ಬಾಲಿವುಡ್ ದೂದ್ಪೇಡಾ ಕಾರ್ತಿಕ್ ಆರ್ಯನ್ ಮತ್ತು ನಟಿ ಕೃತಿ ಸನೊನ್ ಅಭಿನಯದ ಶೆಹಜಾದಾ (Shehzada) ಸಿನಿಮಾ ಇಂದು ತೆರೆಕಂಡಿದೆ. ಕಾರ್ತಿಕ್ ಅವರ ಈ ಹಿಂದಿನ ಚಿತ್ರ ಭೂಲ್ ಭುಲೈಯ್ಯಾ 2 ಸೂಪರ್ ಹಿಟ್ ಆಗಿತ್ತು. ಅನೀಸ್ ಬಾಜ್ಮಿ ಅವರ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಹಾರರ್ ಕಾಮಿಡಿ ಚಿತ್ರ ಮೊದಲ ದಿನ 14.11 ಕೋಟಿ ರೂ.ಗಳೊಂದಿಗೆ ಮುನ್ನಡೆಯಿತು. ಆದರೆ ಕಾರ್ತಿಕ್ ಆರ್ಯನ್ ನಟನೆಯ ಶೆಹಜಾದಾ ನಿರೀಕ್ಷೆ ತಲುಪಿಲ್ಲ. ಹಾಗಂತ ಸಿನಿಮಾ ಹಿನ್ನೆಡೆ ಕೂಡ ಕಂಡಿಲ್ಲ. ನಿಧಾನಗತಿಯಲ್ಲಿ ಯಶಸ್ಸು ಸಾಧಿಸುವ ಸೂಚನೆ ಕೊಟ್ಟಿದೆ.
-
‘ANT MAN 3’, ‘SHEHZADA’, ‘PATHAAN’ ADVANCE BOOKING STATUS…
— taran adarsh (@taran_adarsh) February 17, 2023 " class="align-text-top noRightClick twitterSection" data="
NOTE: Tickets sold for *Friday* at NATIONAL CHAINS [#PVR, #INOX and #Cinepolis]… Update: Thursday, 11 pm…
Total…
⭐️ #AntManAndTheWasp: 1,06,500
⭐️ #Shehzada: 25,825
⭐️ #Pathaan [Week 4; Friday]: 17,400 pic.twitter.com/CEA87bP4ln
">‘ANT MAN 3’, ‘SHEHZADA’, ‘PATHAAN’ ADVANCE BOOKING STATUS…
— taran adarsh (@taran_adarsh) February 17, 2023
NOTE: Tickets sold for *Friday* at NATIONAL CHAINS [#PVR, #INOX and #Cinepolis]… Update: Thursday, 11 pm…
Total…
⭐️ #AntManAndTheWasp: 1,06,500
⭐️ #Shehzada: 25,825
⭐️ #Pathaan [Week 4; Friday]: 17,400 pic.twitter.com/CEA87bP4ln‘ANT MAN 3’, ‘SHEHZADA’, ‘PATHAAN’ ADVANCE BOOKING STATUS…
— taran adarsh (@taran_adarsh) February 17, 2023
NOTE: Tickets sold for *Friday* at NATIONAL CHAINS [#PVR, #INOX and #Cinepolis]… Update: Thursday, 11 pm…
Total…
⭐️ #AntManAndTheWasp: 1,06,500
⭐️ #Shehzada: 25,825
⭐️ #Pathaan [Week 4; Friday]: 17,400 pic.twitter.com/CEA87bP4ln
