ETV Bharat / entertainment

ಬಹುಭಾಷಾ ನಟ ಪ್ರಕಾಶ್ ರಾಜ್‌ಗಿಂದು 58ನೇ ಹುಟ್ಟುಹಬ್ಬ - ಈಟಿವಿ ಭಾರತ ಕನ್ನಡ

ಇಂದು ನಟ ಪ್ರಕಾಶ್​ ರಾಜ್​ 58 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

Prakash Raj
ಪ್ರಕಾಶ್​ ರಾಜ್
author img

By

Published : Mar 26, 2023, 1:37 PM IST

ಬಹುಭಾಷಾ ನಟ ಪ್ರಕಾಶ್​ ರೈ ಗೆ (ಪ್ರಕಾಶ್​ ರಾಜ್​) ಇಂದು ಹುಟ್ಟುಹಬ್ಬದ ಸಂಭ್ರಮ. 1965 ರ ಮಾರ್ಚ್​ 26ರಂದು ಜನಿಸಿದ ಇವರು 58ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ತನ್ನದೇ ಆದ ವಿಭಿನ್ನ ನಟನೆಯ ಮೂಲಕ ಸ್ಯಾಂಡಲ್​ವುಡ್​ ಮಾತ್ರವಲ್ಲದೇ ಹಿಂದಿ, ತೆಲುಗು, ತಮಿಳು ಸೇರಿದಂತೆ ಅನೇಕ ಭಾಷೆಗಳ ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಸುಮಾರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಇವರು, ಸಮಾಜ ಕಾರ್ಯದಲ್ಲೂ ಸದಾ ಮುಂದಿದ್ದಾರೆ.

ಪ್ರಕಾಶ್​ ರಾಜ್​ ಮೊದಲಿಗೆ ಕನ್ನಡದ 'ಬಿಸಿಲು ಕುದುರೆ' ಎಂಬ ಧಾರವಾಹಿಯಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ನಂತರದಲ್ಲಿ ಕನ್ನಡದ ಜೊತೆಗೆ ಗುಡ್ಡದ ಭೂತ ಎಂಬ ತುಳು ಸೀರಿಯಲ್​ನಲ್ಲೂ ಅಭಿನಯಿಸಿದ್ದಾರೆ. ಇವರ ಅದ್ಭುತ ನಟನೆಯನ್ನು ಕಂಡ ಕಾಲಿವುಡ್​ ನಿರ್ದೇಶಕ ಕೆ.ಬಾಲಚಂದ್ರ ಇವರನ್ನು ಚಿತ್ರರಂಗಕ್ಕೆ ಕರೆತಂದರು. ಇಲ್ಲಿಂದ ಸಿನಿ ವೃತ್ತಿ ಜೀವನ ಪ್ರಾರಂಭಿಸಿದ ಪ್ರಕಾಶ್​, ನಾಯಕ ನಟನಾಗಿ ಮಾತ್ರವಲ್ಲದೇ ಪೋಷಕ ಪಾತ್ರ ಸೇರಿದಂತೆ ಹೆಚ್ಚಾಗಿ ಖಳನಾಯಕನಾಗಿಯೇ ನಟಿಸಿದ್ದಾರೆ. ಅವರ ಕಂಚಿನ ಕಂಠಕ್ಕೆ ಯಾವ ಪಾತ್ರ ಕೊಟ್ಟರೂ ಅದನ್ನು ನಿಭಾಯಿಸಬಲ್ಲ ಶಕ್ತಿಯಿದೆ.

