ETV Bharat / entertainment

ಬಹುಭಾಷಾ ನಟ ಕಮಲ್​ ಹಾಸನ್​ ಆಸ್ಪತ್ರೆಗೆ ದಾಖಲು - Kamal Haasan admitted to private hospital

ಮಕ್ಕಳ್ ನೀದಿ ಮೈಯಂ ಎಂಬ ಪಕ್ಷದ ಮೂಲಕ ರಾಜಕೀಯದಲ್ಲಿಯೂ ತೊಡಗಿಸಿಕೊಂಡಿರುವ ಬಹುಭಾಷಾ ನಟ ಕಮಲ್​ ಹಾಸನ್​ ಅವರು ಜ್ವರದಿಂದ ಬಳಲುತ್ತಿದ್ದು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

kamal haasan
ಕಮಲ್​ ಹಾಸನ್
author img

By

Published : Nov 24, 2022, 9:58 AM IST

ಚೆನ್ನೈ: ಹಿರಿಯ ನಟ ಮತ್ತು ಮಕ್ಕಳ್​ ನೀದಿ ಮೈಯಂ ಪಕ್ಷದ ಅಧ್ಯಕ್ಷ ಕಮಲ್ ಹಾಸನ್ ಅವರ ಆರೋಗ್ಯದಲ್ಲಿ ಕೊಂಚ ಏರುಪೇರಾಗಿದ್ದು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಿನ್ನೆ ಹೈದರಾಬಾದ್​ಗೆ ತೆರಳಿದ್ದ ಕಮಲ್ ಹಾಸನ್ ಸಂಜೆಯ ವೇಳೆಗೆ ಚೆನ್ನೈಗೆ ವಾಪಸ್​ ಆಗಿದ್ದರು. ಈ ಸಂದರ್ಭದಲ್ಲಿ ಸ್ವಲ್ಪ ಶೀತ ಮತ್ತು ಜ್ವರ ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರ ಸಲಹೆಯಂತೆ ಇಂದು ಮಧ್ಯಾಹ್ನ ಡಿಸ್ಚಾರ್ಜ್​ ಆಗುವ ಸಾಧ್ಯತೆಯಿದೆ.

ಇದನ್ನೂ ಓದಿ: ಕಮಲ್​​ ಹಾಸನ್​​​ ಇಂಡಿಯನ್​​-2 ಚಿತ್ರದ ಶೂಟಿಂಗ್​​​​​​ ವೇಳೆ ಕುಸಿದು ಬಿದ್ದ ಕ್ರೇನ್‌: ಸ್ಥಳದಲ್ಲೇ ಮೂವರ ದುರ್ಮರಣ

ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಶಂಕರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಇಂಡಿಯನ್​-2 ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಕಮಲ್ ಹಾಸನ್‌ ನಿರತರಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.