ಬೆಂಗಳೂರು: ಯುವ ನಟಿ ಚೇತನಾ ರಾಜ್ ನಿಧನಕ್ಕೆ ಸಂತಾಪ ಸೂಚಿಸಿರುವ ಮೋಹಕ ತಾರೆ ರಮ್ಯಾ, ಚಿತ್ರೋದ್ಯಮದಲ್ಲಿ ನಟಿಯರು ಅನುಭವಿಸುತ್ತಿರುವ ಕೆಲವೊಂದು ಜ್ವಲಂತ ಸಮಸ್ಯೆಗಳ ಬಗ್ಗೆ ಟ್ವೀಟ್ ಮೂಲಕ ಸ್ಫೋಟಕ ಮಾಹಿತಿ ಹಂಚಿಕೊಂಡಿದ್ದಾರೆ. ಇಂಡಸ್ಟ್ರಿಯಲ್ಲಿ ನಟಿಯರ ಸೌಂದರ್ಯಕ್ಕೆ ಸಂಬಂಧಿಸಿದಂತೆ ಕೆಲವೊಂದು ಅವಾಸ್ತವಿಕ ಮಾನದಂಡ ನಿಗದಿಪಡಿಸಲಾಗಿದ್ದು, ಇದರಿಂದ ನಟಿಯರು ಒತ್ತಡಕ್ಕೊಳಗಾಗುತ್ತಿದ್ದಾರೆಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ರಮ್ಯಾ ಟ್ವೀಟ್ನಲ್ಲಿ ಏನಿದೆ?: ಪ್ಲಾಸ್ಟಿಕ್ ಸರ್ಜರಿ ಬಳಿಕ ಯುವ ನಟಿ ನಿಧನರಾಗಿರುವ ಸುದ್ದಿ ಓದಿದೆ. 2018ರಲ್ಲಿ ನನ್ನ ಕಾಲಿನ ಟ್ಯೂಮರ್(ಗೆಡ್ಡೆ) ತೆಗೆಸಿದ ಬಳಿಕ ನಾನು ದಪ್ಪಗಾದೆ. ಈ ವೇಳೆ, ತೂಕ ಕಳೆದುಕೊಳ್ಳಲು ನಾನು ಸಹ ಒದ್ದಾಡಿದ್ದೇನೆ. ಆದರೆ, ನನಗೆ ಜೀವ ಕಳೆದುಕೊಂಡ ಈ ನಟಿ ಬಗ್ಗೆ ಸಹಾನುಭೂತಿಯಿದೆ ಎಂದರು. ಆದಷ್ಟು ಬೇಗ ತೂಕ ಕಳೆದುಕೊಳ್ಳಬೇಕು ಎಂಬ ಪ್ರಲೋಭನೆಗೆ ಒಳಗಾಗಿ ಜೀವ ಕಳೆದುಕೊಂಡಿರುವ ನಟಿಯ ಬಗ್ಗೆ ನನಗೆ ಸಹಾನುಭೂತಿ ಇದೆ. ಆದರೆ, ಈ ಮಾನದಂಡ ಇಂಡಸ್ಟ್ರಿಯಲ್ಲಿ ಪುರುಷರಿಗೆ ಅನ್ವಯವಾಗುವುದಿಲ್ಲ.ಇಂಡಸ್ಟ್ರೀಯಲ್ಲಿ ನಟಿಯರ ಪಾತ್ರದ ವಿಚಾರವಾಗಿ ಸುಧಾರಣೆ ಆಗಬೇಕಿದೆ ಎಂದರು.
- — Divya Spandana/Ramya (@divyaspandana) May 17, 2022 " class="align-text-top noRightClick twitterSection" data="
— Divya Spandana/Ramya (@divyaspandana) May 17, 2022
">— Divya Spandana/Ramya (@divyaspandana) May 17, 2022
ಇದೇ ವೇಳೆ ನಟನಾದವರು ಸಂಪೂರ್ಣವಾಗಿ ತಲೆಕೂದಲು ಇಲ್ಲದವರೂ ಆಗಿರಬಹುದು, ಟೋಪಿ ಹಾಕಿಕೊಳ್ಳಬಹುದು. ಮುಖದಲ್ಲಿನ ಒಂದೊಂದು ಗಲ್ಲ 5 ಕೆಜಿ ಇರಬಹುದು. 65 ವರ್ಷವಾದರೂ ಆತ ಹೀರೋ ಆಗುತ್ತಾನೆ. ಜೊತೆಗೆ ಡೊಳ್ಳುಹೊಟ್ಟೆ ಸಹ ಹೊಂದಿರಬಹುದು. ಆದರೆ, ಇದೇ ಮಹಿಳೆಗೆ ಅನ್ವಯವಾಗಿ ಆಕೆ ತೂಕ ಹೆಚ್ಚಿಸಿಕೊಂಡರೆ ಆಂಟಿ, ಬುಡ್ಡಿ, ಅಜ್ಜಿ ಎಂದು ಟ್ರೋಲ್ ಮಾಡಲಾಗುತ್ತದೆ ಎಂದು ರಮ್ಯಾ ವಾಗ್ದಾಳಿ ನಡೆಸಿದ್ದಾರೆ. ಮಹಿಳೆಯರು ಇದನ್ನ ಅರಿತುಕೊಳ್ಳಬೇಕು. ಹಾಗಿರಲು ಸಾಧ್ಯವಿಲ್ಲ. ನೀವು ನೀವಾಗಿಯೇ ಇರಬೇಕು ಎಂದಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಫ್ಯಾಟ್ ಸರ್ಜರಿ ವೇಳೆ ನಟಿ ಸಾವು
ದೇಹದ ಕೊಬ್ಬಿನಾಂಶ ತೆಗೆದು ಹಾಕುವ (ಫ್ಯಾಟ್) ಸರ್ಜರಿ ವೇಳೆ ಕಿರುತರೆ ನಟಿ ಸಾವನ್ನಪ್ಪಿದ್ದು, ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. 21 ವರ್ಷದ ಚೇತನಾ ರಾಜ್ ಸಾವನ್ನಪ್ಪಿದ್ದಾರೆ. ಪ್ಯಾಟ್ ಸರ್ಜರಿ ಮಾಡಿಸಿಕೊಳ್ಳಲು ಇವರು ನವರಂಗ್ ಸರ್ಕಲ್‌ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಸರ್ಜರಿ ವೇಳೆ ಶ್ವಾಸಕೋಶದಲ್ಲಿ ನೀರಿನ ಅಂಶ ಶೇಖರಣೆಯಾಗಿದ್ದರಿಂದ ಸಾವು ಸಂಭವಿಸಿದೆ ಎಂದು ಹೇಳಲಾಗಿದೆ.