ETV Bharat / entertainment

ಒಂದು ದಿನಕ್ಕೆ 2 ಕೋಟಿ ರೂ. ಸಂಭಾವನೆ ಪಡೆಯುತ್ತೇನೆ: ನಟ ಪವನ್​ ಕಲ್ಯಾಣ್​​ - pawan kalyan politics

ಸಿನಿಮಾ ವೃತ್ತಿ ಜೀವನದಲ್ಲಿ ಒಂದು ದಿನಕ್ಕೆ 2 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತೇನೆ ಎಂದು ನಟ ಪವನ್​ ಕಲ್ಯಾಣ್​​ ಬಹಿರಂಗಪಡಿಸಿದ್ದಾರೆ.

actor pawan kalyan Remuneration
ನಟ ಪವನ್​ ಕಲ್ಯಾಣ್​​ ಸಂಭಾವನೆ
author img

By

Published : Mar 15, 2023, 2:22 PM IST

ಸಿನಿ ಸೆಲಬ್ರಿಟಿಗಳಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಬಹುತೇಕ ಅಭಿಮಾನಿಗಳಿಗೆ ಸಹಜವಾಗಿ ಇರುತ್ತದೆ. ವಿಶೇಷವಾಗಿ ಅವರ ಸಂಭಾವನೆ ಬಗ್ಗೆ ಹೆಚ್ಚು ಕುತೂಹಲ ಹೊಂದಿರುತ್ತಾರೆ. ಅದಕ್ಕೆ ಸಂಬಂಧಿಸಿದ ವಿವರಗಳು ಆಗಾಗ್ಗೆ ಬರುತ್ತಿರುತ್ತವೆ. ಸಾಮಾಜಿಕ ಜಾಲತಾಣದಲ್ಲಿ ಆಯಾ ಹೀರೋಗಳ ರೆಮ್ಯೂನರೇಶನ್‌ ಕುರಿತು ಹಲವು ರೀತಿಯ ಸುದ್ದಿಗಳು ಹರಿದಾಡುತ್ತವೆ. ಆದರೆ ಅವುಗಳ ಬಗ್ಗೆ ನಾಯಕರು ಮಾತ್ರ ಪ್ರತಿಕ್ರಿಯಿಸಿಸುವುದಿಲ್ಲ. ಆದ್ರೆ ಟಾಲಿವುಡ್​​ ಪವರ್​ ಸ್ಟಾರ್​ ಪವನ್ ಕಲ್ಯಾಣ್ ತಮ್ಮ ಸಂಭಾವನೆ ಬಗ್ಗೆ ಮಾತನಾಡಿದ್ದಾರೆ. ದಿನಕ್ಕೆ ತಾವು ತೆಗೆದುಕೊಳ್ಳುವ ಸಂಬಳದ ಮಾಹಿತಿಯನ್ನು ಬಹಿರಂಗವಾಗಿ ಹೇಳಿದ್ದಾರೆ.

ದಿನಕ್ಕೆ 2 ಕೋಟಿ ರೂ. ಸಂಭಾವನೆ: ಇತ್ತೀಚೆಗೆ ಮಚಿಲೀಪಟ್ಟಣದಲ್ಲಿ ನಡೆದ ಜನ ಸೇನಾ ಆವಿರ್ಭಾವ ಸಭೆಯಲ್ಲಿ ಮಾತನಾಡಿದ ನಟ ಪವನ್​ ಕಲ್ಯಾಣ್​, ಪ್ರಸ್ತುತ ದಿನಕ್ಕೆ ತಾವು 2 ಕೋಟಿ ರೂ. ನಷ್ಟು ಸಂಭಾವನೆ ತೆಗೆದುಕೊಳ್ಳುತ್ತಿರುವುದಾಗಿ ಸ್ಪಷ್ಟಪಡಿಸಿದರು. ಇತ್ತೀಚೆಗೆ ಸಿನಿಮಾವೊಂದಕ್ಕೆ 22 ದಿನಗಳ ಡೇಟ್ಸ್ ಕೊಟ್ಟಿದ್ದು, 44 ಕೋಟಿ ರೂ. ಪಡೆದಿದ್ದಾರೆ. ರಾಜಕೀಯ ಟೀಕೆಗಳಿಗೆ ಉತ್ತರ ಕೊಡುವ ಸಲುವಾಗಿ ಈ ಹೇಳಿಕೆ ಕೊಟ್ಟಿದ್ದಾರೆ. ತಾನು ಹಣಕ್ಕಾಗಿ ಆಸೆ ಪಡುವವನಲ್ಲ ಎಂದು ಕೂಡ ಅವರು ಹೇಳಿದ್ದಾರೆ.

