ETV Bharat / entertainment

ವಿನಯ್ ರಾಜ್​ಕುಮಾರ್​​ ಹುಟ್ಟುಹಬ್ಬಕ್ಕೆ 'ಪೆಪೆ' ಸಿನಿಮಾ ಟೀಸರ್​ ಗಿಫ್ಟ್​

ನಟ ವಿನಯ್ ರಾಜ್​ಕುಮಾರ್​​ ಹುಟ್ಟುಹಬ್ಬದ ಸಲುವಾಗಿ 'ಪೆಪೆ' ಚಿತ್ರತಂಡ ಟೀಸರ್​ ರಿಲೀಸ್​ ಮಾಡಿದೆ.

vinay
'ಪೆಪೆ'
author img

By

Published : May 8, 2023, 5:44 PM IST

ದೊಡ್ಮನೆ ಕುಡಿ ವಿನಯ್​ ರಾಜ್​ಕುಮಾರ್​ ಸಿಕ್ಕ ಪಾತ್ರಗಳಲ್ಲಿ ಅಭಿನಯಿಸಿ ಕನ್ನಡಿಗರ ಮನ ಗೆದ್ದಿದ್ದಾರೆ. ರಾಘವೇಂದ್ರ ರಾಜ್​ಕುಮಾರ್​ ಸುಪುತ್ರ ನಿನ್ನೆಯಷ್ಟೇ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅಭಿಮಾನಿಗಳ ಜೊತೆ ಅದ್ಧೂರಿಯಾಗಿ ಬರ್ತ್​ಡೇ ಆಚರಿಸಿಕೊಂಡಿರುವ ರಾಯಲ್​ ಸ್ಟಾರ್​ಗೆ 'ಪೆಪೆ' ಸಿನಿಮಾ ಚಿತ್ರತಂಡದಿಂದ ಸ್ಪೆಷಲ್​ ಗಿಫ್ಟ್​ ಸಿಕ್ಕಿದೆ.

ವಿನಯ್​ ಜನ್ಮದಿನದ ಸಲುವಾಗಿ ಪೆಪೆ ಟೀಸರ್​ ರಿಲೀಸ್​ ಆಗಿದ್ದು ನಟ ಮಾಸ್​ ಅವತಾರದಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ. ಹಳ್ಳಿ ಬ್ಯಾಕ್ ಡ್ರಾಪ್ ನಲ್ಲಿ ಮೂಡಿಬಂದಿರುವ ಟೀಸರ್ ಝಲಕ್​ನಲ್ಲಿ ವಿನಯ್ ರಗಡ್ ಲುಕ್​ನಲ್ಲಿ ಮಿಂಚಿದ್ದಾರೆ. ಅಂದಹಾಗೇ ಪೆಪೆ ಗ್ಯಾಂಗ್ ಸ್ಟಾರ್ ಸಿನಿಮಾ ಆಗಿದ್ದು, ವಿನಯ್ ರಾಜ್​ಕುಮಾರ್ ಹಿಂದಿನ ಎಲ್ಲಾ ಸಿನಿಮಾಗಳಿಗಿಂತ ಇಲ್ಲಿ ವಿಭಿನ್ನ ಅವತಾರ ತಾಳಿದ್ದಾರೆ.

  • " class="align-text-top noRightClick twitterSection" data="">

ಬಹುತೇಕ ಚಿತ್ರೀಕರಣ ಕಂಪ್ಲೀಟ್​: ಬಹುತೇಕ ಚಿತ್ರೀಕರಣ ಕಂಪ್ಲೀಟ್ ಮಾಡಿರುವ ಚಿತ್ರತಂಡ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದೆ. ಗ್ಯಾಂಗ್ ಸ್ಟಾರ್ ಕಥೆ ಆಧಾರಿತ ಸಿನಿಮಾ ಕೂಡಾ ಆಗಿದೆ. ವಿನಯ್ ರಾಜ್ ಕುಮಾರ್ ತಮ್ಮ ಈ ಹಿಂದಿನ ಎಲ್ಲಾ ಸಿನಿಮಾಗಳಿಗಿಂತ ಡಿಫ್ರೆಂಟ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಒಂದೇ ಶೈಲಿಯ ಸಿನಿಮಾಗೆ ಒಗ್ಗಿಕೊಳ್ಳದೇ, ಪ್ರತಿ ಬಾರಿ ವಿಭಿನ್ನ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವ ವಿನಯ್ ರಾಜ್ ಕುಮಾರ್ ಈ ಚಿತ್ರದಲ್ಲಿ ಸಂಪೂರ್ಣವಾಗಿ ಬೇರೆಯದ್ದೇ ಅವತಾರ ತಾಳಿದ್ದಾರೆ. ದೊಡ್ಮನೆ ಅಭಿಮಾನಿ ಬಳಗ ವಿನಯ್ ಲುಕ್ ಕಂಡು ಥ್ರಿಲ್ ಆಗಿದ್ದು, ಸಿನಿಮಾ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ: ಮಗಳ ಸಿನಿಮಾಗೆ ಮೊಯ್ದಿನ್​ ಭಾಯ್ ಆದ್ರು ರಜನಿ: 'ಲಾಲ್​ ಸಲಾಂ' ಫಸ್ಟ್​ ಲುಕ್​ ಔಟ್

