ETV Bharat / entertainment

ಐಷಾರಾಮಿ ಮನೆ ಖರೀದಿಸಿದ ರಿಯಲ್​ ಸ್ಟಾರ್​:'ಅದೃಷ್ಟದ ಹುಡುಕಾಟ'ದಲ್ಲಿ ಉಪ್ಪಿ! - upendra new house

ರಿಯಲ್ ಸ್ಟಾರ್ ಉಪೇಂದ್ರ ಬಹುಕೋಟಿ ಮೌಲ್ಯದ ಹೊಸ ಮನೆ ಖರೀದಿ ಮಾಡಿದ್ದಾರೆ.

upendra purchase new house
ಉಪೇಂದ್ರ ಗೃಹಪ್ರವೇಶ ಕಾರ್ಯಕ್ರಮ
author img

By

Published : Apr 19, 2023, 4:00 PM IST

ಕಬ್ಜ ಮೂಲಕ ಸದ್ದು ಮಾಡುತ್ತಿರೋ ರಿಯಲ್ ಸ್ಟಾರ್ ಉಪೇಂದ್ರ ಅವರು ಹೊಸ ಮನೆ ಖರೀದಿಸಿದ್ದಾರೆ. ನೂತನ ಮನೆಯ ಗೃಹ ಪ್ರವೇಶ ಕಾರ್ಯಕ್ರಮ ಕೂಡ ಶಾಸ್ತ್ರ ಸಂಪ್ರದಾಯದ ಪ್ರಕಾರ ನೆರವೇರಿದೆ. ಉಪೇಂದ್ರ ಗೃಹ ಪ್ರವೇಶ ಕಾರ್ಯಕ್ರಮದ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ.

ಪ್ಯಾನ್ ಇಂಡಿಯಾ ಸಿನಿಮಾ 'ಕಬ್ಜ' ಸಕ್ಸಸ್ ನಂತರ ರಿಯಲ್ ಸ್ಟಾರ್ ಉಪೇಂದ್ರ ರಾಜ್ಯ ಚುನಾವಣೆ ಕಡೆ ಗಮನ ಕೊಟ್ಟಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳು ಕಂಟೆಸ್ಟ್ ಮಾಡಲಿದ್ದಾರೆ. ಈ ಬಾರಿ ಜನರ ವಿಶ್ವಾಸ ಗಳಿಸೋ ಪ್ರಯತ್ನದಲ್ಲಿ ಪಕ್ಷವಿದೆ. ಎಲೆಕ್ಷನ್ ಮುಗಿಯುತ್ತಿದ್ದಂತೆ ತಾವು ನಿರ್ದೇಶನ ಮಾಡುತ್ತಿರುವ 'ಯು ಐ' ಚಿತ್ರದ ಶೂಟಿಂಗ್​​ ಮುಂದುವರಿಸಲಿದ್ದಾರೆ. ಹೀಗೆ ಎಲೆಕ್ಷನ್ ಜೊತೆ ಡೈರೆಕ್ಷನ್ ಅಂತಾ ಬ್ಯುಸಿ ಇರುವ ಉಪ್ಪಿ ಸದ್ಯ ಮನೆ ಬದಲಾಯಿಸಿದ್ದಾರೆ. ಹೌದು, ಸುಮಾರು 20 ವರ್ಷಗಳಿಂದ ವಾಸಿಸುತ್ತಿದ್ದ ಹಳೆ ಮನೆಯಿಂದ ಹೊಸ ಮನೆಗೆ ಶಿಫ್ಟ್​​ ಆಗಿದ್ದಾರೆ.

ಉಪ್ಪಿ ಕುಟುಂಬ ಕತ್ರಿಗುಪ್ಪೆಯಲ್ಲಿರುವ ಮನೆಯಲ್ಲಿ ವಾಸವಿತ್ತು. ಜೊತೆಗೆ ಅಲ್ಲೇ ದೊಡ್ಡ ಆಲದ ಮರದ ಬಳಿ ರುಪ್ಪೀಸ್ ರೆಸಾರ್ಟ್ ಅಂತ ನಿರ್ಮಾಣ ಮಾಡಿ ಆಗಾಗ್ಗೆ ಅಲ್ಲೂ ಹೋಗಿ ಬರುತ್ತಿದ್ದರು. ರುಪ್ಪೀಸ್ ರೆಸಾರ್ಟ್ ವೆಕೇಶನ್​ಗೆ ಎಂದು ಇದ್ದರೂ, ಉಪ್ಪಿ ಅವರ ಖಾಯಂ ಜಾಗ ಕತ್ರಿಗುಪ್ಪೆಯ ಮನೆಯೇ ಆಗಿತ್ತು. ಆದ್ರೀಗ ಆ ಮನೆ ಬಿಟ್ಟು ಹೊಸ ಮನೆಗೆ ಹೆಜ್ಜೆಯಿಟ್ಟಿದ್ದಾರೆ.

ಬೆಂಗಳೂರಿನ ದುಬಾರಿ ಏರಿಯಾ ಎನಿಸಿಕೊಂಡಿರುವ ಸದಾಶಿವನಗರದಲ್ಲಿ ಉಪೇಂದ್ರ ಅವರು ಹೊಸ ಮನೆ ಖರೀದಿ ಮಾಡಿದ್ದಾರೆ. ಈಗಾಗಲೇ ಕಟ್ಟಿರೋ ಮನೆಯನ್ನು ಪರ್ಚೆಸ್ ಮಾಡಿರೋ ರಿಯಲ್ ಸ್ಟಾರ್ ಉಪ್ಪಿ, ಒಳ್ಳೆ ದಿನ ಅನ್ನೋ ಕಾರಣಕ್ಕೆ ಮೂರು ದಿನಗಳ ಹಿಂದೆ ಪೂಜೆ ಮಾಡಿ ಮನೆಗೆ ಪ್ರವೇಶ ಮಾಡಿದ್ದಾರೆ.

