ETV Bharat / entertainment

'ಶೆಟ್ರ ನಾ ಕಂಡಂತೆ ಕಥೆಯಿದು'.. ಕನಸಿನ ಪ್ರಪಂಚದಲ್ಲಿ ಈಜುತ್ತಾ, ಹಾರೋ ರೆಕ್ಕೆ ಕಟ್ಟೋಕೆ ಸಿಂಪಲ್​ ಸ್ಟಾರ್​ ಸಿದ್ಧ!

author img

By

Published : Jul 3, 2023, 4:52 PM IST

'ಉಳಿದವರು ಕಂಡಂತೆ' ಬಳಿಕ ಮತ್ತೆ ನಿರ್ದೇಶಕರಾಗಿ ಮಿಂಚಲು ಸಿಂಪಲ್​ ಸ್ಟಾರ್​ ರಕ್ಷಿತ್​ ಶೆಟ್ಟಿ ಸಜ್ಜಾಗಿದ್ದಾರೆ.

rakshit
ರಕ್ಷಿತ್​ ಶೆಟ್ಟಿ

ಬಣ್ಣದ ಲೋಕಕ್ಕೆ ಸಿಂಪಲ್ಲಾಗಿ ಎಂಟ್ರಿ ಕೊಟ್ಟು ಸಿಂಪಲ್​ ಸ್ಟಾರ್​ ಆದ ನಟ ರಕ್ಷಿತ್​ ಶೆಟ್ಟಿ. ಪ್ರತಿ ಬಾರಿಯೂ ವಿಭಿನ್ನ ಕಥೆಗಳನ್ನು ಆಯ್ದುಕೊಂಡು ಸಿನಿಮಾ ಮಾಡಿ ನಟ, ನಿರ್ದೇಶಕ, ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಸಿಂಪಲ್​ ಆಗಿರುವ ಸ್ಟೋರಿಯನ್ನು ಪ್ರೇಕ್ಷಕರ ಮನಮುಟ್ಟುವಂತೆ ತೋರಿಸುವ ರಕ್ಷಿತ್​ ಸ್ಟೈಲ್​ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಆದರೆ, ಈ ಬೆಳ್ಳಿ ಪರದೆಯಲ್ಲಿ ಯಶಸ್ಸು ಸಿಗೋದು ಅಷ್ಟು ಸುಲಭವಲ್ಲ. ಅದನ್ನು ಪಡೆದುಕೊಳ್ಳಲು ಸಾಕಷ್ಟು ಛಲ, ಪರಿಶ್ರಮ ಬೇಕು. ರಕ್ಷಿತ್​ ಶೆಟ್ಟಿ ಅವರ ಜೀವನವೂ ಇದಕ್ಕೆ ಹೊರತಾಗಿಲ್ಲ. ಸಿನಿಮಾ ಎಂಬ ಜಂಜಾಟದಲ್ಲಿ ಸಾಕಷ್ಟು ಸೋಲು, ನೋವುಗಳನ್ನು ಕಂಡಿದ್ದಾರೆ.

