೋನಿ ಹಿಂದಿ ಸೆನ್ಸಾರ್‌ಗಾಗಿ 6.5 ಲಕ್ಷ ರೂ ಲಂಚ ಪಾವತಿಸಿದೆ: ಸಿಬಿಎಫ್‌ಸಿ ವಿರುದ್ಧ ನಟ ವಿಶಾಲ್ ಆರೋಪ

ಮಾರ್ಕ್ ಆ್ಯಂಟೋನಿ ಹಿಂದಿ ಸೆನ್ಸಾರ್‌ಶಿಪ್‌ಗಾಗಿ ಸಿಬಿಎಫ್‌ಸಿಗೆ 6.5 ಲಕ್ಷ ಲಂಚ ಪಾವತಿಸಿದೆ ಎಂದು ವಿಶಾಲ್ ಆರೋಪ ಮಾಡಿದ್ದಾರೆ.

Actor Vishal
ಸಿಬಿಎಫ್‌ಸಿ ವಿರುದ್ಧ ನಟ ವಿಶಾಲ್ ಆರೋಪ
author img

By ETV Bharat Karnataka Team

Published : Sep 29, 2023, 1:08 PM IST

ಹೈದರಾಬಾದ್: ವಿಶಾಲ್ ಮತ್ತು ಎಸ್‌ಜೆ ಸೂರ್ಯ ಅಭಿನಯದ ಇತ್ತೀಚಿನ ತಮಿಳು ಚಿತ್ರ ಮಾರ್ಕ್ ಆ್ಯಂಟೋನಿಗೆ ಪ್ರೇಕ್ಷಕರ ಮನಗೆಲ್ಲುತ್ತಿದೆ. ಜೊತೆಗೆ ಬಾಕ್ಸ್ ಆಫೀಸ್ ಗೆಲುವನ್ನು ಮುಂದುವರೆಸಿದೆ. ಚಿತ್ರದ ನಿರ್ಮಾಪಕರು ಈಗ ಹಿಂದಿ-ಡಬ್ ಆವೃತ್ತಿಯನ್ನು ಬಿಡುಗಡೆ ಮಾಡಲು ಉದ್ದೇಶಿಸಿದ್ದಾರೆ. ''ಚಿತ್ರ ಉತ್ತಮ ಪ್ರದರ್ಶನ ನೀಡುತ್ತಿದ್ದರೂ, ಮಾರ್ಕ್ ಆ್ಯಂಟೋನಿ ಹಿಂದಿ ಸೆನ್ಸಾರ್‌ಶಿಪ್‌ಗಾಗಿ ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಅಧಿಕಾರಿಗಳಿಗೆ 6.5 ಲಕ್ಷ ರೂ. ಲಂಚ ಕೇಳಿದ್ದರು ಎಂದು ನಟ ವಿಶಾಲ್ ಬಹಿರಂಗವಾಗಿಯೇ ಆರೋಪ ಮಾಡಿದ್ದಾರೆ.

ನಟ ವಿಶಾಲ್ ಆರೋಪ ವಿಡಿಯೋದಲ್ಲೇನಿದೆ?: ಈ ಚಿತ್ರವು ಅಧಿಕ್ ರವಿಚಂದ್ರನ್ ನಿರ್ದೇಶನದ ವೈಜ್ಞಾನಿಕ ಕಾಲ್ಪನಿಕ ಟೈಮ್ ಟ್ರಾವೆಲ್ ಕುರಿತ ಕಥಾ ಹಂದರವನ್ನು ಹೊಂದಿದೆ. ಸೆಪ್ಟೆಂಬರ್ 15 ರಂದು ಬಿಡುಗಡೆಯಾದ ನಂತರ ಈ ಚಿತ್ರ ಮಿಶ್ರ ವಿಮರ್ಶೆಗಳನ್ನು ಪಡೆಯಿತು. ಈಗ ಬಾಕ್ಸ್ ಆಫೀಸ್‌ನಲ್ಲಿ 50 ಕೋಟಿ ರೂ. ಗಳಿಸಿದೆ ಎಂದು ನಟ ವಿಶಾಲ್, ಸಾಮಾಜಿಕ ಜಾಲತಾಣವಾದ ಎಕ್ಸ್​ ಪ್ರೊಫೈಲ್‌ನಲ್ಲಿ ಸಮಸ್ಯೆಯನ್ನು ವಿವರಿಸುವ ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಸುದೀರ್ಘವಾದ ವಿವರಣೆಯನ್ನು ನೀಡಿದ್ದಾರೆ.