ಗೃಹ ಪ್ರವೇಶ ಸಮಾರಂಭಕ್ಕೆ ಉಪೇಂದ್ರ ಕುಟುಂಬದ ಆಪ್ತರು ಸಾಕ್ಷಿಯಾಗಿದ್ದರು. ಉಪ್ಪಿ ಫ್ಯಾಮಿಲಿ ಹೊಸ ಮನೆಗೆ ಪ್ರವೇಶಿಸಿರೋ ಫೋಟೋಗಳು ಸದ್ಯ ವೈರಲ್ ಆಗಿದೆ. ಉಪೇಂದ್ರ ಆಪ್ತರು ಹೇಳುವ ಪ್ರಕಾರ ಇದು ಸುಮಾರು 50 ಕೋಟಿ ರೂಪಾಯಿಯ ಮನೆ. ಸದಾಶಿವನಗರದ ಮುಖ್ಯ ರಸ್ತೆಯ ಪಕ್ಕದಲ್ಲೇ ಉಪೇಂದ್ರ ಅವರ ಈ ಬಹುಕೋಟಿ ಮೌಲ್ಯದ ಮನೆ ಇದೆ.‌

ಇದನ್ನೂ ಓದಿ: 'ವೀಕೆಂಡ್​​ ವಿತ್​ ರಮೇಶ್'​​ನಲ್ಲಿ ಮಂಡ್ಯ ರಮೇಶ್, ಅವಿನಾಶ್​: ಶೋ ವೀಕ್ಷಿಸಲು ಅಭಿಮಾನಿಗಳ ಕಾತರ

ಉಪ್ಪಿಗೆ ಕತ್ರಿಗುಪ್ಪೆ ಮನೆನೇ ಬಹಳ ಚೆನ್ನಾಗಿತ್ತು, 20 ವರ್ಷದಿಂದ ಅಲ್ಲೇ ಇದ್ದರು, ಈಗ್ಯಾಕೆ ಹೊಸ ಮನೆ? ಅನ್ನೋ ಪ್ರಶ್ನೆಗಳು ಸಹಜವಾಗಿ ಎದ್ದಿದೆ. ಅದಕ್ಕೆ 'ಅದೃಷ್ಟದ ಹುಡುಕಾಟ' ಅಂತಾರೆ ಉಪ್ಪಿ ಆಪ್ತರು. ಹೌದು, ಉಪ್ಪಿ ಜಾತಕದಲ್ಲಿ ಮನೆ ಬದಲಾವಣೆ ಮಾಡಿದ್ರೆ ಪ್ರಜಾಕೀಯದಲ್ಲೂ ಯಶಸ್ಸು ಸಿಗುತ್ತೆ ಎಂಬ ಸಲಹೆ ಬಂದ ಕಾರಣ ಇಂಥದೊಂದು ಪ್ರಯತ್ನಕ್ಕೆ ಮುಂದಾಗಿದ್ದಾರೆ ಎನ್ನುವ ಮಾಹಿತಿ ಇದೆ.

ಇದನ್ನೂ ಓದಿ: ಕನ್ನಡ ನಟನ ವೀಸಾ ರದ್ದು: ಬೆಂಬಲಕ್ಕೆ ಬಂದ ಕಿಶೋರ್​ಗೆ ಚೇತನ್​​ ಧನ್ಯವಾದ

ಈ ಮೊದಲು ಪ್ರಜಾಕೀಯ ಪಕ್ಷ ಶುರು ಮಾಡಿದಾಗ ಕತ್ರಿಗುಪ್ಪೆ ಮನೆ ಬಿಟ್ಟು ಕೆಲ ದಿನ ರುಪ್ಪೀಸ್ ರೆಸಾರ್ಟ್​​ನಲ್ಲಿ ಇದ್ದಿದ್ದನ್ನು ನಾವು ನೆನಪಿಸಿಕೊಳ್ಳಬೇಕು. ಆದರೆ ಬಹಳ ದಿನ ರೆಸಾರ್ಟ್​​ನಲ್ಲಿ ಉಳಿಯಲಿಲ್ಲ. ಈಗ ಮತ್ತೊಮ್ಮೆ ಅದೇ ನಂಬಿಕೆಯಲ್ಲಿ ವಾಸ್ತು ಪ್ರಕಾರ ರಿಯಲ್ ಸ್ಟಾರ್ ಸದಾಶಿವನಗರದ ಕಡೆ ಹೊರಟಿದ್ದಾರೆ ಎಂದು ಹೇಳಲಾಗಿದೆ. ಒಟ್ಟಾರೆ ಉಪೇಂದ್ರ ಅವರು ಹೊಸ ಮನೆಗೆ ಹೋಗಿದ್ದು, ಕತ್ರಿಗುಪ್ಪೆ ಮನೆಯನ್ನೂ ಸಂಪೂರ್ಣವಾಗಿ ಬಿಟ್ಟಿಲ್ಲ. ಉಪ್ಪಿ ಮನೆಯಲ್ಲಿ ಸದಸ್ಯರು ಹೆಚ್ಚು ಇರುವುದರಿಂದ ಎರಡೂ ಮನೆಯನ್ನು ಬ್ಯಾಲೆನ್ಸ್ ಮಾಡಲಿದ್ದಾರೆ. ಇನ್ಮುಂದೆ‌ ಉಪೇಂದ್ರ ಅವರನ್ನು ನೋಡಬೇಕೆಂದರೆ ಸದಾಶಿವಾನಗರಕ್ಕೆ ಹೋಗಬೇಕು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.