ಈ ಬಗ್ಗೆ ಅವರಿಂದು ಹೊಸ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಗುರುಪೂರ್ಣಿಮೆ ಶುಭಾಶಯಗಳನ್ನು ತಿಳಿಸುತ್ತಾ ತಾವು ನಡೆದು ಬಂದ ದಾರಿ ಮತ್ತು ಮುಂದೆ ತುಳಿಯಬೇಕಿರುವ ಹಾದಿಯ ಬಗ್ಗೆ ಮಾತನಾಡಿದ್ದಾರೆ. ರಕ್ಷಿತ್​ ಶೆಟ್ಟಿ ಹುಟ್ಟಿ ಬೆಳೆದದ್ದು ಉಡುಪಿಯಲ್ಲಿ. ಸಿನಿಮಾ ಎಂಬ ಕನಸು ಹುಟ್ಟಿಕೊಳ್ಳಲು ಉಡುಪಿಯೇ ಕಾರಣ ಎಂದು ಬಹಿರಂಗಪಡಿಸಿದ್ದಾರೆ. 'ಉಳಿದವರು ಕಂಡಂತೆ' ಸಿನಿಮಾದಲ್ಲಿ ನಿರ್ದೇಶಕರ ಕುರ್ಚಿಯಲ್ಲಿ ಕುಳಿತಿದ್ದ ಶೆಟ್ರು, ಇದೀಗ ದಶಕದ ಬಳಿಕ ಮತ್ತೆ ಆಕ್ಷನ್​ ಕಟ್ ಹೇಳಲು ಮುಂದಾಗಿದ್ದಾರೆ. ಪ್ರಮುಖವಾಗಿ ಈ ವಿಚಾರವನ್ನು ತಿಳಿಸಲೆಂದೇ ತಮ್ಮ ಕಥಾ ಪ್ರಪಂಚಕ್ಕೆ ನಮ್ಮೆಲ್ಲರನ್ನೂ ಆಹ್ವಾನಿಸಿದ್ದಾರೆ.

ಜೊತೆಗೆ ಬಾಲ್ಯದ ದಿನಗಳಲ್ಲಿ ಉಡುಪಿಯ ರಥಬೀದಿ, ಶ್ರೀ ಕೃಷ್ಣ, ರಾಘವೇಂದ್ರ ಅನಂತೇಶ್ವರನ ಸನ್ನಿಧಿಯ ಓಡಾಟದ ಬಗ್ಗೆ ಕ್ಯಾಪ್ಶನ್​ ಬರೆದಿದ್ದಾರೆ. ಅದನ್ನು ಸ್ಟೋರಿ ಕೂಡ ಹಾಕಿಕೊಂಡಿದ್ದಾರೆ. ಅನಂತೇಶ್ವರನ ಸನ್ನಿಧಿಯಲ್ಲಿ ತನಗೆ ಕಾಡಿದ ಪ್ರಶ್ನೆಗಳು, ಅದರಿಂದ ತನ್ನೊಳಗೊಬ್ಬ ಕಥೆಗಾರ ಹುಟ್ಟಿದ ಬಗೆಯನ್ನು ಬರೆದುಕೊಂಡಿದ್ದಾರೆ. ಇದೇ ಪಯಣದಲ್ಲಿ ತಿಳಿದುಕೊಂಡ ಪುರಾಣ, ಇತಿಹಾಸ, ಅದರಿಂದ ಕಂಡುಕೊಂಡ ವಿಜ್ಞಾನ, ಈ ಇತಿಹಾಸದಿಂದ ಅಳವಡಿಸಿಕೊಂಡ ಆಧುನಿಕ ಕಥೆಗಳ ಸರಣಿಯನ್ನು ಜನರಿಗೆ ತಿಳಿಸಲು ರಕ್ಷಿತ್​ ಶೆಟ್ಟಿ ಹೊರಟಿದ್ದಾರೆ. ಇದರ ಹೆಸರೇ 'ನಾ ಕಂಡಂತೆ'.