ಕಾಜಲ್​ ಕುಂದರ್​ ನಾಯಕಿ: ಶ್ರೀಲೇಶ್‌ ಎಸ್‌ ನಾಯರ್‌ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರಕ್ಕೆ ಕಾಜಲ್​ ಕುಂದರ್​ ನಾಯಕಿಯಾಗಿದ್ದಾರೆ. ಚಿತ್ರದಲ್ಲಿ ಮಯೂರ್ ಪಟೇಲ್, ಯಶ್ ಶೆಟ್ಟಿ, ಬಾಲ ರಾಜ್​ವಾಡಿ, ಮೆದಿನಿ ಕೆಳಮನಿ, ಅರುಣಾ ಬಾಲರಾಜ್, ನವೀನ್ ಡಿ ಪಡೀಲ್ ಒಳಗೊಂಡ ತಾರಾಬಳಗವಿದೆ. ‘ಪೆಪೆ’ ಚಿತ್ರಕ್ಕೆ ಅಭಿಷೇಕ್ ಜಿ ಕಾಸರಗೋಡು ಕ್ಯಾಮೆರಾ ವರ್ಕ್, ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನವಿದೆ. ಡಾ ರವಿವರ್ಮಾ, ಚೇತನ್ ಡಿಸೋಜಾ, ಡಿಫ್ರೆಂಟ್ ಡ್ಯಾನಿ, ನರಸಿಂಹ ಚಿತ್ರದ ಸಾಹಸ ದೃಶ್ಯಗಳನ್ನು ನಿರ್ದೇಶನ ಮಾಡಿದ್ದಾರೆ.

ಮತದಾನದ ಜಾಗೃತಿ ಮೂಡಿಸಿದ ಟೀಸರ್​: ಬೆಂಗಳೂರು, ಮೈಸೂರು, ಕೊಡಗು, ಸಕಲೇಶಪುರದಲ್ಲಿ ‘ಪೆಪೆ’ ಸಿನಿಮಾವನ್ನು ಸೆರೆ ಹಿಡಿಯಲಾಗಿದೆ. ಉದಯ್ ಸಿನಿ ವೆಂಚರ್, ದೀಪ ಫಿಲಂಸ್ ಬ್ಯಾನರ್ ನಡಿ ಉದಯ್ ಶಂಕರ್ ಮತ್ತು ಶ್ರೀರಾಮ್ ಬಿ ಎಮ್ ಕೋಲಾರ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇನ್ನು ರಾಜ್ಯದಲ್ಲಿ ಇದೇ ಮೇ 13 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಟೀಸರ್ ಕೊನೆಯಲ್ಲಿ 'ಸ್ವಾತಂತ್ರ್ಯಕ್ಕಾಗಿ ಸ್ವತಂತ್ರವಾಗಿ ಎಲ್ಲರು ಮತದಾನ ಮಾಡಿ' ಎಂದು ಹೇಳುವ ಮೂಲಕ ಪೆಪೆ ಗಮನ ಸೆಳೆದಿದೆ.

ಇದನ್ನೂ ಓದಿ: ಸಿನಿ ಲೋಕಕ್ಕೆ ಕಾಲಿಟ್ಟ ಯುವ ಕ್ರಿಕೆಟಿಗ ಗಿಲ್​​: ಇಂಡಿಯನ್​ ಸ್ಪೈಡರ್ ಮ್ಯಾನ್ ಪವಿತ್ರಾ ಪ್ರಭಾಕರ್​ಗೆ ಶುಭಮನ್ ಧ್ವನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.