ETV Bharat / entertainment

ಪ್ರಭಾಸ್ ನಟನೆ, ಪ್ರಶಾಂತ್ ನೀಲ್ ನಿರ್ದೇಶನ ಶೈಲಿಗೆ ಮನಸೋತ ನಟ ಚಿರಂಜೀವಿ - ಪ್ರಭಾಸ್​

ಸೌತ್​ ಸೂಪರ್ ಸ್ಟಾರ್ ಚಿರಂಜೀವಿ 'ಸಲಾರ್​' ತಂಡಕ್ಕೆ ಅಭಿನಂದನೆ ತಿಳಿಸಿದ್ದಾರೆ.

chiranjeevi congratulates salaar team
ಸಲಾರ್ ತಂಡಕ್ಕೆ ನಟ ಚಿರಂಜೀವಿ ಅಭಿನಂದನೆ
author img

By ETV Bharat Karnataka Team

Published : Dec 23, 2023, 4:30 PM IST

ಭಾರತೀಯ ಚಿತ್ರರಂಗದಲ್ಲೀಗ ಸಲಾರ್​ನದ್ದೇ ಸದ್ದು. ಪ್ರಶಾಂತ್ ನೀಲ್ ನಿರ್ದೇಶನ ಶೈಲಿಗೆ, ಪ್ರಭಾಸ್​ ಅಭಿನಯಕ್ಕೆ ಪ್ರೇಕ್ಷಕರ ಚಪ್ಪಾಳೆ ಸಿಕ್ಕಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಚಿತ್ರದಲ್ಲಿ ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್ ಮತ್ತು ಶ್ರುತಿ ಹಾಸನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ದಿನದ ಕಲೆಕ್ಷನ್​ ವಿಚಾರದಲ್ಲಿ ಇತ್ತೀಚಿನ ಅನಿಮಲ್, 2023ರ ಬ್ಲಾಕ್​ಬಸ್ಟರ್ ಜವಾನ್, ಪಠಾಣ್‌ನಂತಹ ಸಿನಿಮಾಗಳ ದಾಖಲೆಯನ್ನು ಪುಡಿಗಟ್ಟಿದೆ. 'ಸಲಾರ್​' ಒಂದೇ ದಿನದಲ್ಲಿ ಬರೋಬ್ಬರಿ 178 ಕೊಟಿ ರೂ. ಕಲೆಕ್ಷನ್​ ಮಾಡೋ ಮೂಲಕ ಸಿನಿಪ್ರಿಯರೂ ಸೇರಿದಂತೆ ಚಿತ್ರರಂಗದವರ ಹುಬ್ಬೇರಿಸಿದೆ. ಸಲಾರ್​​ ಕ್ರೇಜ್​ ಕಂಡ ದಕ್ಷಿಣ ಚಿತ್ರರಂಗದ ಹಿರಿಯ, ಜನಪ್ರಿಯ ನಟ ಚಿರಂಜೀವಿ ಅವರು ಪ್ರಭಾಸ್ ಸೇರಿದಂತೆ ಸಲಾರ್ ತಂಡಕ್ಕೆ ಅಭಿನಂದನೆ ತಿಳಿಸಿದ್ದಾರೆ.

ಸಲಾರ್ ತಂಡಕ್ಕೆ ಅಭಿನಂದನೆ: ನಟ ಚಿರಂಜೀವಿ ಅವರಿಂದು ಸೋಷಿಯಲ್​ ಮೀಡಿಯಾ ಪ್ಲಾಟ್​​​​​ಫಾರ್ಮ್ ಎಕ್ಸ್​​ನಲ್ಲಿ ಸಲಾರ್​​​ ಕುರಿತು ಪೋಸ್ಟ್​​ ಒಂದನ್ನು ಶೇರ್ ಮಾಡಿದ್ದಾರೆ. ಬಾಕ್ಸ್ ಆಫೀಸ್ ದಾಖಲೆಗಳನ್ನು ಉಡೀಸ್​​ ಮಾಡಿದ ಪ್ರಭಾಸ್ ಮತ್ತು ಸಂಪೂರ್ಣ ತಂಡವನ್ನು ಶ್ಲಾಘಿಸಿದ್ದಾರೆ. ನಿರ್ದೇಶಕ ಪ್ರಶಾಂತ್ ನೀಲ್ ಅವರ ಅಸಾಧಾರಣ ಜಗತ್ತನ್ನು ನಿರ್ಮಿಸುವ ನಿರ್ದೇಶನ ಶೈಲಿಗೆ ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೇ ಅಮೋಘ ಅಭಿನಯದ ಮೂಲಕ ಗಮನ ಸೆಳೆದಿರುವ ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್ ಮತ್ತು ಜಗಪತಿ ಬಾಬು ಸೇರಿದಂತೆ ಸಿನಿಮಾದ ಪಾತ್ರವರ್ಗಕ್ಕೆ ತಮ್ಮ ಅಭಿನಂದನೆ ತಿಳಿಸಿದ್ದಾರೆ. ಒಟ್ಟಾರೆ ಸಿನಿಮಾ ಸಿಬ್ಬಂದಿಯ ಅದ್ಭುತ ಕೆಲಸವನ್ನು ತುಂಬು ಹೃದಯದಿಂದ ಶ್ಲಾಘಿಸಿದರು.

