ಮುಂಬೈ(ಮಹಾರಾಷ್ಟ್ರ): ನಟ ಮಹೇಶ್ ಠಾಕೂರ್ ಅವರು ಅಂಧೇರಿಯ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಮಯಾಂಕ್ ಗೋಯಲ್ ಎಂಬ ವ್ಯಕ್ತಿಯ ವಿರುದ್ಧ ವಂಚನೆ ಪ್ರಕರಣವನ್ನು ದಾಖಲಿಸಿದ್ದಾರೆ.
ಮಯಾಂಕ್ ಗೋಯಲ್ ತನಗೆ 5 ಕೋಟಿ 43 ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂದು ನಟ ಮಹೇಶ್ ಠಾಕೂರ್ ಆರೋಪಿಸಿದ್ದಾರೆ. ಈ ಸಂಬಂಧ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 420 ಮತ್ತು 406 ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವರದಿಗಳ ಪ್ರಕಾರ, ಆಸ್ತಿ ವಿವಾದ ನಡೆಯುತ್ತಿದೆ ಮತ್ತು ನ್ಯಾಯಾಲಯದ ವಿಚಾರಣೆಗಳು, ಸಾಕ್ಷ್ಯಗಳು ಮತ್ತು ದಾಖಲೆಗಳ ಹೆಸರಿನಲ್ಲಿ ವಂಚಿಸಲಾಗಿದೆ ಎಂದು ಮಹೇಶ್ ಠಾಕೂರ್ ಪೊಲೀಸರಿಗೆ ತಿಳಿಸಿದ್ದಾರೆ.
ಮಹೇಶ್ ಠಾಕೂರ್ ಅವರು ಚಲನಚಿತ್ರಗಳು ಮತ್ತು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಹಮ್ ಸಾಥ್ ಸಾಥ್ ಹೇ, ಹಮ್ ಹೋಗಯೇ ಆಪ್ ಕೆ, ತುಮ್ ವೀರ್ ಹೋ, ಸತ್ಯ 2, ಜೈ ಹೋ, ಕಾರ್ಲೆ ಪ್ಯಾರ್ ಕರ್ಲೆ, ಹಮ್ಕೋ ದೀವಾನಾ ಕರ್ ಗಯೇ, ಆಕಾಶ್ ವಾಣಿ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: ಸಿನಿಮಾ ಐಕಾನ್ ಅಶೋಕ್ ಕುಮಾರ್ ಪುತ್ರಿ ಭಾರತಿ ಜಾಫೆರಿ ನಿಧನ