"ಭ್ರಷ್ಟಾಚಾರವನ್ನು ಬೆಳ್ಳಿತೆರೆಯಲ್ಲಿ ತೋರಿಸುವುದು ಒಳ್ಳೆಯದು. ಆದರೆ ನಿಜ ಜೀವನದಲ್ಲಿ ಅಲ್ಲ. ಇದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ. ವಿಶೇಷವಾಗಿ ಸರ್ಕಾರಿ ಕಚೇರಿಗಳಲ್ಲಿ ಮತ್ತು ಸಿಬಿಎಫ್​ಸಿಯ ಮುಂಬೈ ಕಚೇರಿಯಲ್ಲಿ ಇನ್ನೂ ಕೆಟ್ಟದಾಗಿ ನಡೆಯುತ್ತಿದೆ. ನನ್ನ ಚಲನಚಿತ್ರ ಮಾರ್ಕ್​ ಆ್ಯಂಟೋನಿ ಹಿಂದಿ ಆವೃತ್ತಿಗೆ 6.5 ಲಕ್ಷಗಳನ್ನು ಪಾವತಿಸಬೇಕಾಗಿಯಿತು. ಎರಡು ವಹಿವಾಟುಗಳಲ್ಲಿ, ಸ್ಕ್ರೀನಿಂಗ್‌ಗೆ 3 ಲಕ್ಷ ಮತ್ತು ಪ್ರಮಾಣಪತ್ರಕ್ಕಾಗಿ 3.5 ಲಕ್ಷ ಲಂಚ ಕೇಳಿದ್ದಾರೆ" ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

"ನನ್ನ ವೃತ್ತಿಜೀವನದಲ್ಲಿ ಈ ಪರಿಸ್ಥಿತಿಯನ್ನು ಎಂದಿಗೂ ಅನುಭವಿಸಿಲ್ಲ ಎಂದು ಹೇಳಿದ ನಟ, ಚಲನಚಿತ್ರವು ಬಿಡುಗಡೆ ಮಾಡಬೇಕಾಗಿದ್ದ ಕಾರಣಕ್ಕಾಗಿ ಸಂಬಂಧಪಟ್ಟ ಮಧ್ಯವರ್ತಿಗೆ ಪಾವತಿಸುವುದನ್ನು ಹೊರತುಪಡಿಸಿ ನನಗೆ ಬೇರೆ ಆಯ್ಕೆ ಇರಲಿಲ್ಲ. ನಾನು ಈ ವಿಚಾರವನ್ನು ಮಹಾರಾಷ್ಟ್ರದ ಗೌರವಾನ್ವಿತರ ಗಮನಕ್ಕೆ ತರುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ. ಇದು ನನಗಲ್ಲ, ಆದರೆ, ಭವಿಷ್ಯದ ನಿರ್ಮಾಪಕರಿಗಾಗಿ. ನನ್ನ ದುಡಿಮೆಯ ಹಣ ಭ್ರಷ್ಟಾಚಾರಕ್ಕೆ ಹೋಯಿತು. ಸತ್ಯವು ಎಂದಿನಂತೆ ಮೇಲುಗೈ ಸಾಧಿಸುತ್ತದೆ ಎಂದು ಭಾವಿಸುತ್ತೇವೆ'' ಎಂದು ಅವರು ತಮ್ಮ ಎಕ್ಸ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇದನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಮತ್ತು ಭಾರತದ ಪ್ರಧಾನಿಯವರ ಗಮನಕ್ಕೆ ತರಲು ಬಯಸಿರುವುದಾಗಿ ನಟ ವಿಡಿಯೋದಲ್ಲಿ ಹೇಳಿದ್ದಾರೆ. ಮುಂಬೈನ ಸಿಬಿಎಫ್‌ಸಿ ಕಚೇರಿಯಲ್ಲಿ ಭಾರತೀಯ ಚಲನಚಿತ್ರ ವ್ಯವಹಾರದಲ್ಲಿನ ಭ್ರಷ್ಟಾಚಾರದ ಬಗ್ಗೆ ಅವರು ಮುಕ್ತವಾಗಿ ಮಾತನಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: 'ಪಠಾಣ್'​ ಹಿಂದಿಕ್ಕಿ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಚಿತ್ರವಾಗಿ ಹೊರಹೊಮ್ಮಿದ 'ಗದರ್​ 2'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.