ETV Bharat / entertainment

Rajinikanth: ಯುಪಿ ಸಿಎಂ ಯೋಗಿ ಪಾದ ಸ್ಪರ್ಶಿಸಿ ಗೌರವ ಸೂಚನೆ.. ಮಿಶ್ರ ಪ್ರತಿಕ್ರಿಯೆಗೆ ಸ್ಪಷ್ಟನೆ ಕೊಟ್ಟ ನಟ ರಜನಿಕಾಂತ್​ - ಯೋಗಿ ಆದಿತ್ಯನಾಥ್​

Rajinikanth responds to criticism: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಪಾದ ಸ್ಪರ್ಶಿಸಿರುವ ವಿಚಾರವಾಗಿ ಖ್ಯಾತ ನಟ ರಜನಿಕಾಂತ್ ಪ್ರತಿಕ್ರಿಯೆ ನೀಡಿದ್ದಾರೆ.

Rajinikanth touches up cm feet
ಸಿಎಂ ಯೋಗಿ ಪಾದ ಸ್ಪರ್ಶಿಸಿದ ರಜನಿಕಾಂತ್​
author img

By ETV Bharat Karnataka Team

Published : Aug 22, 2023, 12:33 PM IST

ಜೈಲರ್ ಸಿನಿಮಾ​ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಇಂಡಿಯನ್ ಸೂಪರ್ ​ಸ್ಟಾರ್ ರಜನಿಕಾಂತ್​ ಅವರು ಇತ್ತೀಚೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರನ್ನು ಭೇಟಿಯಾಗಿದ್ದರು. ಲಕ್ನೋದಲ್ಲಿ ಭೇಟಿ ಸಂದರ್ಭ ಈ ಹಿರಿಯ ನಟ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಪಾದ ಸ್ಪರ್ಶಿಸಿ ನಮನ ಸಲ್ಲಿಸಿದ್ದು, ಚರ್ಚೆ ಹುಟ್ಟುಹಾಕಿತ್ತು. ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈ ಬಗ್ಗೆ ಸ್ವತಃ ನಟ ರಜನಿಕಾಂತ್​ ಸ್ಪಷ್ಟಪಡಿಸಿದ್ದಾರೆ.

ನಟ ರಜನಿಕಾಂತ್​ ಸ್ಪಷ್ಟನೆ: ಚೆನ್ನೈಗೆ ಮರಳುತ್ತಿದ್ದಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,​​ ಮುಖ್ಯಮಂತ್ರಿಗಳ ಪಾದ ಮುಟ್ಟಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು. ಯೋಗಿಗಳು ಅಥವಾ ಸನ್ಯಾಸಿಗಳ ಪಾದ ಸ್ಪರ್ಶಿಸುವುದು ನನ್ನ ಅಭ್ಯಾಸ ಎಂದು ಸ್ಪಷ್ಟನೆ ನೀಡಿದರು. ''ಯೋಗಿಗಳು ಅಥವಾ ಸನ್ಯಾಸಿಗಳು ನನಗಿಂತ ಚಿಕ್ಕವರಾಗಿದ್ದರೂ ಕೂಡ ಅವರ ಪಾದ ಸ್ಪರ್ಶಿಸಿ ಆಶೀರ್ವಾದ ಕೇಳುತ್ತೇನೆ'' ಎಂದು ಮಾಧ್ಯಮದವರಲ್ಲಿ ತಿಳಿಸಿದರು.

  • प्रख्यात फिल्म अभिनेता श्री रजनीकांत जी से आज लखनऊ स्थित सरकारी आवास पर शिष्टाचार भेंट हुई।@rajinikanth pic.twitter.com/HIByc0aOO0

    — Yogi Adityanath (@myogiadityanath) August 19, 2023 " class="align-text-top noRightClick twitterSection" data=" ">