ಶೆಹಜಾದ ತಯಾರಕರು ಚಿತ್ರ ಬಿಡುಗಡೆಗೂ ಐದು ದಿನಗಳ ಮೊದಲು ಚಿತ್ರದ ಮುಂಗಡ ಬುಕ್ಕಿಂಗ್ ಪ್ರಕ್ರಿಯ ಆರಂಭಿಸಿದರು. ಕಾರ್ತಿಕ್ ಆರ್ಯನ್ ಅವರ ಈ ಚಿತ್ರವು ಶಾರುಖ್ ಖಾನ್ ಅವರ ಪಠಾನ್ ಮತ್ತು ಹಾಲಿವುಡ್ ಚಿತ್ರ ಆಂಟ್ - ಮ್ಯಾನ್ ಅಂಡ್ ದಿ ವಾಸ್ಪ್: ಕ್ವಾಂಟುಮೇನಿಯಾ ಸಿನಿಮಾಗಳೊಂದಿಗೆ ಕಠಿಣ ಸ್ಪರ್ಧೆ ಎದುರಿಸುತ್ತಿದೆ. ಇದು ಇಂದು ಭಾರತೀಯ ತೆರೆಗೆ ಬಂದಿತು. PVR, INOX ಸೇರಿದಂತೆ ಚಿತ್ರಮಂದಿರಗಳಲ್ಲಿ ಶೆಹಜಾದಾ ಚಿತ್ರದ ಮುಂಗಡ ಬುಕ್ಕಿಂಗ್ ಸಂಖ್ಯೆ 25,825 ಆಗಿದ್ದರೆ, ಆಂಟ್-ಮ್ಯಾನ್ ಅಂಡ್ ದಿ ವಾಸ್ಪ್: ಕ್ವಾಂಟುಮೇನಿಯಾ ಸಿನಿಮಾದ ಮುಂಗಡ ಬುಕ್ಕಿಂಗ್ ಸಂಖ್ಯೆ 1,06,500 ಟಿಕೆಟ್‌ಗಳನ್ನು ಮಾರಾಟ ಮಾಡಿದೆ ಎಂದು ಸಿನಿಮಾ ವ್ಯವಹಾರ ವಿಶ್ಲೇಷಕ ತರಣ್ ಆದರ್ಶ್ ಮಾಹಿತಿ ಹಂಚಿಕೊಂಡಿದ್ದಾರೆ.
-
‘SHEHZADA’ AT BURJ KHALIFA… #KartikAaryan lights up the iconic #BurjKhalifa in #Dubai with the teaser of the mass-family entertainer #Shehzada… The much-awaited film arrives in *cinemas* tomorrow. pic.twitter.com/VvlacymWeE
— taran adarsh (@taran_adarsh) February 16, 2023 " class="align-text-top noRightClick twitterSection" data="
">‘SHEHZADA’ AT BURJ KHALIFA… #KartikAaryan lights up the iconic #BurjKhalifa in #Dubai with the teaser of the mass-family entertainer #Shehzada… The much-awaited film arrives in *cinemas* tomorrow. pic.twitter.com/VvlacymWeE
— taran adarsh (@taran_adarsh) February 16, 2023‘SHEHZADA’ AT BURJ KHALIFA… #KartikAaryan lights up the iconic #BurjKhalifa in #Dubai with the teaser of the mass-family entertainer #Shehzada… The much-awaited film arrives in *cinemas* tomorrow. pic.twitter.com/VvlacymWeE
— taran adarsh (@taran_adarsh) February 16, 2023
ಶೆಹಜಾದಾ ಚಿತ್ರದ ಮೊದಲ ದಿನದ ಕಲೆಕ್ಷನ್ ಸುಮಾರು 6 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಆದರೆ ಅಧಿಕೃತ ಅಂಕಿ - ಅಂಶಗಳು ಇನ್ನಷ್ಟೇ ಹೊರಬೀಳಬೇಕಾಗಿದೆ. ಶೆಹಜಾದಾ ಚಿತ್ರದ ಮೊದಲ ದಿನದ ವ್ಯವಹಾರ ಭೂಲ್ ಭುಲೈಯ್ಯಾ 2ಕ್ಕಿಂತ ಕಡಿಮೆಯಾಗಿದೆ ಎಂದು ಹೇಳಲಾಗುತ್ತದೆ. ಭೂಲ್ ಭುಲೈಯ್ಯಾ 2 ಮೊದಲ ದಿನ 14.11 ಕೋಟಿ ರೂ. ಗಳಿಸಿತ್ತು. ಈ ಶೆಹಜಾದಾ ಚಿತ್ರದ ಬಗ್ಗೆ ಸಕಾರಾತ್ಮಕ ಸ್ಪಂದನೆ, ನಟ ಕಾರ್ತಿಕ್ ಆರ್ಯನ್ ಅವರ ಕ್ರೇಜ್ ಮತ್ತು ಅವರ ಕೊನೆಯ ಚಿತ್ರದ ಯಶಸ್ಸಿನ ಹೊರತಾಗಿಯೂ ಶೆಹಜಾದಾ ಆರಂಭಿಕ ಬಾಕ್ಸ್ ಆಫೀಸ್ ಕಲೆಕ್ಷನ್ ಕಲೆಕ್ಷನ್ ಕೊಂಚ ಮಂಕಾಗಿರುವಂತೆ ಗೋಚರಿಸುತ್ತಿದೆ. ಆದಾಗ್ಯೂ, ಬಾಲಿವುಡ್ ದೂದ್ಪೇಡಾ ಕಾರ್ತಿಕ್ ಆರ್ಯನ್ ಅಭಿಮಾನಿಗಳು ತಮ್ಮ ಮೆಚ್ಚಿನ ನಟನಿಗೆ ಮತ್ತೊಂದು ಯಶಸ್ವಿ ಪ್ರವಾಸಕ್ಕಾಗಿ ಆಶಿಸುತ್ತಿದ್ದಾರೆ.
