ETV Bharat / entertainment

ವೀರ ಸಿಂಹ ರೆಡ್ಡಿ ಚಿತ್ರ ತಂಡಕ್ಕೆ ಧನ್ಯವಾದ ಅರ್ಪಿಸಿದ ದುನಿಯಾ ವಿಜಯ್

ಜ. 20ರಂದು ದುನಿಯಾ ವಿಜಯ್​ ಬರ್ತಡೇ.. ಕುಂಬಾರನಹಳ್ಳಿಯಲ್ಲಿರುವ ತಾಯಿ ಸಮಾಧಿ ಬಳಿ ಜನ್ಮದಿನ ಆಚರಿಸಿಕೊಳ್ಳುವುದಾಗಿ ಹೇಳಿದ ನಟ- ವೀರ ಸಿಂಹ ರೆಡ್ಡಿ ಚಿತ್ರ ತಂಡಕ್ಕೆ ಧನ್ಯವಾದ ತಿಳಿಸಿದ ವಿಜಯ್​

actor duniya vijay
ನಟ ದುನಿಯಾ ವಿಜಯ್
author img

By

Published : Jan 8, 2023, 4:51 PM IST

ನಟ ದುನಿಯಾ ವಿಜಯ್

ಆನೇಕಲ್(ಬೆಂಗಳೂರು): ಬಹು ವರ್ಷಗಳಿಂದ ಕನ್ನಡ ಸಿನಿಮಾಗಳಲ್ಲಿ ಗುರುತಿಸಿಕೊಂಡು ತಮ್ಮದೇ ವಿಭಿನ್ನ ಐಡೆಂಟಿಟಿ ಹೊಂದಿರುವ ನಟ ದುನಿಯಾ ವಿಜಯ್. ಸ್ಯಾಂಡಲ್​ವುಡ್ ಮತ್ತು ಟಾಲಿವುಡ್​​ ಸಿನಿಮಾಗಳಲ್ಲಿ ನಟ ದುನಿಯಾ ವಿಜಯ್ ಬ್ಯುಸಿಯಾಗಿದ್ದಾರೆ. ಜನವರಿ 20 ಅವರ ಹುಟ್ಟುಹಬ್ಬ. ಈ ಬಾರಿ ತಾಯಿಯ ಸಮಾಧಿ ಬಳಿ ಹುಟ್ಟುಹಬ್ಬ ಆಚರಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಪ್ರತಿ ವರ್ಷ ತಾಯಿ ತಂದೆಯೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದೆ. ಕೋವಿಡ್​ ಬಳಿಕ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಈ ಬಾರಿ ಇದೇ 20ರಂದು ಆನೇಕಲ್ ಕುಂಬಾರನಹಳ್ಳಿ ಗ್ರಾಮದಲ್ಲಿರುವ ತಾಯಿಯ ಸಮಾಧಿ ಬಳಿ ಬರ್ತಡೇ ಆಚರಿಸಿಕೊಳ್ಳಲಿದ್ದೇನೆ. ಇಡೀ ಚಿತ್ರರಂಗದ ನೆಚ್ಚಿನ ಸಹೋದ್ಯೋಗಿಗಳು, ಕರ್ನಾಟಕದ ಅಭಿಮಾನಿಗಳು ಒಟ್ಟಾಗಿ ಊಟ ಮಾಡುವ ಕಾರ್ಯಕ್ರಮವನ್ನು ಏರ್ಪಡಿಸುವುದಾಗಿ ತಿಳಿಸಿದರು.

ವೀರ ಸಿಂಹ ರೆಡ್ಡಿ ಚಿತ್ರ ತಂಡಕ್ಕೆ ಧನ್ಯವಾದ.. ಇನ್ನು, ತೆಲುಗಿನ ನಂದಮೂರಿ ಬಾಲಕೃಷ್ಣ ನಟನೆಯ 'ವೀರಸಿಂಹರೆಡ್ಡಿ' ಸಿನಿಮಾದಲ್ಲಿ ಖಳನಾಯಕನ ಪಾತ್ರ ಕೊಟ್ಟ ಗೋಪಿಚಂದ್ ಹಾಗು ಬಾಲಕೃಷ್ಣರಿಗೆ ಇದೇ ವೇಳೆ ದುನಿಯಾ ವಿಜಯ್​ ಧನ್ಯವಾದ ತಿಳಿಸಿದರು. ವೀರ ಸಿಂಹ ರೆಡ್ಡಿ ಸಿನಿಮಾದಲ್ಲಿ ಖಡಕ್ ವಿಲನ್‌ ಪಾತ್ರ ಮಾಡಿರೋ ವಿಜಯ್ ಲುಕ್ ಕೂಡ ಬಹಳ ವಿಭಿನ್ನವಾಗಿದ್ದು, ಅವರ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ. 'ವೀರ ಸಿಂಹ ರೆಡ್ಡಿ' ಸಿನಿಮಾವು ಜನವರಿ 12ರಂದು ಅದ್ಧೂರಿಯಾಗಿ ತೆರೆಗೆ ಬರಲಿದೆ. ಈ ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ನಿರ್ಮಾಣ ಮಾಡಿದ್ದು, ಶ್ರುತಿ ಹಾಸನ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ವರಲಕ್ಷ್ಮೀ ಶರತ್ ಕುಮಾರ್, ಹನಿ ರೋಸ್, ಲಾಲ್‌, ರವಿಶಂಕರ್, 'ಕೆಜಿಎಫ್‌' ಅವಿನಾಶ್ ಸೇರಿದಂತೆ ಸಾಕಷ್ಟು ಮಂದಿ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