ಆಧ್ಯಾತ್ಮಿಕ ಪ್ರವಾಸ ಪೂರ್ಣಗೊಳಿಸಿದ ನಟ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ನಟ ರಜನಿಕಾಂತ್​ ಜೊತೆಗಿನ ಫೋಟೋ ಹಂಚಿಕೊಂಡ ನಂತರ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಯಿತು. ''ಇಂದು ಲಕ್ನೋದಲ್ಲಿರುವ ನನ್ನ ಅಧಿಕೃತ ನಿವಾಸದಲ್ಲಿ ಜನಪ್ರಿಯ ಚಲನಚಿತ್ರ ನಟ ರಜನಿಕಾಂತ್​ ಅವರೊಂದಿಗೆ ಸೌಜನ್ಯಯುತ ಭೇಟಿ'' ಎಂದು ಬರೆದುಕೊಂಡಿದ್ದರು. ಜೈಲರ್​ ಬಿಡುಗಡೆಗೂ ಮುನ್ನ ಆಧ್ಯಾತ್ಮಿಕ ಪ್ರವಾಸ ಪ್ರಾರಂಭಿಸಿದ್ದ ನಟ ಕಳೆದ ಶುಕ್ರವಾರ, ಶನಿವಾರ, ಭಾನುವಾರದಂದು ಉತ್ತರ ಪ್ರದೇಶದ ಗಣ್ಯರನ್ನು ಭೇಟಿಯಾಗಿದ್ದಾರೆ.

ಉತ್ತರ ಪ್ರದೇಶ ಗಣ್ಯರ ಭೇಟಿ: ತಮ್ಮ ಜೈಲರ್​ ಸಿನಿಮಾ ತೆರೆಕಾಣುವ ಒಂದು ದಿನ ಮೊದಲು ಅಂದರೆ ಆಗಸ್ಟ್ 9 ರಂದು ಹಿಮಾಲಯಕ್ಕೆ ತೆರೆಳಿದ್ದರು. ನಂತರ ರಾಜರಪ್ಪ ಮತ್ತು ಕೇದಾರನಾಥ ದೇವಾಲಯಕ್ಕೆ ಭೇಟಿ ಕೊಟ್ಟರು. ಉತ್ತರಾಖಂಡದಿಂದ ರಾಂಚಿಗೆ, ಬಳಿಕ ಉತ್ತರ ಪ್ರದೇಶದಲ್ಲಿ ಕೆಲ ದಿನ ತಂಗಿದ್ದರು. ಸಿಎಂ ಯೋಗಿ ಭೇಟಿ ಬಳಿಕ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್​​ ಯಾದವ್​​​ ಅವರನ್ನು ಸಹ ಭೇಟಿ ಆಗಿದ್ದರು.

ಇದನ್ನೂ ಓದಿ: ಯೋಗಿ ಆದಿತ್ಯನಾಥ್ ಪಾದ ಸ್ಪರ್ಶಿಸಿ ಸಮಸ್ಕರಿಸಿದ 'ಜೈಲರ್​' ಸ್ಟಾರ್​ ರಜನಿಕಾಂತ್​-ವಿಡಿಯೋ

ಜೈಲರ್​ ಬಾಕ್ಸ್​ ಆಫೀಸ್​ ಕಲೆಕ್ಷನ್​: ಜೈಲರ್​ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಧೂಳೆಬ್ಬಿಸುತ್ತಿದೆ. ಆ್ಯಕ್ಷನ್​ ಸಿನಿಮಾ ವಿಶ್ವದಾದ್ಯಂತ 500 ಕೋಟಿ ರೂ. ಗಡಿ ದಾಟುವಲ್ಲಿ ಯಶಸ್ವಿಯಾಗಿದೆ. ರೋಬೋಟ್​ 2.0 ಬಳಿಕ 500 ಕೋಟಿ ರೂ. ಗಡಿ ದಾಟಿದ ರಜನಿ ಅವರ ಎರಡನೇ ಸಿನಿಮಾವಿದು. ಎರಡು ವರ್ಷಗಳ ಬಳಿಕ ಬಿಡುಗಡೆ ಆದ ತಲೈವಾರ ಎರಡನೇ ಸಿನಿಮಾ ಅಭೂತಪೂರ್ವ ಯಶಸ್ಸು ಕಂಡಿದೆ. ನೆಲ್ಸನ್​ ದಿಲೀಪ್​​ ಕುಮಾರ್​​​ ಆ್ಯಕ್ಷನ್​ ಕಟ್​ ಹೇಳಿರುವ ಈ ಸಿನಿಮಾದಲ್ಲಿ ಶಿವರಾಜ್​ಕುಮಾರ್​, ಮೋಹನ್​ಲಾಲ್​​, ಜಾಕಿ ಶ್ರಾಫ್​, ತಮನ್ನಾ ಭಾಟಿಯಾ ಸೇರಿದಂತೆ ಪ್ರಮುಖರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಅಖಿಲೇಶ್​ ಯಾದವ್ ಅಪ್ಪಿಕೊಂಡ ರಜನಿಕಾಂತ್‌: ಭೇಟಿ ಬಗ್ಗೆ 'ತಲೈವಾ' ಹೇಳಿದ್ದೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.