ವಿದ್ಯುತ್ ಜಮ್ವಾಲ್ ಬಣ್ಣದ ಜಗತ್ತಿನ ಫಿಟ್ ನಟರಲ್ಲಿ ಒಬ್ಬರು. ಫಿಟ್ನೆಸ್ ಐಕಾನ್ ಎಂದೇ ಫೇಮಸ್. ಇವರ ಕಟ್ಟುಮಸ್ತಾದ, ಸದೃಢ ದೇಹ ನೆಟ್ಟಿಗರ ಹುಬ್ಬೇರಿಸುವಂತಿದೆ. ತೆರೆ ಮೇಲೆ ಮಾತ್ರವಲ್ಲದೇ ರಿಯಲ್ ಲೈಫ್ನಲ್ಲೂ ಫಿಟ್ನೆಸ್, ಆ್ಯಕ್ಷನ್ ವಿಚಾರವಾಗಿ ಸಖತ್ ಸದ್ದು ಮಾಡುತ್ತಿರುತ್ತಾರೆ. ಇದೀಗ ನಟ ತಮ್ಮ ವೈಯಕ್ತಿಕ ಜೀವನದ ಸಲುವಾಗಿ ಸುದ್ದಿಯಲ್ಲಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಖುದಾ ಹಫೀಜ್ ನಟನ ಮದುವೆ ವಿಚಾರ ಸಖತ್ ಸದ್ದು ಮಾಡುತ್ತಿದೆ. ಪ್ರೀತಿಗೆ ಮತ್ತೊಂದು ಅವಕಾಶ ಕೊಡಲಿದ್ದಾರೆಂಬ ವದಂತಿಗಳಿವೆ. ಈ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದ (ಮಾಜಿ ಪ್ರೇಯಸಿ) ಫ್ಯಾಷನ್ ಡಿಸೈನರ್ ನಂದಿತಾ ಮೆಹ್ತಾನಿ ಅವರೊಂದಿಗಿನ ರಿಲೇಶನ್ಶಿಪ್ ಅನ್ನು ಪುನರುಜ್ಜೀವನಗೊಳಿಸಬಹುದು ಎಂಬ ಗುಮಾನಿ ಇದೆ. ನಂದಿತಾ ಮೆಹ್ತಾನಿ ಮತ್ತು ವಿದ್ಯುತ್ ಜಮ್ವಾಲ್ 2021ರ ಸೆಪ್ಟೆಂಬರ್ 1 ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಸೆಪ್ಟೆಂಬರ್ 13ರಂದು ಶುಭ ಸುದ್ದಿಯನ್ನು ಘೋಷಿಸಿದ್ದರು. ಆದರೆ ಅದು ಕಾರಣಾಂತರಗಳಿಂದ ಮುರಿದು ಬಿತ್ತು ಎಂದು ಹೇಳಲಾಗಿದೆ.
ಇನ್‌ಸ್ಟಾಗ್ರಾಮ್‌ನಲ್ಲಿ 2021ರ ಸೆಪ್ಟೆಂಬರ್ 13ರಂದು ಎರಡು ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದರು. ಜೋಡಿ ಕೈ ಕೈ ಹಿಡಿದು ಗೋಡೆ ಏರುತ್ತಿರುವ ಫೋಟೋ ಶೇರ್ ಮಾಡಿದ್ದರು. ಮತ್ತೊಂದು ಫೋಟೋದಲ್ಲಿ ತಾಜ್ ಮಹಲ್ ಬಳಿ ಆತ್ಮೀಯವಾಗಿ ನಿಂತಿರುವುದು ಕಂಡು ಬಂದಿತ್ತು. "01/09/21" ಕ್ಯಾಪ್ಷನ್ ಕೊಟ್ಟಿದ್ದರು.
ಇದನ್ನೂ ಓದಿ: ದಸರಾ 'ಯುವ ಸಂಭ್ರಮ'ಕ್ಕೆ ಸಚಿವ ಹೆಚ್.ಸಿ ಮಹದೇವಪ್ಪ ಚಾಲನೆ: ಸಮಾರಂಭಕ್ಕೆ ಸಿಂಹಪ್ರಿಯಾ ಸಾಕ್ಷಿ
ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, "ನನ್ನನ್ನು ಸಮೀಪಿಸುತ್ತಿರುವ ಅಥವಾ ನನ್ನ ಜೀವನದಲ್ಲಿ ಸ್ಥಾನ ಪಡೆಯುತ್ತಿರುವ ಯಾವುದನ್ನೂ ನಾನು ವಿವಾದ ಮಾಡಿಕೊಳ್ಳುವುದಿಲ್ಲ. ನನ್ನ ಜೀವನದಲ್ಲಿ, ನನ್ನ ಜೀವನದ ಪ್ರತಿಯೊಂದು ಭಾಗದಲ್ಲೂ ನನ್ನೊಂದಿಗೆ ಏನಾಗುತ್ತಿದೆ ಎಂಬುದು ನಂಬಲಾಗದ ಸಂಗತಿ. ನಾನು ಅದನ್ನು ಒಪ್ಪಿಕೊಂಡಿದ್ದೇನೆ. ನಾನು ಈ ಬಗ್ಗೆ ಹೆಚ್ಚು ಸಂತಸಗೊಂಡಿದ್ದೇನೆ. ಇದು ನನಗೆ ಉತ್ತಮ ಎನಿಸುತ್ತಿದೆ, ಇದು ನನಗೆ ಹೊಸ ಅನುಭವವಾಗಿದ್ದು, ನಾನಿದನ್ನು ಇಷ್ಟಪಡುತ್ತೇನೆ" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ರಾಘ್ನೀತಿ ಹೊಸ ವಿಡಿಯೋ: ರಾಘವ್ ಪರಿಣಿತಿ ಲವ್ಸ್ಟೋರಿಯ ಇಂಟ್ರೆಸ್ಟಿಂಗ್ ಕಹಾನಿ
ಈ ಜೋಡಿ ಈಗಾಗಲೇ ಮದುವೆಯಾಗಿರಬಹುದು. ಆದರೆ, ಅದನ್ನು ಸೀಕ್ರೆಟ್ ಆಗಿಡಲು ನಿರ್ಧರಿಸಿದ್ದರೇನೋ ಎಂದು ಹಲವರು ತಿಳಿಸಿದ್ದಾರೆ. 2021ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ ಇದೇ ಸಾಲಿನಲ್ಲಿ ಬೇರ್ಪಟ್ಟರು ಎಂದು ವರದಿಗಳು ಸೂಚಿಸಿವೆ. ಆದಾಗ್ಯೂ ಇತ್ತೀಚಿನ ವದಂತಿಗಳ ಪ್ರಕಾರ, ವಿದ್ಯುತ್ ಜಮ್ವಾಲ್ ಮತ್ತು ನಂದಿತಾ ಮೆಹ್ತಾನಿ ಅವರು ಮತ್ತೆ ಒಂದಾದ್ದಾರೆ. ಪ್ರೀತಿಗೆ ಮತ್ತೊಂದು ಅವಕಾಶ ಕೊಡಲು ನಿರ್ಧರಿಸಿದ್ದಾರೆ. ಶೀಘ್ರದಲ್ಲೇ ಲಂಡನ್‌ನಲ್ಲಿ ಮದುವೆ ಆಗಲಿದ್ದಾರೆ.