ನವದೆಹಲಿ: ರಾಜ ಪೃಥ್ವಿರಾಜ್ ಚೌಹಾಣ್ ಕುರಿತ ಐತಿಹಾಸಿಕ ಸಿನಿಮಾ 'ಸಾಮ್ರಾಟ್ ಪೃಥ್ವಿರಾಜ್'ನಲ್ಲಿ ನಟ ಅಕ್ಷಯ್ ಕುಮಾರ್ ನಟನೆ ಮಾಡಿದ್ದು, ಹಿಂದಿ ಮಾತ್ರವಲ್ಲದೇ, ತೆಲುಗು, ತಮಿಳು ಭಾಷೆಗೂ ಡಬ್ ಆಗಿರುವ ಈ ಚಿತ್ರ ನಾಡಿದ್ದು,(ಜೂನ್ 3) ತೆರೆಗೆ ಬರುತ್ತಿದೆ. ಇದರ ಬೆನ್ನಲ್ಲೇ ನಟ ಅಕ್ಷಯ್ ಕುಮಾರ್ ಎಎನ್ಐ ಸುದ್ದಿಸಂಸ್ಥೆ ಜೊತೆ ಮಾತನಾಡಿದ್ದಾರೆ.
ದುರದೃಷ್ಟವಶಾತ್, ನಮ್ಮ ಇತಿಹಾಸದ ಪಠ್ಯಪುಸ್ತಕಗಳಲ್ಲಿ ಸಾಮ್ರಾಟ್ ಪೃಥ್ವಿರಾಜ್ ಚೌಹಾಣ್ ಅವರ ಬಗ್ಗೆ ಕೇವಲ 2-3 ಸಾಲು ಮಾತ್ರ ಉಲ್ಲೇಖವಾಗಿವೆ. ಆದರೆ, ಆಕ್ರಮಣಕಾರರ ಬಗ್ಗೆ ಸಾಕಷ್ಟು ಉಲ್ಲೇಖಿಸಲಾಗಿದೆ. ನಮ್ಮ ಸಂಸ್ಕೃತಿ ಮತ್ತು ಮಹಾರಾಜರ ಬಗ್ಗೆ ಏನೂ ಉಲ್ಲೇಖ ಮಾಡಿಲ್ಲ ಎಂದು ಅಕ್ಷಯ್ ಕುಮಾರ್ ತಿಳಿಸಿದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾವು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಗುರುತಿಸಿಕೊಳ್ಳಲು ಮುಖ್ಯ ಕಾರಣ ಪ್ರಧಾನಿ. ಅವರಿಗೆ ನನ್ನ ಧನ್ಯವಾದಗಳು. ನಮ್ಮ ದೇಶ ಬದಲಾಗುತ್ತಿದ್ದು, ಭಾರತೀಯ ಚಲನಚಿತ್ರೋದ್ಯಮ ಜಾಗತಿಕ ಮಟ್ಟಕ್ಕೆ ತಲುಪಿದೆ ಎಂದರು. ಯಾವಾಗಲೂ ನಾವು ನಮ್ಮನ್ನ ಶಾಂತವಾಗಿರಿಸಿಕೊಳ್ಳಬೇಕು. ನಮ್ಮ ಜೀವನ ಶೈಲಿಯಲ್ಲಿ ಬದಲಾಯಿಸಿಕೊಳ್ಳಬೇಕು. ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಕನಿಷ್ಠ ಎರಡು ವರ್ಷಗಳ ಕಾಲ ನಾವು ಜೀವನದ ವಿಪರೀತ ಏರಿಳಿತ ಕಂಡಿದ್ದೇವೆ ಎಂದರು.
