ಕನ್ನಡ ಚಿತ್ರರಂಗದಿಂದ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಕಿರುತೆರೆ ಮತ್ತು ಹಿರಿತೆರೆ ಮೂಲಕ ಇನ್ನೂ ಸಾಕಷ್ಟು ವರ್ಷಗಳ ಕಾಲ ಕನ್ನಡ ಚಿತ್ರರಂಗಕ್ಕೆ ತಮ್ಮ ಕೊಡುಗೆ ನೀಡಬೇಕಿದ್ದ ಯುವ ನಟ ಇದ್ದಕ್ಕಿದ್ದಂತೆ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರ ಈ ತೀರ್ಮಾನ ಚಿತ್ರರಂಗಕ್ಕೆ ಶಾಕ್ ನೀಡಿದೆ. ಸಾಕಷ್ಟು ಜನಪ್ರಿಯವಾಗಿದ್ದ 'ಅಗ್ನಿಸಾಕ್ಷಿ' ಧಾರಾವಾಹಿಯ ನಟ ಸಂಪತ್ ಜಯರಾಮ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 35ನೇ ವಯಸ್ಸಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಬಾರದಲೋಕಕ್ಕೆ ಪಯಣ ಬೆಳೆಸಿದ್ದಾರೆ. ಜಯಂತ್ ಸಾವಿನ ಸುದ್ದಿ ತಿಳಿದ ನಟ, ನಟಿಯರು ಕಲಾವಿದರು ಕಂಬನಿ ಮಿಡಿದಿದ್ದಾರೆ.
ಸಂಪತ್ ಜಯರಾಮ್ ಅವರು ಅಗ್ನಿಸಾಕ್ಷಿ ಅಲ್ಲದೇ ಅನೇಕ ಟಿವಿ ಧಾರಾವಾಹಿಗಳು ಮತ್ತು ಕೆಲ ಚಲನಚಿತ್ರಗಳಲ್ಲೂ ಸಹ ಕೆಲಸ ಮಾಡಿದ್ದಾರೆ. ವರದಿಗಳ ಪ್ರಕಾರ, ಏಪ್ರಿಲ್ 22ರಂದು ನೆಲಮಂಗಲದ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗುವ ಮೂಲಕ ಅವರು ತಮ್ಮ ಜೀವನ ಪಯಣವನ್ನು ಕೊನೆಗೊಳಿಸಿದರು. ನಟನ ಆತ್ಮಹತ್ಯೆ ಸುದ್ದಿಯಿಂದ ಇಂಡಸ್ಟ್ರಿಯಲ್ಲಿ ಶೋಕ ಮಡುಗಟ್ಟಿದೆ.
ಆತ್ಮಹತ್ಯೆಗೆ ಕಾರಣ: ಕೆಲಸ ಸಿಗದ ಕಾರಣ ಸಂಪತ್ ಜಯರಾಮ್ ಅವರು ತಮ್ಮ ಜೀವನ ಕೊನೆಗೊಳಿಸಿದ್ದಾರೆ ಎನ್ನಲಾಗಿದೆ. ಆದ್ರೆ ಅವರ ಸಾವಿನ ಬಗ್ಗೆ ಅವರ ಕುಟುಂಬ ಅಥವಾ ಸ್ನೇಹಿತರಿಂದ ಇನ್ನೂ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ನಟನ ಮೃತದೇಹವನ್ನು ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ನಟನ ಅಂತಿಮ ಸಂಸ್ಕಾರವನ್ನು ಅವರ ಹುಟ್ಟೂರಾದ ಎನ್ಆರ್ ಪುರದಲ್ಲಿ ನೆರವೇರಿಸಲಾಗುವುದು ಎಂಬ ಮಾಹಿತಿ ಇದೆ.
ಸಂಪತ್ ಜಯರಾಮ್ ಅವರ ಸಹನಟ ರಾಜೇಶ್ ಧ್ರುವ ಅವರು ತಮ್ಮ ಸ್ನೇಹಿತನ ಆತ್ಮಹತ್ಯೆ ಬಗ್ಗೆ ಪೋಸ್ಟ್ ಮಾಡುವ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ದುಃಖ ವ್ಯಕ್ತಪಡಿಸಿದ್ದಾರೆ. ''ನಿನ್ನ ಅಗಲಿಕೆ ತಡ್ಕೊಳೋ ಶಕ್ತಿ ನಮಗಿಲ್ಲ ಮಗ, ಅದೆಷ್ಟೋ ಸಿನಿಮಾ ಮಾಡೋದಿದೆ, ಅದೆಷ್ಟೋ ಜಗಳ ಬಾಕಿ ಇದೆ, ಕಂಡ ಕನಸು ನನಸು ಮಾಡ್ಕೋಳೋಕೆ ಇನ್ನೂ ಸಾಕಷ್ಟು ಸಮಯ ಇದೆ, ಇನ್ನೂ ನಿನ್ನ ದೊಡ್ಡ ದೊಡ್ಡ ವೇದಿಕೆಯಲ್ಲಿ ನೋಡೋದು ಇದೆ, ವಾಪಸ್ ಬಾ ಪ್ಲೀಸ್'' ಎಂದು ಬರೆದುಕೊಂಡಿದ್ದಾರೆ. ಇನ್ನು ಅಗ್ನಿಸಾಕ್ಷಿ ಧಾರಾವಾಹಿಯ ಪ್ರಮುಖ ತಾರೆ ವೈಷ್ಣವಿ (ಸನ್ನಿಧಿ) ನಟ ಸಂಪತ್ ಜಯರಾಮ್ ಜೊತೆಗಿನ ಚಿತ್ರ ಹಂಚಿಕೊಂಡು, RIP ಸಂಪತ್ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಮೂರು ಬಾರಿ 'ಕಾಂತಾರ' ನೋಡಿದೆ, ಸಿನಿಮಾ ಕ್ಲೈಮ್ಯಾಕ್ಸ್ ಮೈ ಜುಮ್ಮೆನಿಸಿತು: ಕನ್ನಡ ಚಿತ್ರಗಳನ್ನು ಕೊಂಡಾಡಿದ ನಟ ವಿಕ್ರಮ್
ರಾಜೇಶ್ ಮಾಸ್ಟರ್ ಆತ್ಮಹತ್ಯೆ: ಸೌತ್ ಸಿನಿಮಾ ರಂಗದ ಖ್ಯಾತ ನೃತ್ಯ ನಿರ್ದೇಶಕ ರಾಜೇಶ್ ಮಾಸ್ಟರ್ ಶನಿವಾರದಂದು ಮೃತಪಟ್ಟಿದ್ದಾರೆ. ಆಘಾತಕಾರಿ ವಿಷಯ ತಿಳಿದ ಅಭಿಮಾನಿಗಳು ಮತ್ತು ಕೂಡಾ ಸೆಲೆಬ್ರಿಟಿಗಳು ಆನ್ಲೈನ್ನಲ್ಲಿ ತಮ್ಮ ದುಃಖ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಅಖಿಲ್ ಅಕ್ಕಿನೇನಿಯಿಂದ ರೌಟೇಲಾಗೆ ಕಿರುಕುಳ ಆರೋಪ: ಉಮೈರ್ ಸಂಧು ವಿರುದ್ಧ ಸಿಡಿದೆದ್ದ ನಟಿ