ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಜುಲೈ 28ರಂದು ವಿಶ್ವಾದ್ಯಂತ ಬಿಡುಗಡೆಯಾಗಲು ಸಜ್ಜಾಗಿದೆ. ಚಿತ್ರಕ್ಕೆ ಇದೀಗ ಬಾಲಿವುಡ್ನ ಜನಪ್ರಿಯ ಹಿರಿಯ ನಟ ಅಮಿತಾಬ್ ಬಚ್ಚನ್ ಬೆಂಬಲ ಸಿಕ್ಕಿದೆ.
ಟ್ವಿಟರ್ ಮೂಲಕ 'ವಿಕ್ರಾಂತ್ ರೋಣ'ದ ಎಲ್ಲ ಭಾಷೆಯ ಟ್ರೈಲರ್ ಶೇರ್ ಮಾಡಿರುವ ಅವರು, ಕನ್ನಡದ ಸ್ಟಾರ್ ನಟ ಸುದೀಪ್ ನಟನೆಯ ಸಿನಿಮಾ ಐದು ಭಾಷೆಗಳಲ್ಲಿ ಜುಲೈ 28ರಂದು ರಿಲೀಸ್ ಆಗಲಿದೆ. ಅಭಿಮಾನಿಗಳು ಚಿತ್ರ ವೀಕ್ಷಿಸುವಂತೆ ಮನವಿ ಮಾಡಿದ್ದಾರೆ. ಬಚ್ಚನ್ ಟ್ವೀಟ್ಗೆ ಸುದೀಪ್ ಧನ್ಯವಾದ ತಿಳಿಸಿದ್ದಾರೆ.
-
T 4331 - Kannada star SUDEEP .. a pan india film VIKRANT RONA in 3 D .. releasing in 5 languages on July 28 th https://t.co/fWdBFkmjT7
— Amitabh Bachchan (@SrBachchan) June 27, 2022 " class="align-text-top noRightClick twitterSection" data="
">T 4331 - Kannada star SUDEEP .. a pan india film VIKRANT RONA in 3 D .. releasing in 5 languages on July 28 th https://t.co/fWdBFkmjT7
— Amitabh Bachchan (@SrBachchan) June 27, 2022T 4331 - Kannada star SUDEEP .. a pan india film VIKRANT RONA in 3 D .. releasing in 5 languages on July 28 th https://t.co/fWdBFkmjT7
— Amitabh Bachchan (@SrBachchan) June 27, 2022
ಸುದೀಪ್ ಹಾಗೂ ಅಮಿತಾಬ್ ಬಚ್ಚನ್ ಈ ಹಿಂದೆ ರಾಮ್ಗೋಪಾಲ್ ವರ್ಮಾ ನಿರ್ದೇಶನದ ಹಿಂದಿಯ 'ರಣ್' ಸಿನಿಮಾದಲ್ಲಿ ನಟಿಸಿದ್ದರು.
ವಿಕ್ರಾಂತ್ ರೋಣಾದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್, ನಿರೂಪ್ ಭಂಡಾರಿ ಹಾಗೂ ನೀತಾ ಅಶೋಕ್ ಅಭಿನಯಿಸಿದ್ದಾರೆ. ಕನ್ನಡದ ಜೊತೆಗೆ ಹಿಂದಿ, ತಮಿಳು, ತೆಲುಗು ಹಾಗೂ ಇಂಗ್ಲಿಷ್ ಭಾಷೆಗಳಲ್ಲೂ ಸಿನಿಮಾ ತೆರೆ ಕಾಣಲಿದೆ.
ಇದನ್ನೂ ಓದಿ: 'ವಿಕ್ರಾಂತ್ ರೋಣ' ಟ್ರೈಲರ್‌ಗೆ ಶಿವಣ್ಣ, ರವಿಚಂದ್ರನ್, ರಮೇಶ್ ಅರವಿಂದ್ ಫಿದಾ! ಹೇಳಿದ್ದೇನು?- ವಿಡಿಯೋ
ಕನ್ನಡ ಚಿತ್ರರಂಗವಲ್ಲದೇ ಭಾರತೀಯ ಸಿನಿಮಾರಂಗದ ಬಹುನಿರೀಕ್ಷಿತ ಸಿನಿಮಾ 'ವಿಕ್ರಾಂತ್ ರೋಣ'ದಲ್ಲಿ ಕಿಚ್ಚ ಸುದೀಪ್ ಡೇರಿಂಗ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ 'ರಾ ರಾ ರಕ್ಕಮ್ಮ..' ಹಾಡು ಈಗಾಗಲೇ ಭಾರಿ ಸದ್ದು ಮಾಡಿದೆ.