ಖ್ಯಾತ ಸಿನಿಮಾ ನಿರ್ದೇಶಕ ಎಸ್.ಎಸ್.ರಾಜಮೌಳಿ ಆ್ಯಕ್ಷನ್ ಕಟ್ ಹೇಳಿರುವ ಆರ್ಆರ್ಆರ್ ಸಿನಿಮಾ ಭಾರತೀಯ ಚಿತ್ರರಂಗ ಮಾತ್ರವಲ್ಲದೇ ವಿಶ್ವಮಟ್ಟದಲ್ಲಿ ಸದ್ದು ಮಾಡಿದೆ. ಸೌತ್ ಸೂಪರ್ ಸ್ಟಾರ್ಗಳಾದ ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ಅವರ ಅಮೋಘ ಅಭಿನಯಕ್ಕೆ ಹೆಚ್ಚಿನ ಸಂಖ್ಯೆಯ ಸಿನಿಪ್ರಿಯರು ಮನಸೋತಿದ್ದಾರೆ. ಅವರ ನಟನಾ ಕೌಶಲ್ಯವನ್ನು ಹಾಡಿ ಹೊಗಳಿದ್ದಾರೆ. ಈಗಾಗಲೇ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಆರ್ಆರ್ಆರ್ ತಂಡ ಆಸ್ಕರ್ ಅಂಗಳದಲ್ಲಿರುವುದು ನಮಗೆಲ್ಲರಿಗೂ ತಿಳಿದಿರುವ ವಿಚಾರ.
ಆಸ್ಕರ್ ಪ್ರಶಸ್ತಿ ಪಟ್ಟಿಯಲ್ಲಿ ಜೂನಿಯರ್ ಎನ್ಟಿಆರ್? ವಿಶ್ವದಲ್ಲೇ ಭಾರತೀಯ ಚಿತ್ರರಂಗದ ಕೀರ್ತಿ ಹೆಚ್ಚಿಸಿರುವ ಆರ್ಆರ್ಆರ್ ಸಿನಿಮಾ ಇತ್ತೀಚೆಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಗೆದ್ದು ಬೀಗಿತ್ತು. ಇದೀಗ ಈ ಚಿತ್ರತಂಡದ ಕಣ್ಣುಗಳು ಆಸ್ಕರ್ ಪ್ರಶಸ್ತಿ ಮೇಲಿದೆ. ಜೂನಿಯರ್ ಎನ್ಟಿಆರ್ ಆಸ್ಕರ್ ಪ್ರಶಸ್ತಿ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಭಾರತೀಯ ಚಿತ್ರರಂಗಕ್ಕೆ ಹೆಮ್ಮಯ ವಿಷಯ.
-
Bheem deserves #global #NTR𓃵 #NTRForOscars #NTRGoesGlobal @TrollNTRHaterzz @NTRTheStalwart @Fukkard @USATODAY @telugufilmnagar @IetsOTT
— VijayNtr 9999 (@vijayntr99999) January 20, 2023 " class="align-text-top noRightClick twitterSection" data="
Only one name overall @tarak9999 #Globalstar 🔥 #JaiNTR ✊️ pic.twitter.com/fuUInoH1z9
">Bheem deserves #global #NTR𓃵 #NTRForOscars #NTRGoesGlobal @TrollNTRHaterzz @NTRTheStalwart @Fukkard @USATODAY @telugufilmnagar @IetsOTT
— VijayNtr 9999 (@vijayntr99999) January 20, 2023
Only one name overall @tarak9999 #Globalstar 🔥 #JaiNTR ✊️ pic.twitter.com/fuUInoH1z9Bheem deserves #global #NTR𓃵 #NTRForOscars #NTRGoesGlobal @TrollNTRHaterzz @NTRTheStalwart @Fukkard @USATODAY @telugufilmnagar @IetsOTT
— VijayNtr 9999 (@vijayntr99999) January 20, 2023
Only one name overall @tarak9999 #Globalstar 🔥 #JaiNTR ✊️ pic.twitter.com/fuUInoH1z9
ಜೂನಿಯರ್ ಎನ್ಟಿಆರ್ ಅಭಿನಯಕ್ಕೆ ಮೆಚ್ಚುಗೆ.. ಸೂಪರ್ ಹಿಟ್ ಆರ್ಆರ್ಆರ್ ಸಿನಿಮಾದಲ್ಲಿ ಭೀಮ್ ಪಾತ್ರದಲ್ಲಿ ಜೂನಿಯರ್ ಎನ್ಟಿಆರ್ ಅಬ್ಬರಿಸಿದ್ದರು. ಈ ಪಾತ್ರದ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ. ಅವರ ಅಭಿನಯಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಆಸ್ಕರ್ ಪ್ರಶಸ್ತಿ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದರೆ ಎಲ್ಲರಿಗಿಂತ ಹೆಚ್ಚು ಖುಷಿ ಪಡೋದು ಅವರ ಅಭಿಮಾನಿಗಳೇ ಅಲ್ವಾ?. ನಮ್ಮ ದೇಶದ ನಟ ಆಸ್ಕರ್ಗೆ ಆಯ್ಕೆ ಆಗಬೇಕು, ಪ್ರಶಸ್ತಿ ಪಡೆದು ಭಾರತದ ಕೀರ್ತಿ ಹೆಚ್ಚಿಸಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಲ್ಲದೇ ಅಮೆರಿಕದ ಪತ್ರಿಕೆಯೊಂದು ಕೂಡ ಆಸ್ಕರ್ ಪ್ರಶಸ್ತಿ ಪಟ್ಟಿಯಲ್ಲಿ ಜೂನಿಯರ್ ಎನ್ಟಿಆರ್ ಇರುವುದು ಬಹುತೇಕ ಖಚಿತ ಎಂದು ವರದಿ ಮಾಡಿದೆ.
