ಹಿಂದಿ ಚಿತ್ರರಂಗದ ಖ್ಯಾತ, ಹಿರಿಯ ನಟ ಅಮಿತಾಭ್ ಬಚ್ಚನ್ ಅವರು ತಮ್ಮ ಮುಂದಿನ ಚಿತ್ರದ ಚಿತ್ರೀಕರಣ ವೇಳೆ ಗಾಯಗೊಂಡಿದ್ದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ಇತ್ತೀಚೆಗೆ ನಾಗ್ ಅಶ್ವಿನ್ ನಿರ್ದೇಶನದ 'ಪ್ರಾಜೆಕ್ಟ್ ಕೆ' ಸಿನಿಮಾ ಸೆಟ್ನಲ್ಲಿ ಗಾಯಗೊಂಡ ಅವರನ್ನು ಕೂಡಲೇ ಹೈದರಾಬಾದ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಸದ್ಯ ವೈದ್ಯರ ಸಲಹೆ ಸೂಚನೆ ಮೇರೆಗೆ ವಿಶ್ರಾಂತಿ ಪಡೆಯುತ್ತಿರುವ ಬಿಗ್ ಬಿ ಸಾಮಾಜಿಕ ಮಾಧ್ಯ ವೇದಿಕೆಗಳಲ್ಲಿ ತಮ್ಮ ಅಭಿಮಾನಿಗಳಿಗಾಗಿ ಆರೋಗ್ಯದ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ.
ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರು ನಿನ್ನೆ ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ತಮ್ಮ ಅಭಿಮಾನಿಗಳು ಮತ್ತು ಹಿತೈಷಿಗಳಿಗೆ ಹೋಳಿ ಹಬ್ಬದ ಶುಭಾಶಯ ಕೋರಿದ್ದರು. ಇಂದು ತಾವು ಹೋಳಿ ಹಬ್ಬವನ್ನು ಎಷ್ಟರ ಮಟ್ಟಿಗೆ ಮಿಸ್ ಮಾಡಿಕೊಂಡರು ಎಂಬುದನ್ನು ತಿಳಿಸಿದ್ದಾರೆ. ಸದ್ಯ ಎಲ್ಲಾ ರೀತಿಯ ದೈಹಿಕ ಚಟುವಟಿಕೆಗಳಿಗೆ ತಡೆ ಇದೆ, ಹಬ್ಬಗಳಲ್ಲಿ ಪಾಲ್ಗೊಳ್ಳಲು ಅಸಮರ್ಥವಾಗಿದ್ದೇನೆ ಎಂದು ತಿಳಿಸಿದ್ದಾರೆ.
ದೀಪಾವಳಿ ಮತ್ತು ಹೋಳಿ ಸೇರಿದಂತೆ ಹಬ್ಬದ ದಿನಗಳಲ್ಲಿ ಬಚ್ಚನ್ ಕುಟುಂಬ ತಮ್ಮ ಮನೆಯಲ್ಲಿ ಸ್ನೇಹಿತರು ಮತ್ತು ಸಹೋದ್ಯೋಗಿಗಳಿಗೆ ಅದ್ಧೂರಿ ಪಾರ್ಟಿ ನೀಡುತ್ತಾರೆ. ಆ ವಿಚಾರವನ್ನು ಉಲ್ಲೇಖಿಸಿ ಬ್ಲಾಗ್ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ಅಮಿತಾಭ್, "ತೆರೆದ ಮನೆ, ಎಲ್ಲರಿಗೂ ಸ್ವಾಗತ, ಸಂಗೀತ ಮತ್ತು ನೃತ್ಯ ಸೇರಿದಂತೆ ಎಲ್ಲಾ ಸಂಭ್ರಮಗಳು, ಮುಂಜಾನೆ ಆರಂಭಗೊಂಡು ಮುಂದಿನ ದಿನ ಬೆಳಗಾಗುವವರೆಗೆ ಅಂತ್ಯವಿಲ್ಲದ ಸಂಭ್ರಮದಲ್ಲಿ, ಆ ಸಮಯಗಳು ಮತ್ತೆಂದೂ ಬರದಿರಬಹುದು. ಆದ್ರೆ ಅವರು ಮಾಡುತ್ತಾರೆ (ತಮ್ಮ ಕುಟುಂಬ) ಎಂದು ನಾನು ಭಾವಿಸುತ್ತೇನೆ, ಸದ್ಯದ ಪರಿಸ್ಥಿತಿಗೆ ಕಷ್ಟಕರವಾಗಿದೆ ಎಂದು ಬರೆದುಕೊಂಡಿದ್ದಾರೆ.