ಎಕ್ಸ್​ ಪೋಸ್ಟ್​​ನಲ್ಲೇನಿದೆ? "ನನ್ನ ಪ್ರೀತಿಯ 'ದೇವ' ರೆಬೆಲ್ ಸ್ಟಾರ್ ಪ್ರಭಾಸ್ ಹೃದಯಪೂರ್ವಕ ಅಭಿನಂದನೆಗಳು. 'ಸಲಾರ್' ಬಾಕ್ಸ್​ ಆಫೀಸ್​ನಲ್ಲಿ ಬೆಂಕಿಯಿಟ್ಟಿದೆ. ಗಮನಾರ್ಹ ಸಾಧನೆಗಾಗಿ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ನನ್ನ ಅಭಿನಂದನೆಗಳು. ವಿಶ್ವ ನಿರ್ಮಾಣದಲ್ಲಿ ನೀವು ಉತ್ಕೃಷ್ಟರು. ಸೂಪರ್ಬ್ 'ವರದರಾಜ ಮನ್ನಾರ್' (ಪೃಥ್ವಿರಾಜ್​ ಸುಕುಮಾರನ್​), ಆದ್ಯ (ಶ್ರುತಿಹಾಸನ್) ಮತ್ತು 'ಕರ್ತಾ' (ಜಗಪತಿಬಾಬು), ನಿರ್ಮಾಪಕ ವಿಜಯ್​ ಕಿರಗಂದೂರು ಅವರಿಗೆ ನನ್ನ ಪ್ರೀತಿ ಇದೆ''. ಚಿತ್ರತಂಡದ ಹಲವರ ಹೆಸರನ್ನು ಉಲ್ಲೇಖಿಸಿ ಸಂಪೂರ್ಣ ತಂಡಕ್ಕೆ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಮೊದಲ ದಿನವೇ 175 ಕೋಟಿ ಗಳಿಸಿದ 'ಸಲಾರ್​'; ಬಾಕ್ಸ್ ಆಫೀಸ್ ದಾಖಲೆ ಉಡೀಸ್​!

ಚಿತ್ರದಲ್ಲಿ ಪ್ರಭಾಸ್ ದೇವನಾಗಿ, ಪೃಥ್ವಿರಾಜ್ ಸುಕುಮಾರನ್ ವರದರಾಜ ಮನ್ನಾರ್ ಆಗಿ, ಜಗಪತಿ ಬಾಬು ರಾಜಮನ್ನಾರ್ ಪಾತ್ರದಲ್ಲಿ ಮತ್ತು ಶ್ರುತಿ ಹಾಸನ್ ಆದ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಿಸಿರುವ ಈ ಚಿತ್ರದ ಸೌಂಡ್ ಟ್ರ್ಯಾಕ್​​ನ ಜವಾಬ್ದಾರಿಯನ್ನು ಕೆಜಿಎಫ್‌ನ ಸಂಗೀತಕ್ಕೆ ಹೆಸರಾದ ರವಿ ಬಸ್ರೂರ್ ಹೊತ್ತಿದ್ದಾರೆ.

ಇದನ್ನೂ ಓದಿ: ಭಾರತೀಯ ಚಿತ್ರರಂಗದಲ್ಲೇ ಅತಿ ಹೆಚ್ಚು ಕಲೆಕ್ಷನ್​ ಮಾಡಿದ 'ದಂಗಲ್​'ಗೆ 7 ವರ್ಷ; ಹಿಟ್​ ಲಿಸ್ಟ್ ಇಲ್ಲಿದೆ

ಸಿನಿಮಾದ ಮತ್ತೊಂದು ಭಾಗ ಮೂಡಿ ಬರೋದು ನಿಮಗೆ ತಿಳಿದಿರುವ ವಿಚಾರವೇ. ಎರಡನೇ ಭಾಗಕ್ಕೆ 'ಶೌರ್ಯಾಂಗ ಪರ್ವಂ' ಎಂಬ ಶೀರ್ಷಿಕೆ ಫೈನಲ್​ ಆಗಿದೆ. ಸಲಾರ್​ ಪಾರ್ಟ್ 1 ಡಿಸೆಂಬರ್​ 22 ರಂದು ಪಂಚ ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಬಾಕ್ಸ್ ಆಫೀಸ್‌ನಲ್ಲಿ ಶಾರುಖ್ ಖಾನ್ ಅವರ ಡಂಕಿಗೆ ಸ್ಪರ್ಧೆ ಕೊಡುತ್ತಿದೆ. ಮೊದಲ ದಿನ ಬರೋಬ್ಬರಿ 178 ಕೋಟಿ ರೂ. ಕಲೆಕ್ಷನ್​​ ಮಾಡಿದೆ. ಭಾರತದಲ್ಲೇ ಸುಮಾರು 95 ಕೋಟಿ ರೂ. ಕಲೆಕ್ಷನ್​ ಮಾಡಿ ಮುನ್ನುಗ್ಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.