rakshit
ಸಿಂಪಲ್​ ಸ್ಟಾರ್​ ರಕ್ಷಿತ್​ ಶೆಟ್ಟಿ ಪೋಸ್ಟ್​

ರಕ್ಷಿತ್​ ಶೆಟ್ಟಿ ನಟನೆಯ ಸಪ್ತ ಸಾಗರದಾಚೆ ಎಲ್ಲೋ ಚಿತ್ರ ರಿಲೀಸ್​ಗೆ ರೆಡಿಯಾಗಿದೆ. ಸೆಪ್ಟಂಬರ್​ 1 ರಂದು ಬಿಡುಗಡೆಯಾಗುತ್ತಿದೆ. ಇದರ ಜೊತೆಗೆ ಎರಡು ಸಿನಿಮಾಗಳನ್ನು ನಿರ್ದೇಶನ ಮಾಡುತ್ತಿದ್ದಾರೆ. 'ರಿಚರ್ಡ್​ ಆಂಟನಿ' ಮತ್ತು 'ಪುಣ್ಯಕೋಟಿ' ಬಗ್ಗೆ ವಿಡಿಯೋದಲ್ಲಿ ರಕ್ಷಿತ್​ ಮಾತನಾಡಿದ್ದಾರೆ. 'ರಿಚರ್ಡ್ ಆಂಟನಿ' ಸಿನಿಮಾದ ಪ್ರೋಮೋ ಶೂಟ್​ ಸ್ಥಳದಿಂದ ಶೆಟ್ರ ವಿಡಿಯೋ ಪ್ರಾರಂಭವಾಗುತ್ತದೆ. "ಕೆಲವರಿಗೆ ಯಶಸ್ಸು ರಾತ್ರೋ ರಾತ್ರಿಯ ಕಥೆಯಾದ್ರೆ, ಇನ್ನು ಕೆಲವರಿಗೆ ಅದೆಷ್ಟೋ ವರ್ಷಗಳ ತಪಸ್ಸು ಆಗಿಬಿಡುತ್ತದೆ" ಎಂದು ಹೇಳುವ ಮೂಲಕ ತಾವು ನಡೆದು ಬಂದ ಹಾದಿಯನ್ನು ನೆನಪಿಸಿಕೊಂಡಿದ್ದಾರೆ.

ಯಶಸ್ಸು ಸಿಕ್ಕ ಬಳಿಕ ಆ ಯಶಸ್ಸಿನಲ್ಲೇ ತೇಲಬೇಕಾ? ಅಥವಾ ಆ ಸಾಗರದಲ್ಲಿ ಈಜೋ ಸಿದ್ಧತೆ ಮಾಡ್ಕೋಬೇಕಾ? ಎಂಬ ಪ್ರಶ್ನೆಯನ್ನು ಕೇಳಿಕೊಂಡಿದ್ದಾರೆ. ಕನಸಿನ ಪ್ರಪಂಚದಲ್ಲಿ ಈಜುತ್ತಾ ಈಜುತ್ತಾ ಹಾರೋ ರೆಕ್ಕೆ ಕಟ್ಟೋದಿದೆ ಎಂದು ಹೇಳುತ್ತಾ ಕಥೆಯನ್ನು ಮುಂದೆ ಸಾಗಿಸಿದ್ದಾರೆ. ಆ ಮಧ್ಯದಲ್ಲೇ ಅವರು ರಿಚರ್ಡ್​ ಆಂಟನಿ ಮತ್ತು ಪುಣ್ಯಕೋಟಿ ಸಿನಿಮಾಗಳಿಗೆ ಪರುಶುರಾಮ ಮತ್ತು ಆತನ ಕೊಡಲಿ ಸ್ಫೂರ್ತಿ ಎಂಬುದಾಗಿ ಉಲ್ಲೇಖಿಸಿದ್ದಾರೆ. ಇದರ ಜೊತೆಗೆ ನಿರ್ದೇಶನದ ಮೇಲಿನ ಪ್ರೀತಿ ಮತ್ತು ಅನುಭವದ ಕುರಿತಾಗಿಯೂ ಮಾತನಾಡಿದ್ದಾರೆ.

ಇದನ್ನೂ ಓದಿ: 'Salaar teaser: ಹೊಸ ಪೋಸ್ಟರ್​ ಮೂಲಕ ಟೀಸರ್​ ದಿನಾಂಕ ಘೋಷಿಸಿದ 'ಸಲಾರ್'​ ತಂಡ; ಸೇವ್​ ಮಾಡಿಕೊಳ್ಳಿ ಈ ದಿನವನ್ನ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.