ನಾನು ಹಣ ಮಾಡಲು ಬಂದಿಲ್ಲ: ನಟ ಪವನ್​ ಕಲ್ಯಾಣ್​ ಅವರು ಜನ ಸೇನಾ ಪಕ್ಷ ಕಟ್ಟಿದಾಗಿನಿಂದ ಅವರ ಸಂಭಾವನೆ ವಿಷಯವಾಗಿ ಟೀಕೆ ಟಿಪ್ಪಣಿ ಕೇಳಿ ಬಂದಿದ್ದವು. ರಾಜಕೀಯವಾಗಿ ಸಾಕಷ್ಟು ಟೀಕೆ ಎದುರಿಸಿದ್ದರು. ಈ ಹಿನ್ನೆಲೆ ನಾನು ಹಣ ಮಾಡಲು ಬಂದಿಲ್ಲ. ನನ್ನ ಬಳಿ ಹಣವಿದೆ. ದಿನಕ್ಕೆ 2 ಕೋಟಿ ರೂಪಾಯಿ ಸಂಪಾದಿಸುತ್ತೇನೆ ಎಂದು ಟೀಕೆ ಮಾಡುವವರಿಗೆ ತಿರುಗೇಟು ಕೊಟ್ಟಿದ್ದಾರೆ.

ಪವನ್ ಕಲ್ಯಾಣ್​​ ಒಂದೆಡೆ ಸಿನಿಮಾ, ಮತ್ತೊಂದೆಡೆ ರಾಜಕೀಯದಲ್ಲಿ ಬ್ಯುಸಿಯಾಗಿರುವುದು ನಿಮಗೆ ಗೊತ್ತೇ ಇದೆ. ಎರಡನ್ನೂ ಬ್ಯಾಲೆನ್ಸ್ ಮಾಡಿಕೊಂಡು ವೃತ್ತಿ ಜೀವನದಲ್ಲಿ ಮುನ್ನಡೆಯುತ್ತಿದ್ದಾರೆ. ಸದ್ಯ ತಮಿಳಿನ ಹಿಟ್ ಸಿನಿಮಾ 'ವಿನೋದಯ ಸೀತಂ' ರಿಮೇಕ್‌ನಲ್ಲಿ ನಟಿಸುತ್ತಿದ್ದಾರೆ. ಸಂಬಂಧಿ ಸಾಯಿತೇಜ್ ಕೂಡ ಇದರಲ್ಲಿ ನಟಿಸುತ್ತಿದ್ದಾರೆ. ತಮಿಳು ನಿರ್ದೇಶಕ ಹಾಗೂ ನಟ ಸಮುದ್ರಖನಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರಕ್ಕಾಗಿ ಪವನ್​ ಕಲ್ಯಾಣ್​​ 20 ದಿನಗಳ ಡೇಟ್‌ಗಳನ್ನು ಮೀಸಲಿಟ್ಟಿದ್ದಾರೆ ಎಂಬ ವರದಿಗಳು ಈ ಹಿಂದೆ ಇದ್ದವು. ಸದ್ಯ ಅವರು ನೀಡಿರುವ ಹೇಳಿಕೆ ಪ್ರಕಾರ, ಈ ಚಿತ್ರಕ್ಕಾಗಿ ಅವರು 44 ಕೋಟಿ ರೂಪಾಯಿ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ನನ್ನ ಜೀವನದ ಅತ್ಯುತ್ತಮ ಕ್ಷಣ.. ಆಸ್ಕರ್​ ಬಗ್ಗೆ ಜೂ. ಎನ್​ಟಿಆರ್​ ಹರ್ಷ

ಈ ಚಿತ್ರದ ಜೊತೆಗೆ ಹರೀಶ್ ಶಂಕರ್ ನಿರ್ದೇಶನದಲ್ಲಿ ಸಿನಿಮಾ ಮಾಡಲಿದ್ದಾರೆ. ಬಹಳ ದಿನಗಳಿಂದ ಬಾಕಿ ಉಳಿದಿರುವ ಈ ಚಿತ್ರ ಶೀಘ್ರದಲ್ಲೇ ಸೆಟ್ಟೇರುವ ಸಾಧ್ಯತೆ ಇದೆ. ಹಾಗೆಯೇ ಕ್ರಿಶ್ ನಿರ್ದೇಶನದ ಹರಿಹರ ವೀರಮಲ್ಲು ಚಿತ್ರದ ಚಿತ್ರೀಕರಣ ಅಂತಿಮ ಹಂತ ತಲುಪಿದೆ. ಶೀಘ್ರದಲ್ಲೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡಲು ಸಿದ್ಧತೆ ಜೋರಾಗಿಯೇ ನಡೆಯುತ್ತಿದೆ. ನಿರ್ದೇಶಕ ಸುಜಿತ್ ಜೊತೆ ಓಜಿ ಎಂಬ ಚಿತ್ರದಲ್ಲಿ ಕೂಡ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: ಬಾಲಿವುಡ್​ ಗುಳಿಕೆನ್ನೆ ಚೆಲುವೆಗೆ ಜನ್ಮದಿನದ ಸಂಭ್ರಮ: ಅಭಿನಯದಿಂದ ಆಕರ್ಷಿಸುವ ಆಲಿಯಾ ಭಟ್ ಫೋಟೋಗಳನ್ನು ನೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.