-
One and Only "Man of Masses" in this Generation @tarak9999 ❤️🔥😎.#NTRForOscars #NTRGoesGlobal@tarak9999 #ManOfMassesNTR pic.twitter.com/Gcrnapkpsi
— 🦋 (@_Kavya_18_) January 20, 2023 " class="align-text-top noRightClick twitterSection" data="
">One and Only "Man of Masses" in this Generation @tarak9999 ❤️🔥😎.#NTRForOscars #NTRGoesGlobal@tarak9999 #ManOfMassesNTR pic.twitter.com/Gcrnapkpsi
— 🦋 (@_Kavya_18_) January 20, 2023One and Only "Man of Masses" in this Generation @tarak9999 ❤️🔥😎.#NTRForOscars #NTRGoesGlobal@tarak9999 #ManOfMassesNTR pic.twitter.com/Gcrnapkpsi
— 🦋 (@_Kavya_18_) January 20, 2023
ಇದನ್ನೂ ಓದಿ: ಇಂದು ಸುಶಾಂತ್ ಸಿಂಗ್ ಜನ್ಮದಿನ.. ಬಾಲಿವುಡ್ ಧೋನಿ ನೆನಪು ಜೀವಂತ!
ಆರ್ಆರ್ಆರ್ ಯಶಸ್ಸು.. ಸೌತ್ ಸಿನಿಮಾ ಇಂಡಸ್ಟ್ರಿಯ ಸೂಪರ್ ಸ್ಟಾರ್ಗಳಾದ ಜೂನಿಯರ್ ಎನ್ಟಿಆರ್ ಹಾಗು ರಾಮ್ ಚರಣ್ ಜೊತೆಗೆ ಬಾಲಿವುಡ್ ಬಹುಬೇಡಿಕೆ ನಟಿ ಆಲಿಯಾ ಭಟ್ ನಟನೆಯ ಆರ್ಅರ್ಆರ್ ಸಿನಿಮಾ ಕಳೆದ ವರ್ಷ ಬಿಡುಗಡೆ ಆಗಿ ಧೂಳೆಬ್ಬಿಸಿತ್ತು. ಎಸ್.ಎಸ್.ರಾಜಮೌಳಿ ಅವರ ನಿರ್ದೇಶನಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಯಿತು. ಬಾಕ್ಸ್ ಆಫೀಸ್ನಲ್ಲಿ 1,200 ಕೊಟಿ ರೂ.ಗೂ ಅಧಿಕ ಗಳಿಗೆ ಮಾಡಿದ ಸಿನಿಮಾ ಎಂಬ ಹೆಗ್ಗಳಿಕೆ ಈ ಚಿತ್ರದ್ದು. ಇತ್ತೀಚೆಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಮುಡಿಗೇರಿಸಿಕೊಂಡು ಭಾರತೀಯ ಚಿತ್ರರಂಗದ ಹಿರಿಮೆ ಹೆಚ್ಚಿಸಿತ್ತು. ಹೌದು, ಕೆಲ ದಿನಗಳ ಹಿಂದೆ ಈ ಸಿನಿಮಾದ ನಾಟು ನಾಟು ಹಾಡು ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ 2023ರ ಅತ್ಯುತ್ತಮ ಮೂಲ (ಸ್ವತಂತ್ರ ರಚನೆ) ಹಾಡು ಪ್ರಶಸ್ತಿ ಪಡೆದುಕೊಂಡಿತ್ತು.
- " class="align-text-top noRightClick twitterSection" data="">
ಇದನ್ನೂ ಓದಿ: ರಿಲೀಸ್ಗೂ ಮುನ್ನ ಪಠಾಣ್ ದಾಖಲೆ: ಒಂದೇ ದಿನದಲ್ಲಿ 15 ಕೋಟಿ ರೂ. ವ್ಯವಹಾರ!
BAFTA 2023 ಪ್ರಶಸ್ತಿಗೆ ಆಯ್ಕೆ.. ಈಗಾಗಲೇ ದೇಶ ಮತ್ತು ವಿದೇಶಗಳಲ್ಲಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಆರ್ಆರ್ಆರ್ ಸಿನಿಮಾ ಮತ್ತಷ್ಟು ಪ್ರಶಸ್ತಿಗಳಿಗೆ ನಾಮ ನಿರ್ದೇಶನಗೊಂಡಿದೆ. ಪ್ರತಿಷ್ಠಿತ BAFTA ಪ್ರಶಸ್ತಿಗೆ ಆಯ್ಕೆ ಆಗಿದೆ. BAFTA 2023 ಪ್ರಶಸ್ತಿಗೆ ರೇಸ್‌ನಲ್ಲಿರುವ ಚಲನಚಿತ್ರಗಳಲ್ಲಿ ಆರ್ಆರ್ಆರ್ ಕೂಡ ಒಂದು.
ಇದನ್ನೂ ಓದಿ: ದೀಪಿಕಾ ಪಡುಕೋಣೆ ಎಲ್ಲ ರೀತಿಯಲ್ಲೂ ನಂಬರ್1: ಸಾರಾ ಅಲಿ ಖಾನ್