ಸ್ಯಾಂಡಲ್ವುಡ್ನಲ್ಲಿ ಯುವ ನಟನಾಗಿ ಗುರುತಿಸಿಕೊಂಡಿದ್ದ ಸತೀಶ್ ವಜ್ರ ಜೂನ್ ತಿಂಗಳಲ್ಲಿ ರಾತ್ರೋ ರಾತ್ರಿ ಬರ್ಬರವಾಗಿ ಭಾಮೈದನಿಂದಲೇ ಕೊಲೆಯಾಗಿದ್ದರು. ಈ ಘಟನೆ ಬೆಂಗಳೂರಿನ ಜನರನ್ನು ಬೆಚ್ಚಿಬೀಳಿಸಿತ್ತು. ಇದೀಗ ನಟ ಪ್ರಜ್ವಲ್ ದೇವರಾಜ್ ಅವರು ಸತೀಶ್ ವಜ್ರ ಪೋಷಕರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ.
ಪ್ರಜ್ವಲ್ ದೇವರಾಜ್ ಅವರ ಗೆಳೆಯ ಸಿನಿಮಾದಿಂದ ಸತೀಶ್ ವಜ್ರ ಅವರು ಪ್ರಜ್ವಲ್ ದೇವರಾಜ್ ಅವರ ಅಪ್ಪಟ ಅಭಿಮಾನಿಯಾಗಿದ್ದರಂತೆ. ಈ ಕಾರಣಕ್ಕೆ ಪ್ರಜ್ವಲ್ ದೇವರಾಜ್ ಮಂಡ್ಯದ ಪಾಂಡವಪುರ ತಾಲೂಕಿನ ಹಳೇಬೀಡು ಗ್ರಾಮದಲ್ಲಿರೋ ಸತೀಶ್ ವಜ್ರ ಅವರ ತಂದೆ ಶ್ರೀನಿವಾಸ್ ಹಾಗು ತಾಯಿ ಸರೋಜಮ್ಮ ಅವರನ್ನು ಭೇಟಿ ಮಾಡಿ ಸಾಂತ್ವನ ಹೇಳಿ ಬಂದಿದ್ದಾರೆ.
ಈ ವೇಳೆ ತಮ್ಮ ಕೈಲಾದಷ್ಟು ಹಣದ ಸಹಾಯ ಮಾಡುವುದಾಗಿ ಪ್ರಜ್ವಲ್ ದೇವರಾಜ್ ಭರವಸೆ ನೀಡಿದ್ದಾರೆಂದು ಅವರ ಆಪ್ತರು ತಿಳಿಸಿದ್ದಾರೆ.
ಇದನ್ನೂ ಓದಿ: ಕನ್ನಡ ಓಟಿಟಿ ಬಿಗ್ ಬಾಸ್ ಮನೆಗೆ ಕಾಮಿಡಿ ಕಿಲಾಡಿ ಲೋಕೇಶ್ ಎಂಟ್ರಿ
ಚಿತ್ರರಂಗದಲ್ಲಿ ಸಿನಿಮಾ ನಟನಾಗಬೇಕು ಅಂದುಕೊಂಡಿದ್ದ ಸತೀಶ್ ವಜ್ರ ಕೆಲ ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನ ಮಾಡಿದ್ದರು.