ಕನ್ನಡದ ರಾಮಾಚಾರಿ, ರಣಧೀರ, ಅಜಯ್​, ಪುಟ್ಟಕ್ಕನ ಹೈವೇ, ಕೆಜಿಎಫ್ 2, ನಿಷ್ಕರ್ಷ, ಲಾಕಪ್​ ಡೆತ್​​ ಮುಂತಾದ ಸಿನಿಮಾಗಳಲ್ಲಿ ನಟಿಸಿ ಸಿನಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಅದರಲ್ಲೂ ಅವರು ನಟಿಸಿರುವ 'ನಾಗಮಂಡಲ' ಚಿತ್ರ ಸೂಪರ್​ ಹಿಟ್​ ಕಂಡಿದೆ. ವಿವಿಧ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿರುವ ಅವರು 'ನಾನು ನನ್ನ ಕನಸು' ಎಂಬ ಚಿತ್ರವನ್ನು ಸ್ವತಃ ನಿರ್ದೇಶಿಸಿ ಉತ್ತಮ ಯಶಸ್ಸು ಕಂಡಿದ್ದಾರೆ. ಅಲ್ಲದೇ ಸದ್ಯ ರಾಜಕೀಯ ವಿಚಾರಗಳನ್ನು ಪ್ರಸ್ತಾಪಿಸುವ ಮೂಲಕವೂ ಸುದ್ದಿಯಲ್ಲಿರುತ್ತಾರೆ. ಮೂಲತಃ ಕನ್ನಡಿಗರಾಗಿದ್ದರೂ, ತೆಲುಗಿನಲ್ಲಿ ಸ್ಟಾರ್​ ಎಂಬ ಪಟ್ಟ ಇವರಿಗಿದೆ.

ಇದನ್ನೂ ಓದಿ: 'ಹ್ಯಾಪಿ ಬರ್ತ್‌ಡೇ ಅಮ್ಮಲು': ಪತ್ನಿಗೆ ವಿಶೇಷವಾಗಿ ಶುಭ ಕೋರಿದ RRR ಸ್ಟಾರ್ ಜೂ.ಎನ್​ಟಿಆರ್​​

ಪ್ರಕಾಶ್​ ರಾಜ್​ ತಮ್ಮ ಅದ್ಭುತ ನಟನೆಯಿಂದಲೇ ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅವುಗಳಲ್ಲಿ ಕರ್ನಾಟಕ ಸ್ಟೇಟ್​ ಫಿಲಂ ಅವಾರ್ಡ್​, ನ್ಯಾಷನಲ್​ ಫಿಲಂ ಅವಾರ್ಡ್​, ಜುರಿ ಅವಾರ್ಡ್​, 1998ರಲ್ಲಿ ಇರುವರ್​ ಚಿತ್ರದಲ್ಲಿನ ಪೋಷಕ ಪಾತ್ರಕ್ಕೆ ರಾಷ್ಟ್ರಪ್ರಶಸ್ತಿ ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಸಿನಿಮಾ ನಟಿಯಾದ ದಂತಚೋರ ವೀರಪ್ಪನ್​ ಮಗಳು.. 'ಮಾವೀರನ್​ ಪಿಳ್ಳೈ' ಮೂಲಕ ಅದೃಷ್ಟ ಪರೀಕ್ಷೆ

ಸಮಾಜ ಕಾರ್ಯದಲ್ಲೂ ಮುಂದು: ಪ್ರಕಾಶ್​ ರಾಜ್​ ಸಿನಿ ವೃತ್ತಿ ಒಂದೆಡೆಯಾದ್ರೆ, ಮತ್ತೊಂದೆಡೆ ಅವರು ಸಾಮಾಜಿಕ ಕಾರ್ಯದಲ್ಲೂ ಸದಾ ಮುಂದು. ಕಷ್ಟದಲ್ಲಿರುವ ಜನರಿಗೆ ಪ್ರಕಾಶ್​ ರಾಜ್​ ಫೌಂಡೇಶನ್ ಮೂಲಕ ನೆರವಾಗುತ್ತಿದ್ದಾರೆ. ಜೊತೆಗೆ ಪುನೀತ್​ ರಾಜ್​ಕುಮಾರ್​ ಸ್ಮರಣಾರ್ಥ ರಾಜ್ಯದ ಎಲ್ಲಾ ಜಿಲ್ಲೆಗೂ ಆಂಬ್ಯುಲೆನ್ಸ್​ ಸೇವೆಯನ್ನು ಒದಗಿಸುತ್ತಿದ್ದಾರೆ. ಈಗಾಗಲೇ ಆರು ಜಿಲ್ಲೆಗಳಿಗೆ ಆಂಬ್ಯುಲೆನ್ಸ್​ ವಿತರಿಸಲಾಗಿದೆ. ​

ಇದನ್ನೂ ಓದಿ: 'ಅಪ್ಪು ಎಕ್ಸ್​ಪ್ರೆಸ್​ ಆಂಬ್ಯುಲೆನ್ಸ್​' ಸೇವೆ: ಪ್ರಕಾಶ್‌ ರಾಜ್‌ಗೆ ಸಾಥ್ ಕೊಟ್ಟ ಯಶ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.