ಇದನ್ನೂ ಓದಿ: 'ಜೀವನ ಎಷ್ಟೊಂದು ದುರ್ಬಲ ಎಂಬುದಕ್ಕೆ ಮತ್ತೊಂದು ಉದಾಹರಣೆ': ಗಾಯಕ ಕೆಕೆ ನಿಧನಕ್ಕೆ ಗಣ್ಯರ ಕಂಬನಿ
ಇದೇ ವೇಳೆ ಕೆಕೆ ಅವರ ಹಠಾತ್ ನಿಧನದ ಬಗ್ಗೆ ಮಾತನಾಡಿರುವ ನಟ ಅಕ್ಷಯ್ ಕುಮಾರ್, ಅವರು ನನ್ನ ವೃತ್ತಿ ಜೀವನದ ಪ್ರಮುಖ ಭಾಗವಾಗಿದ್ದರು. ನನ್ನ ಸಿನಿಮಾಗಳಲ್ಲಿ ಅನೇಕ ಹಾಡು ಹಾಡಿದ್ದಾರೆ. ನಿನ್ನೆ ರಾತ್ರಿ ನಡೆದ ಘಟನೆ ತುಂಭಾ ಆಘಾತಕಾರಿ ಸಂಗತಿ. ನಮ್ಮ ಬಹಳಷ್ಟು ಗಾಯಕರನ್ನ ಕರೆದುಕೊಳ್ಳುತ್ತಿರುವುದು ತುಂಬಾ ದುಃಖಕರ ಎಂದು ಹೇಳಿದರು. ನಾವು ಸಿನಿಮಾ ಮಾಡುವಾಗ ಇತಿಹಾಸವನ್ನ ವ್ಯತಿರಿಕ್ತವಾಗಿ ಮಾಡಲು ಸಾಧ್ಯವಿಲ್ಲ. ಚಿತ್ರದ ಬಗ್ಗೆ ಯಾವುದೇ ವಿವಾದಗಳು ಬಂದರೂ ಸ್ವಾಗತಾರ್ಹ. ಏಕೆಂದರೆ ಅದು ಚರ್ಚೆಗೆ ಅವಕಾಶ ಮಾಡಿಕೊಡುತ್ತದೆ ಎಂದು ಚಿತ್ರದ ನಿರ್ದೇಶಕ ಚಂದ್ರಪ್ರಕಾಶ್ ದ್ವಿವೇದಿ ಹೇಳಿದರು.
-
#WATCH | Unfortunately, our history textbooks only have 2-3 lines about Samrat Prithviraj Chauhan, but a lot has been mentioned about the invaders. There is hardly anything mentioned about our culture and our Maharajas: Actor Akshay Kumar to ANI pic.twitter.com/qnKacpylLv
— ANI (@ANI) June 1, 2022 " class="align-text-top noRightClick twitterSection" data="
">#WATCH | Unfortunately, our history textbooks only have 2-3 lines about Samrat Prithviraj Chauhan, but a lot has been mentioned about the invaders. There is hardly anything mentioned about our culture and our Maharajas: Actor Akshay Kumar to ANI pic.twitter.com/qnKacpylLv
— ANI (@ANI) June 1, 2022#WATCH | Unfortunately, our history textbooks only have 2-3 lines about Samrat Prithviraj Chauhan, but a lot has been mentioned about the invaders. There is hardly anything mentioned about our culture and our Maharajas: Actor Akshay Kumar to ANI pic.twitter.com/qnKacpylLv
— ANI (@ANI) June 1, 2022
ಬರೋಬ್ಬರಿ 200 ಕೋಟಿ ರೂಪಾಯಿಗೂ ಅಧಿಕ ಬಂಡವಾಳ ಹೂಡಿ ಯಶ್ ರಾಜ್ ಫಿಲ್ಮ್ಸ್ ಈ ಸಿನಿಮಾ ನಿರ್ಮಾಣ ಮಾಡಿದೆ. ಚಂದ್ರಪ್ರಕಾಶ್ ದ್ವಿವೇದಿ ಈ ಸಿನಿಮಾಕ್ಕೆ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಅಕ್ಷಯ್‌ಗೆ ನಾಯಕಿಯಾಗಿ ಮಾನುಷಿ ಚಿಲ್ಲರ್ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಸಂಜಯ್ ದತ್, ಸೋನು ಸೂದ್, ಅಶುತೋಷ್ ರಾಣಾ ಕೂಡ ಈ ಸಿನಿಮಾದಲ್ಲಿ ಇದ್ದಾರೆ.