ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ತಾಯಿ ಲಕ್ಷ್ಮಿದೇವಮ್ಮ ನಿಧನರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕೊನೆಯುಸಿರೆಳೆದಿದ್ದಾರೆ.
![actor-arjun-sarja-mother-lakshmidevamma-no-more](https://etvbharatimages.akamaized.net/etvbharat/prod-images/15903852_thumb555.jpg)
ಪ್ರಖ್ಯಾತ ನಟ ಶಕ್ತಿಪ್ರಸಾದ್ ಅವರ ಪತ್ನಿಯಾಗಿರುವ ಲಕ್ಷ್ಮಿದೇವಮ್ಮ, ಬೆಂಗಳೂರಿನ ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪಾರ್ಥಿವ ಶರೀರವನ್ನು ಅಪೋಲೋ ಆಸ್ಪತ್ರೆಯಿಂದ ಅರ್ಜುನ್ ಸರ್ಜಾ ಅವರ ನಿವಾಸಕ್ಕೆ ಶಿಫ್ಟ್ ಮಾಡಲು ಸಿದ್ಧತೆ ನಡೆಸಲಾಗಿದೆ.
![actor-arjun-sarja-mother-lakshmidevamma-no-more](https://etvbharatimages.akamaized.net/etvbharat/prod-images/15903852_thumb44555.jpg)
ಸದ್ಯ ಮೂಲಗಳ ಪ್ರಕಾರ ಲಕ್ಷ್ಮಿ ದೇವಮ್ಮ ಅವರ ಅಂತ್ಯ ಸಂಸ್ಕಾರಕ್ಕೂ ಕುಟುಂಬಸ್ಥರು ಸಿದ್ದತೆ ಮಾಡಿಕೊಂಡಿದ್ದು, ಅಂತ್ಯ ಸಂಸ್ಕಾರ ಎಲ್ಲಿ ಮಾಡಬೇಕೆಂಬ ಬಗ್ಗೆ ಮಾತುಕತೆ ಆಗುತ್ತಿದೆ. ಇನ್ನು, ಕೆಲ ತಿಂಗಳ ಹಿಂದೆ ಅರ್ಜುನ್ ಸರ್ಜಾ, ತಮ್ಮ ಮಾವ, ಕಲಾತಪಸ್ವಿ ಎಂದು ಖ್ಯಾತರಾಗಿದ್ದ ನಟ ರಾಜೇಶ್ ಅವರನ್ನು ಕಳೆದುಕೊಂಡಿದ್ದರು. ಫೆಬ್ರವರಿಯಲ್ಲಿ ಅನಾರೋಗ್ಯದ ಕಾರಣದಿಂದ ರಾಜೇಶ್ ವಿಧಿವಶರಾಗಿದ್ದರು. ಆ ನೋವಿನಿಂದ ಹೊರ ಬರುವ ಮೊದಲೇ, ಸರ್ಜಾ ತಾಯಿ ಅವರು ವಿಧಿವಶರಾಗಿದ್ದಾರೆ.