ಚಿತ್ರದ ಯಶಸ್ವಿಗೆ ಬಾಲಿವುಡ್ ರೈಸಿಂಗ್ ಸ್ಟಾರ್ ಕಾರ್ತಿಕ್ ಆರ್ಯನ್ ಪ್ರಮುಖ ನಗರಗಳಲ್ಲಿ ವ್ಯಾಪಕ ಪ್ರಚಾರ ಮಾಡಿದ್ದರು. ಅವರು ದುಬೈಗೆ ಸಹ ಭೇಟಿ ಕೊಟ್ಟಿದ್ದರು. ಜಗತ್ತಿನ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ ಶೆಹಜಾದಾ ಟ್ರೈಲರ್ ಅನ್ನು ಪ್ರದರ್ಶಿಸಲಾಗಿತ್ತು. ಯುಎಇಯಲ್ಲಿ ನಡೆದ ಶೆಹಜಾದ ಪ್ರಚಾರ ಕಾರ್ಯಕ್ರಮದಲ್ಲಿ ನಟನಿಗೆ ಸಕಾರಾತ್ಮಕ ಸ್ಪಂದನೆ ಸಿಕ್ಕಿತ್ತು.
ಇದನ್ನೂ ಓದಿ: ಬಜೆಟ್ 2023: ಶಂಕರ್ನಾಗ್ ಹೆಸರಲ್ಲಿ ಆಟೋ ನಿಲ್ದಾಣ.. ಮಿನಿ ಚಿತ್ರಮಂದಿರಗಳ ನಿರ್ಮಾಣ!
ಮೊದಲೇ ವರದಿ ಮಾಡಿದಂತೆ, ಶೆಹಜಾದಾ ಚಿತ್ರ ಸೌತ್ ಸೂಪರ್ಸ್ಟಾರ್ ಅಲ್ಲು ಅರ್ಜುನ್ ಮತ್ತು ಪೂಜಾ ಹೆಗ್ಡೆ ಅಭಿನಯದ ಸೂಪರ್‌ಹಿಟ್ ತೆಲುಗು ಚಿತ್ರ 'ಅಲ ವೈಕುಂಠಪುರಮುಲೋ'ದ ಅಧಿಕೃತ ರಿಮೇಕ್ ಆಗಿದೆ. ಶೆಹಜಾದ ಯಶಸ್ಸು ಕಾರ್ತಿಕ್ ಅವರ ವೃತ್ತಿ ಜೀವನದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಸಹಾಯ ಆಗಲಿದೆ. ಜೊತೆಗೆ ನಿರ್ಮಾಪಕನಾಗಿ ನೆಲೆಯೂರಲು ಕೂಡ ಪ್ರೋತ್ಸಾಹ ಸಿಕ್ಕಂತಾಗುತ್ತದೆ.
ಇದನ್ನೂ ಓದಿ: ಲವ್ ಲೈಫ್ ಬಗ್ಗೆ ಬಾಲಿವುಡ್ ದೂದ್ಪೇಡಾ ಕಾರ್ತಿಕ್ ಆರ್ಯನ್ ನಿರೀಕ್ಷೆಗಳೇನು?
ರೋಹಿತ್ ಧವನ್ ನಿರ್ದೇಶನದ ಈ ಚಿತ್ರವು ದೇಶದಾದ್ಯಂತ 3,000ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಬಿಡುಗಡೆ ಅಗಿದೆ. ಪಠಾಣ್ ಸಿನಿಮಾ ಮೂಲಕ ಸಕ್ಸಸ್ ಟ್ರ್ಯಾಕ್ಗೆ ಬಾಲಿವುಡ್ ಕಮ್ ಬ್ಯಾಕ್ ಮಾಡಿದ್ದು, ಶೆಹಜಾದಾ ಸಿನಿಮಾ ಎಷ್ಟರ ಮಟ್ಟಿಗೆ ಸಕ್ಸಸ್ ತಂದುಕೊಡುತ್ತೆ ಅನ್ನೋದು ಶೀಘ್ರದಲ್ಲೇ ಗೊತ್ತಾಗಲಿದೆ.