ವೀರ ಸಿಂಹ ರೆಡ್ಡಿ ಬಿಡುಗಡೆ ಹೊಸ್ತಿಲಿನಲ್ಲಿದೆ. ಆ ಟಾಲಿವುಡ್​ ತಂಡ ತೋರಿದ ಪ್ರೀತಿ ಅಪಾರ. ಅವರಿಗೆ ಕನ್ನಡ ಮಾಧ್ಯಮಗಳ ಮೂಲಕ ಧನ್ಯವಾದ ತಿಳಿಸಲು ಇಷ್ಟಪಡುತ್ತೇನೆ. ವೀರ ಸಿಂಹ ರೆಡ್ಡಿ ಖಂಡಿತವಾಗಿಯೂ ಸೂಪರ್​ ಹಿಟ್ ಆಗಲಿದೆ. ಗೋಪಿಚಂದ್ ಅಷ್ಟರ ಮಟ್ಟಿಗೆ ನಿರ್ದೇಶನ ಮಾಡಿದ್ದಾರೆ. ಬಾಲಯ್ಯ ಅವರು ಚಿತ್ರದ ಶಕ್ತಿ ಎಂದು ವಿಜಯ್ ತಿಳಿಸಿದರು.

ಹಳೇ ಕೇಸ್ ರೀ ಓಪನ್: 2018ರಲ್ಲಿ ಪಾನಿಪುರಿ ಕಿಟ್ಟಿ ಮತ್ತು ದುನಿಯಾ ವಿಜಯ್ ಕಾರ್ಯಕ್ರಮವೊಂದರಲ್ಲಿ ಗಲಾಟೆ ಮಾಡಿಕೊಂಡಿದ್ದರು. ಇಬ್ಬರೂ ಕೈ ಕೈ ಮಿಲಾಯಿಸಿಕೊಂಡಿದ್ದರು. ವಸಂತನಗರ ಅಂಬೇಡ್ಕರ್ ಭವನದಲ್ಲಿ ನಡೆದಿದ್ದ ಬಾಡಿ ಬಿಲ್ಡ್ ಸ್ಪರ್ಧೆಯಲ್ಲಿ ಪಾನಿಪುರಿ ಕಿಟ್ಟಿ ಟೀಂ ಮತ್ತು ದುನಿಯಾ ವಿಜಯ್ ಟೀಂಗೂ ಗಲಾಟೆ‌ ನಡೆದಿತ್ತು. ಈ ಹಳೇ ಗಲಾಟೆ ಕೇಸ್ ರೀ ಓಪನ್ ಆಗಿದೆ.

ಇದನ್ನೂ ಓದಿ: ಕಲಾ ಮಾಂತ್ರಿಕ ಜಾವೇದ್ ಅಖ್ತರ್ ಜೊತೆ ಉರ್ಫಿ ಜಾವೇದ್ ಫೋಟೋ

ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಪಾನಿಪುರಿ ಕಿಟ್ಟಿ ಸಹೋದರ ಮಾರುತಿ ಗೌಡ ಅವರನ್ನು ಕಾರಲ್ಲಿ ಕರೆದೊಯ್ದಿದ್ದ ನಟ ವಿಜಯ್ ಅವರು ಹಿಗ್ಗಾಮುಗ್ಗ ಥಳಿಸಿದ್ದರು ಎಂಬ ಆರೋಪವಿತ್ತು. ನಂತರ ಎರಡೂ ಕಡೆ ಕೌಂಟರ್ ಕಂಪ್ಲೆಂಟ್ ದಾಖಲಾಗಿತ್ತು. ತನ್ನ ಪುತ್ ಸಾಮ್ರಾಟ್​ನಿಗೆ ಬೈದು ಬೆದರಿಕೆ ಹಾಕಿದ್ದರು ಎಂದು‌ ನಟ ವಿಜಯ್ ಸಹ ದೂರು ನೀಡಿದ್ದರು. ಮತ್ತೊಂದೆಡೆ ಪಾನಿಪುರಿ ಕಿಟ್ಟಿ ತನ್ನ ತಮ್ಮನಿಗೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆಂದು ವಿಜಯ್ ಮೇಲೆ ಕೊಲೆ ಯತ್ನದ ಕೇಸ್ ದಾಖಲಿಸಿದ್ದರು. ಸದ್ಯ ವಿಜಯ್ ಮೇಲಿರುವ ಕೇಸ್ ಕೋರ್ಟ್​ನಲ್ಲಿ ನಡೆಯುತ್ತಿದೆ. ಪಾನಿಪುರಿ ಕಿಟ್ಟಿ ಮೇಲೆ ನೀಡಿದ್ದ ದೂರು ಕ್ಲೋಸ್ ಆಗಿತ್ತು. ಇದನ್ನು ಪ್ರಶ್ನಿಸಿ ವಿಜಯ್ ಕೋರ್ಟ್ ಮೊರೆ ಹೋಗಿದ್ದರು. ವಿಜಯ್ ಮನವಿಯನ್ನು ಪುರಸ್ಕರಿಸಿರುವ ಕೋರ್ಟ್ ಇನ್ನೊಮ್ಮೆ ಕೇಸ್ ತನಿಖೆ ನಡೆಸಲು ಸೂಚನೆ ನೀಡಿದೆ. ಅದರಂತೆ ಪಾನಿಪುರಿ ಕಿಟ್ಟಿ ಮತ್ತು ಮಾರುತಿ ಗೌಡ ಮೇಲೆ ಹೈಗ್ರೌಂಡ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ‌.

ಇದನ್ನೂ ಓದಿ: ಇಂಡಿಯನ್ ಪೊಲೀಸ್ ಫೋರ್ಸ್: ಶೂಟಿಂಗ್​ ಸೆಟ್​ಗೆ ವಾಪಸಾದ ನಿರ್ದೇಶಕ ರೋಹಿತ್ ಶೆಟ್ಟಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.