ಅಮಿತಾಭ್ ಬಚ್ಚನ್ ಅವರು ತಮ್ಮ ಅಭಿಮಾನಿಯೊಬ್ಬರಿಂದ ಮೆಚ್ಚುಗೆಯ ಪತ್ರವನ್ನು ಸ್ವೀಕರಿಸಿದ್ದು, ಆ ವೇಳೆ ತಮ್ಮ ತಂದೆ, ಕವಿ, ದಿ. ಹರಿವಂಶ್ ರೈ ಬಚ್ಚನ್ (Harivansh Rai Bachchan) ಅವರ ಮಾತುಗಳನ್ನು ಉಲ್ಲೇಖಿಸಿದರು. "ನನ್ನ ಕೆಲಸದ ತಪ್ಪುಗಳು, ಇಷ್ಟವಿಲ್ಲದ ಅಂಶಗಳು ಏನೆಂದು ನನಗೆ ತಿಳಿಸಿ. ನನ್ನ ಕೆಲಸದ ತೇಜಸ್ಸು ಮತ್ತು ಒಳ್ಳೆಯದನ್ನು ಇತರರಿಗೆ ತಿಳಿಸಿ" ಎಂಬ ಬರಹವನ್ನು ಹರಿವಂಶ್ ಬರೆದಿದ್ದರು. ತಮ್ಮ ತಂದೆಯ ಗುಣಗಳಿಂದ ಪ್ರಭಾವಿತರಾಗಿರುವ ಅಮಿತಾಭ್, ತಮ್ಮನ್ನು ವಿವರಿಸಲು ಬಳಸುವ 'ಅದ್ಭುತ ಪದಗಳನ್ನು' ಇಷ್ಟಪಡುವುದಿಲ್ಲ ಎಂದು ಸಹ ತಿಳಿದ್ದಾರೆ.
ಇದನ್ನೂ ಓದಿ: ಶಾರುಖ್ ಖಾನ್ ಜೊತೆ ನಟಿಸಲು ರಾಜಸ್ಥಾನಕ್ಕೆ ಹಾರಲಿದ್ದಾರೆ ಸೌತ್ ಬ್ಯೂಟಿ ನಯನತಾರಾ
ನನ್ನ ಅನಾರೋಗ್ಯ ಸ್ಥಿತಿ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ, ಪ್ರೀತಿ ವ್ಯಕ್ತಪಡಿಸುತ್ತೇನೆ. ನಿಮ್ಮ ಪ್ರಾರ್ಥನೆಗೆ ನಾನು ಆಭಾರಿ. ನನ್ನ ಮೇಲೆ ಪ್ರೀತಿಯ ಮಳೆಗೈದ ಎಲ್ಲರಿಗೂ ನನ್ನ ಕೃತಜ್ಞತೆ. ಸದ್ಯ ಚೇತರಿಸಿಕೊಳ್ಳುತ್ತಿದ್ದೇನೆ. ಸಂಪೂರ್ಣವಾಗಿ ಸುಧಾರಿಸಲು ಸಮಯ ಹಿಡಿಯುತ್ತದೆ ಎಂದು ಅಮಿತಾಭ್ ಅವರು ತಮ್ಮ ಬ್ಲಾಗ್ನಲ್ಲಿ ನಿನ್ನೆ ಬರೆದುಕೊಂಡಿದ್ದರು.
ಇದನ್ನೂ ಓದಿ: 'ನೋವಿನಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ': ಅಮಿತಾಭ್ ಬಚ್ಚನ್